ಮಂಗಳೂರು, ಫೆ. ೧೭: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಕಡೆ ಸಂಭವಿಸಿದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ವಿಶೇಷ ಸಭೆ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ಅಧ್ಯಕ್ಷತೆಯಲ್ಲಿ ನಡೆಸಿತು.
ಸುಮಾರು ೧೫೦ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದು, ಅಹಿತಕರ ಘಟನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಸಮುದಾಯದ ಗಣ್ಯರ ಅಭಿಪ್ರಾಯವನ್ನು ಆಲಿಸಿದ ಅಧ್ಯಕ್ಷರು ಶೀಘ್ರದಲ್ಲೇ ಉಭಯ ಜಿಲ್ಲೆಗಳ ಪ್ರಮುಖರ ಮತ್ತು ಮಸೀದಿಗಳ ಅಧ್ಯಕ್ಷರ, ಪ್ರಧಾನ ಕಾರ್ಯದರ್ಶಿಗಳ ಹಾಗು ಖತೀಬರ ಸಮಾವೇಶ ನಡೆಸುವ ಆಶ್ವಾಸನೆ ನೀಡಿದರು.
ಸಭೆಯಲ್ಲಿ ಶಾಸಕ ಯು.ಟಿ.ಖಾದರ್, ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ,. ಉಪಾಧ್ತಕ್ಷರಾದ ಹಾಜಿ ಹಮೀದ್ ಕಂದಕ್, ಹಾಜಿ ಮುಮ್ತಾಝ್ ಆಲಿ, ಪತ್ರಿಕಾ ಕಾರ್ಯದರ್ಶಿ ಅಬೂಬಕ್ಕರ್ ಕುದ್ರೋಳಿ, ಡಿ.ಎಂ. ಅಸ್ಲಂ, ಸಿ.ಎಂ. ಮುಸ್ತಫಾ, ಅಹಮದ್ ಬಾವಾ ಬಜಾಲ್, ಹಾಜಿ ರಿಯಾಝ್ ಬಾವ, ಹಾಜಿ ಡಾ. ಕೆ. ಹಮೀದ್, ಕೆ.ಎಂ. ಶರೀಫ್, ಅಬ್ದುಲ್ ರಹಿಮಾನ್ ಭಟ್ಕಳ್, ಮದೀನಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಅನೀಸ್, ಹಾಜಿ ಜೆ.ಎಂ. ಮುಹಮ್ಮದ್ ಜೋಕಟ್ಟೆ, ಕೆ.ಎಂ. ಹಾಜಿ, ಅಬ್ದುಲ್ ರವೂಫ್ ಪುತ್ತಿಗೆ, ಕುಂಜತ್ತಬೈಲ್ ಮುಹಮ್ಮದ್, ಸಲೀಂ, ಅನ್ವರ್ ಸಾದಾತ್ ಪಾಲ್ಗೊಂಡಿದ್ದರು.
ಉಪಾಧ್ಯಕ್ಷ ಅಲ್ಹಾಜ್ ಇಬ್ರಾಹಿಂ ಕೋಡಿಜಾಲ್ ಸ್ವಾಗತಿಸಿದರು. ಬದ್ರಿಯಾ ಜುಮ್ಮಾ ಮಸೀದಿಯ ಇಮಾಮ್ ಶೇಖಬ್ಬ ಮುಸ್ಲಿಯಾರ್ ದುವಾ ನೆರವೇರಿಸಿದರು.