ಭಟ್ಕಳ:ಭಟ್ಕಳ ದಿಂದ ಮುರುಡೇಶ್ವರಕ್ಕೆ ಹೋಗುವ ಮಾರ್ಗದಲ್ಲಿ ವೆಂಕಟಾಪೂರ ಐಸ್ ಫ್ಯಾಕ್ಟರಿ ಸಮಿಪ ರಾ.ಹೆ.೧೭ ರಲ್ಲಿ ಇಂದು ಮಧ್ಯಾಹ್ನ ಅಪರಿಚಿತ ಮೃತದೇಹ ಪತ್ತೆಯಾಗಿದ್ದು ಯಾವುದೋ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿರಬಹುದೆಂದು ಶಂಕಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸಿ. ಪಿ.ಐ ಗುರುಮತ್ತೂರು, ನಗರ ಠಾಣೆಯ ಪಿ.ಎಸ್.ಐ ಮಂಜುನಾಥ್ ಗೌಡ ಹಾಗೂ ಗ್ರಾಮೀಣ ಪೋಲಿಸ್ ಠಾಣೆಯ ಸಿಬ್ಬಂಧಿಗಳು ತೆರಳಿ ಪರಿಶೀಲನೆ ನಡೆಸಿದರು. ನಂತರ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಶವದ ಪಂಚನಾಮೆಯನ್ನು ನಡೆಸಿದ್ದಾರೆ. ಪ್ರಕರಣ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.