ಫೆಬ್ರುವರಿ 25, 2010ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗಳು ಮತ್ತೆ ಆರಂಭವಾಗಿವೆ. ಈ ಹಿಂದೆ ನಾಲ್ಕು ಸುತ್ತುಗಳಲ್ಲಿ ನಡೆದಿದ್ದ ಸಂಯೋಜಿತ ದ್ವಿಪಕ್ಷೀಯ ಮಾತುಕತೆಗಳು 2007ರಲ್ಲಿ ಭಾರತದಲ್ಲಿ ಗಡಿಯಾಚೆಯ ಭಯೋತ್ಪಾದನಾ ಚಟುವಟಿಕೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಕಡಿದು ಹೋಗಿದ್ದವು. ಈಗ ಮಾರ್ಚ್ 2010ರಲ್ಲಿ ಇಸ್ಲಾಮಾಬಾದಿನಲ್ಲಿ ಇದೇ ಮಟ್ಟದ ಇನ್ನೊಂದು ಸಭೆ ನಡೆಲಿದೆ ಎಂದು ವರದಿಗಳು ಸೂಚಿಸುತ್ತಿವೆ. ಅಂದರೆ ಭಾರತ ಭಯೋತ್ಪಾದನೆಯ ಮೇಲೆ ದೃಢ ಕ್ರಮ ಏಕೆ ಅಗತ್ಯವಾಗಿದೆ ಎಂದು ಮಾತುಕತೆಗಳ ಮೂಲಕ ಆಗ್ರಹಿಸಲು ನಿರ್ಧರಿಸಿದೆ ಎಂಬುದು ಸ್ಪಷ್ಟವಾಗುತ್ತದೆ. ಇದು ಸರಿಯಾದದ್ದೇ.
ಮುಂಬೈ ಭಯೋತ್ಪಾದಕ ದಾಳಿಗಳನ್ನು ಎಸಗಿದವರನ್ನು ತ್ವರಿತವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಶಿಕ್ಷಿಸಲು ಮತ್ತು ದಾಳಿಯ ಹಿಂದಿರುವ ಪೂರ್ಣ ಪಿತೂರಿಯನ್ನು ಅನಾವರಣಗೊಳಿಸಲು ಪಾಕಿಸ್ತಾನ ಕೈಗೊಂಡಿರುವ ಕ್ರಮಗಳು ಏನೂ ಸಾಲವು ಎಂದು ಭಾರತ ತಿಳಿಸಿರುವುದಾಗಿ ವರದಿಯಾಗಿದೆ. ಅಲ್ಲದೆ ಜಮಾತ್ ಉದ್-ದುವ ಮುಂತಾದ ಭಾರತದ ವಿರುದ್ಧ ಹಿಂಸಾಚಾರ ಮತ್ತು ಭಯೋತ್ಪಾದನೆಯ ಅಜೆಂಡಾವನ್ನು ಬಹಿರಂಗವಾಗಿಯೆ ಘೋಷಿಸಿರುವ ಸಂಘಟನೆಗಳ ವಿರುದ್ಧ ಪರಿಣಾಮಕಾರಿ ಕಾಯರ್ಾಚರಣೆಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನೂ ಭಾರತ ಒತ್ತಿ ಹೇಳಿದೆ. ಪಾಕಿಸ್ತಾನ ಮತ್ತು ಅದರ ರಾಜಕೀಯ ಮುಖಂಡತ್ವ ತನ್ನ ನೆಲವನ್ನು ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲು ಅವಕಾಶ ಕೊಡುವುದಿಲ್ಲ ಎಂದು ಮತ್ತೆ-ಮತ್ತೆ ಭರವಸೆ ನೀಡಿದ್ದರೂ ಪಾಕಿಸ್ತಾನದ ಪ್ರದೇಶಗಳಲ್ಲಿ ಭಯೋತ್ಪಾದನೆಯ ಮೂಲ ಪರಿಕರಗಳು ಇನ್ನೂ ಮುಂದುವರೆದಿವೆ, ಅವನ್ನು ಇದುವರೆಗೂ ಕಳಚಿ ಹಾಕಿಲ್ಲ. ಪಾಕಿಸ್ತಾನ ಇಂತಹ ಕ್ರಮಗಳನ್ನು ಕೈಗೊಂಡು, ಎರಡೂ ದೇಶಗಳ ನಡುವೆ ನಂಬಿಕೆ ಮತ್ತು ವಿಶ್ವಾಸದ ವಾತಾವರಣ ನಿರ್ಮಾಣವಾದರೆ ಮಾತ್ರವೇ ಸಂಯೋಜಿತ ಮಾತುಕತೆಗಳು ಪುನರಾರಂಭವಾಗಲು ಸಾಧ್ಯ ಎಂದು ಭಾರತ ಪುನರುಚ್ಚರಿಸಿರುವುದು ಸರಿಯಾದದ್ದೇ. ಭಯೋತ್ಪಾದನೆ ಕುರಿತ ಆತಂಕ
ಈ ಮಾತುಕತೆಗಳ ವಿರುದ್ಧ ಭಯೋತ್ಪಾದನೆಗೆ ಅನುಕೂಲ ಕಲ್ಪಿಸಿಕೊಡುವ ವಿವಿಧ ವಲಯಗಳಿಂದ ಸತತ ಪ್ರಯತ್ನಗಳು ನಡೆದರೂ ಅವು ಪುನರಾರಂಭಗೊಂಡಿವೆ. ಪಾಕಿಸ್ತಾನದೊಡನೆ ಸಂವಾದ ನಡೆಸಲು ಭಾರತಕ್ಕೆ ಮನಸ್ಸಿಲ್ಲ ಎಂದೇ ವ್ಯಾಖ್ಯಾನ ಮಾಡುವವರಿದ್ದಾರೆ. ಅವರು ಇದನ್ನು ಪಾಕಿಸ್ತಾನ ತನ್ನ ಪಶ್ಚಿಮ ಗಡಿಗಳಲ್ಲಿ ತಾಲಿಬಾನ್ ಚಟುವಟಿಕೆಗಳ ವಿರುದ್ದ ನಡೆಸಿರುವ ಪ್ರಯತ್ನಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಮತ್ತು ದುರ್ಬಲಗೊಳಿಸಲು ಒಮ್ಮೊಮ್ಮೆ ಬಳಸಿಕೊಳ್ಳುತ್ತಾರೆ. ಕಳೆದ ವಾರ ಕಾಬೂಲಿನಲ್ಲಿ ಭಾರತೀಯರ ಭೀಕರ ಕೊಲೆಗಳು, ಈ ಹಿಂದೆ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿಗಳು ತಾಲಿಬಾನ್ ಕೂಡಾ ಲಷ್ಕರ್-ಎ-ತೈಬ ಅಥವ ಇತರ ಭಯೋತ್ಪಾದಕ ಸಂಘಟನೆಗಳಂತೆಯೇ ಭಾರತ-ವಿರೋಧಿಯಾಗಿದೆ ಎಂದು ತೋರಿಸುತ್ತದೆ. ಪಾಕಿಸ್ತಾನದಲ್ಲಿ ಮಾತುಕತೆಗಳು ಪುನರಾರಂಭಗೊಂಡಿರುವುದು ಪಶ್ಚಿಮ ಗಡಿಯಲ್ಲಿ ತಾಲಿಬಾನನ್ನು ಎದುರಿಸುವುದನ್ನು ಕುರಿತಂತೆ ಇರುವ ಇತ್ತೀಚಿನ ಸುಳ್ಳನ್ನು ಬಯಲು ಮಾಡಿದೆ.
ಸಂಸತ್ತಿಗೆ ಈ ಬಗ್ಗೆ ತಿಳಿಸುತ್ತಾ ವಿದೇಶಾಂಗ ವ್ಯವಹಾರಗಳ ಮಂತ್ರಿಗಳು `ಒಂದು ಮುಚ್ಚುಮರೆಯಿಲ್ಲದ, ರಚನಾತ್ಮಕ ಮತ್ತು ಪ್ರಯೋಜನಕಾರಿ ಮಾತುಕತೆಯನ್ನು‘ ನಡೆಸಲಾಗಿದೆ ಎಂದಿದ್ದಾರೆ. ಮುಂದುವರೆದು ಅವರು `ಸೂಕ್ತ ಸಮಯದಲ್ಲಿ ನಾವು ಹಿಂದಿನ ಚರ್ಚೆಗಳ ಆಧಾರದಲ್ಲಿ ಮುಂದುವರೆಯಬೇಕಾದರೆ ಎರಡೂ ದೇಶಗಳ ನಡುವೆ ನಂಬಿಕೆ ಮತ್ತು ವಿಶ್ವಾಸ ಮತ್ತೆ ನೆಲೆಗೊಳ್ಳಬೇಕು. ಆದರೆ ಹಿಂದಿನ ವರ್ಷಗಳಲ್ಲಿ ಭಾರತ ಮಾಡಿರುವ ಪ್ರಾಮಾಣಿಕ ಮತ್ತು ನೈಜ ಪ್ರಯತ್ನಗಳನ್ನು ಭಯೋತ್ಪಾದಕ ಕೃತ್ಯಗಳು ಮತ್ತೆ-ಮತ್ತೆ ವಿಫಲಗೊಳಿಸಿವೆ‘ ಎಂದು ಸಂಸತ್ತಿಗೆ ತಿಳಿಸಿದ್ದಾರೆ. `ನಾವು ಪಾಕಿಸ್ತಾನದೊಂದಿಗೆ ಸಂವಾದಕ್ಕೆ ಬಾಗಿಲು ಮುಚ್ಚಬಾರದು, ಇಂತಹ ಸಂವಾದ ಹೆಚ್ಚೆಚ್ಚು ನಡೆದಂತೆ ನಮ್ಮ ಪ್ರದೇಶದ ಜನಗಳ ಪ್ರಗತಿ ಮತ್ತು ಕಲ್ಯಾಣಕ್ಕೆ ಅಪಾರ ಸಾಧ್ಯತೆಗಳನ್ನು ತೆರೆದಿಡಬಲ್ಲುದು ಎಂದು ಸರಕಾರಕ್ಕೆ ಖಾತ್ರಿಯಾಗಿದೆ. ಆದರೆ ಇದಕ್ಕೊಂದು ಮಹತ್ವದ ಅಡ್ಡಿಯಿದೆ. ಪಾಕಿಸ್ತಾನದೊಡನೆ ಭಾರತದ ಸಂವಾದ, ಮುಂಬೈ ಭಯೋತ್ಪಾದಕ ದಾಳಿಗಳ ನಂತರ ಕಾಣುತ್ತಿರುವಂತೆ,ಭಯೋತ್ಪಾದನೆ ಕುರಿತಂತೆ ನಮ್ಮ ಮುಖ್ಯ ಆತಂಕಗಳಿಗೆ ಪಾಕಿಸ್ತಾನದ ಸ್ಪಂದನೆಯ ಮೇಲೆ ನಿಂತಿದೆ‘ ಎಂದೂ ಹೇಳಲಾಗಿದೆ.ದೃಢ ನಿಲುವಿಗೆ ಚ್ಯುತಿ ಸಲ್ಲ
ಈ ಮಾತುಕತೆಗಳ ಕೆಲವೇ ಸಮಯದ ನಂತರ ಪ್ರಧಾನ ಮಂತ್ರಿಗಳು ಕೈಗೊಂಡ ಸೌದಿ ಅರೇಬಿಯಾ ಪ್ರವಾಸ ಒಂದು ವಿವಾದವನ್ನೇ ಸೃಷ್ಟಿಸಿದೆ . ವಿದೇಶಾಂಗ ವ್ಯವಹಾರಗಳ ಕಿರಿಯ ಮಂತ್ರಿ ಮತ್ತೊಮ್ಮೆ ಸೈಬರ್ ಲೋಕದಲ್ಲಿ ತಮ್ಮ ಬಾಯಿ ಅಗಲಿಸಿ ಸೌದಿ ಅರೇಬಿಯಾ ಸಂಧಾನಕಾರನ ಪಾತ್ರ ವಹಿಸಬೇಕೆಂದು ಭಾರತ ಬಯಸುತ್ತದೆ ಎಂಬ ಭಾವನೆ ಬರುವಂತಾಯಿತು. ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಶ್ನೆಗಳೆಲ್ಲಾ ದ್ವಿಪಕ್ಷೀಯ, ಅವನ್ನು ಮೂರನೆಯವರ ಹಸ್ತಕ್ಷೇಪವಿಲ್ಲದೆ ದ್ವಿಪಕ್ಷೀಯ ಮಾತುಕತೆಗಳಿಂದ ಮಾತ್ರವೇ ಪರಿಹರಿಸಲು ಸಾಧ್ಯ ಎಂಬುದು ಮೊದಲಿಂದಲೂ ಭಾರತದ ದೃಢ ನಿಲುವು. ಇದಕ್ಕೆ ಚ್ಯುತಿ ಬರದಂತೆ ಭಾರತ ನೋಡಿ ಕೊಳ್ಳಬೇಕಾಗಿದೆ. ಪ್ರಧಾನ ಮಂತ್ರಿಗಳಂತೂ ತಾನು ಪಾಕಿಸ್ತಾನ ತನ್ನ ನೆಲದಿಂದ ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ಅವಕಾಶ ಕೊಡುವ ದಾರಿಯನ್ನು ಅನುಸರಿಸದಂತೆ ಸೌದಿ ಅರೇಬಿಯ ತನ್ನ ಪ್ರಭಾವವನ್ನು ಬೀರಬೇಕು ಎಂದು ಕೇಳುವುದನ್ನು ಬಿಟ್ಟರೆ ಅವರಿಂದ ಬೇರೇನನ್ನೂ ಕೇಳಿಲ್ಲ ಎಂದು ಪ್ರವಾಸದಿಂದ ಹಿಂದಿರುಗುವಾಗ ಮಾಧ್ಯಮಗಳಿಗೆ ತಿಳಿಸಿದರು.
ಯಾವುದೇ ವಿಧದ ಭಯೋತ್ಪಾದನೆ ಭಾರತಕ್ಕೆ ಖಂಡಿತಾ ಸ್ವೀಕಾರಾರ್ಹವಲ್ಲ. ಈ ಪಿಡುಗನ್ನು ನಿರ್ಮೂಲ ಮಾಡುವ ಪ್ರಯತ್ನಗಳಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ಸಂಧಾನಕ್ಕೆ ಅವಕಾಶವಿಲ್ಲ.ಭಾರತದ ವಿರುದ್ಧ ತನ್ನ ನೆಲದಿಂದ ಭಯೋತ್ಪಾದನೆ ಹೊಮ್ಮದಂತೆ ಪಾಕಿಸ್ತಾನ ದೃಢ ಕ್ರಮ ಕೈಗೊಳ್ಳಬೇಕು ಎಂದು ಭಾರತ ಪರಸ್ಪರ ಮಾತುಕತೆಗಳ ಮೂಲಕ ಪಾಕಿಸ್ತಾನಕ್ಕೆ ದೃಢವಾಗಿ ಹೇಳಬೇಕಾಗಿದೆ.
(`ಪೀಪಲ್ಸ್ ಡೆಮಾಕ್ರಸಿ‘ ಸಂಪಾದಕೀಯ)
ಸೌಜನ್ಯ: ಜನಶಕ್ತಿ