ಬೆಂಗಳೂರು, ಜನವರಿ 19: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಹಿನ್ನಲೆಯಲ್ಲಿ ಅಧಿಕಾರಿಗಳು ತರಾತುರಿಯಲ್ಲಿ ನಡೆಸಿದ್ದ ಟೆಂಡರ್ ಪ್ರಕ್ರಿಯೆ ಹೈಕೋರ್ಟ್ಗೆ ಪಾಲಿಕೆ ಮುಚ್ಚಳಿಕೆ ಬರೆದುಕೊಟ್ಟು ಟೆಂಡರ್ ಸ್ಥಗಿತ ಮಾಡಿರುವುದಾಗಿ ತಿಳಿಸಿದೆ. ಇದರಿಂದ ಯೋಜನೆಗೆ ಹಿನ್ನಡೆ ಉಂಟಾಗಿದೆ.
ನಗರದ ವಿವಿಧ ಕಚೇರಿಗಳಲ್ಲಿ ಘನ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ೩೦೦ ಕೋಟಿ ರೂ. ಮೊತ್ತದ ಟೆಂಡರ್ ಪ್ರಕ್ರಿಯೆ ನಿಲ್ಲಿಸಲಾಗಿದೆ ಎಂದು ಮಹಾನಗರಪಾಲಿಕೆ ಹೈಕೋರ್ಟ್ ಪ್ರಮಾಣ ಪತ್ರ ಸಲ್ಲಿಸಿದೆ.
ಮಾಜಿ ಮೇಯರ್ ರಮೇಶ್ ಹಾಗೂ ಇನ್ನಿತರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಗಂಭೀರ ವಾಗಿ ಪರಿಗಣಿಸಿದ ನ್ಯಾಯಾಲಯ ಪಾಲಿಕೆಗೆ ಮುಚ್ಚಳಿಕೆ ಬರೆದುಕೊಡುವಂತೆ ಸೂಚನೆ ನೀಡಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗೋಪಾಲ್ಗೌಡ ಮತ್ತು ಭೂಪಣ್ಣ ಪ್ರಕರಣ ವಿಚಾರಣೆ ಅರ್ಹವಾಗಿದ್ದು, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು. ಅದೇ ರೀತಿ ೩೪೦೦ ಕೋಟಿ ರೂಗಳ ತರಾತುರಿ ಟೆಂಡರ್ ಪ್ರಕರಣವನ್ನು ಗುರುವಾರ ಕೈಗೆತ್ತಿಕೊಳ್ಳುವಂತೆ ಮುಂದೂಡಿದರು.