ತುಮಕೂರು, ಅ.9: “ನೆರೆ ಬಂದ ಕಾಲಕ್ಕೆ ಕರೆದು ದಾನವ ಮಾಡುವ” ಎಂಬ ಹಿರಿಯರ ನುಡಿಯಂತೆ ಉತ್ತರ ಕರ್ನಾಟಕದ ಜಲಪ್ರಳಯದಿಂದ ತತ್ತರಿಸಿರುವ ಜನತೆಗೆ ಜನರು ತಮ್ಮ ಕೈಲಾದ ನೆರವು ನೀಡುವ ಮೂಲಕ ಅವರ ನೆರವಿಗೆ ಧಾವಿಸಬೇಕೆಂದು ಸಿದ್ದಗಂಗಾ ಮಠಾಧ್ಯಕ್ಷ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಭಕ್ತರಿಗೆ ಕರೆ ನೀಡಿದ್ದಾರೆ.
ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ಕುಮಾರ್, ರೇಷ್ಮೆ ಮತ್ತು ಸಣ್ಣ ಕೈಗಾರಿಕಾ ಸಚಿವ ವೆಂಕಟರಮಣಪ್ಪ, ಜಿಲ್ಲಾಧಿಕಾರಿ ಡಾ. ಸಿ.ಸೋಮಶೇಖರ್ರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನೆರೆ ಸಂತ್ರಸ್ತರ ಪರಿಹಾರ ನಿಧಿ ಸಂಗ್ರಹಣಾ ಪಾದ ಯಾತ್ರೆಗೆ ಚಾಲನೆ ನೀಡಿ ಮಾತನಾ ಡುತ್ತಿದ್ದ ಅವರು, ದಾನ ಮಾಡುವ ವನಿಗೆ ಮನಸ್ಸು ಮುಖ್ಯವೇ ಹೊರತು ಹಣವಲ್ಲ. ಕಾಣಿಕೆ ಕಡಿಮೆಯಾದರೂ ದಾನ ಮಾಡುವ ಒಳ್ಳೆಯ ಗುಣವಿದ್ದರೆ ಅದು ಇತರರನ್ನು ಪ್ರೇರೇಪಿಸುತ್ತದೆ ಎಂದರು.
ಪಾದಯಾತ್ರೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸುಮಾರು ಒಂದು ಕೋಟಿಗೂ ಹೆಚ್ಚಿನ ಹಣ ಹಾಗೂ ನೂರಾರು ಕ್ವಿಂಟಾಲ್ ಆಹಾರ ಪದಾರ್ಥಗಳು ಸಂಗ್ರಹವಾಗಿವೆ.
ಬೆಳಗ್ಗೆ 10 ಗಂಟೆಗೆ ಸಿದ್ದಗಂಗಾ ಮಠಾಧ್ಯಕ್ಷ ಡಾ.ಶ್ರೀಶಿವಕುಮಾರ ಸ್ವಾಮೀಜಿ 10ಲಕ್ಷ ರೂ.ಗಳ ಚೆಕ್ಕನ್ನು ಸಲ್ಲಿಸುವ ಮೂಲಕ ಪ್ರಾರಂಭವಾದ ಪಾದಯಾತ್ರೆಗೆ ಸಿದ್ದಗಂಗಾ ಮಠದ ಆವರಣದಲ್ಲಿಯೇ ಸುಮಾರು 30 ಲಕ್ಷಕ್ಕೂ ಹೆಚ್ಚಿನ ಹಣ ಸಂಗ್ರಹವಾಗಿದ್ದು, ಮಧ್ಯಾಹ್ನ 3.30ಕ್ಕೆ ಮುಕ್ತಾಯವಾದ ಪಾದಯಾತ್ರೆಯ ಕೊನೆಯಲ್ಲಿ ಒಂದು ಕೋಟಿಗೂ ಅಧಿಕ ನಗದು ಹಾಗೂ ದವಸ ಧಾನ್ಯಗಳು ಸಂಗ್ರಹವಾಗಿವೆ.
ಪ್ರಾರಂಭದಲ್ಲಿ ಹಿರೇಮಠದ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ 35 ಸಾವಿರ ರೂ.ಗಳನ್ನು ನೀಡಿದರೆ, ಜಿಲ್ಲಾಧಿಕಾರಿಗಳ ಪತ್ನಿ ಸರ್ವ ಮಂಗಳ ಸೋಮಶೇಖರ್ ಐದು ಸಾವಿರ ನಗದು ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯದ ಸಿಬ್ಬಂದಿ 30 ಸಾವಿರ ರೂ.ಗಳ ಚೆಕ್ ನೀಡಿದರೆ, ತುಮಕೂರು ಸಂಸದ ಜಿ.ಎಸ್.ಬಸವರಾಜು 50 ಸಾವಿರ ನಗದು ಹಣವನ್ನು ಹುಂಡಿಗೆ ಹಾಕಿದರು. ಸಿದ್ದಗಂಗಾ ಪಟ್ಟಣ ಸಹಕಾರಿ ಬ್ಯಾಂಕಿನ ಟಿ.ಕೆ.ನಂಜುಂಡಪ್ಪ 5.50 ಲಕ್ಷ ರೂ.ಗಳ ಚೆಕ್ ನೀಡಿದರೆ, ಬಿಸಫ್ ಸಾರ್ಜೆಂಟ್ ಶಾಲೆಯ ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆಗೆ ಧೇಣಿಗೆಯಾಗಿ ನೀಡಿದರು.
ತಾಲೂಕು ಕೃಷಿ ಮಾರಾಟ ಸಹಕಾರ ಸಂಘದ ವತಿಯಿಂದ 25 ಲಕ್ಷ ರೂ.ಗಳ ಚೆಕ್ ವಿತರಿಸಿದರೆ, ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಸ್ಲಂ ಪಾಷ 10 ರೂ.ಗಳನ್ನು ಹುಂಡಿಗೆ ಹಾಕಿದರು. ಅದೇ ಮಾಜಿ ಉಪಾಧ್ಯಕ್ಷ ವಾಲೆಚಂದ್ರ ಐದು ಸಾವಿರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಪಿ. ಎಸ್. ಹರ್ಷ 10 ಸಾವಿರ, ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜಶೇಖರ್ ಐದು ಸಾವಿರ, ಜಿ.ಪಂ.ಸಿಇಓ 5 ಸಾವಿರ, ರೇಷ್ಮೆ ಖಾತೆ ಸಚಿವ ವೆಂಕಟರಮಣಪ್ಪ 50 ಸಾವಿರ, ವೈಶ್ಯ ಕೋ-ಅಪರೇಟಿವ್ ಬ್ಯಾಂಕ್ ವತಿಯಿಂದ 5.50 ಲಕ್ಷ ನೀಡಿದರೆ, ಬ್ಯಾಂಕಿನ ಸಿಬ್ಬಂದಿ ವರ್ಗ 1 ಲಕ್ಷ ರೂ. ಚೆಕ್ ನೀಡಿದರು. ಉದ್ಯಮಿ ಎನ್. ಆರ್.ಜಗದೀಶ್ ಅಧ್ಯಕ್ಷರಾಗಿರುವ ಟಿ.ಜಿ.ಎಂ.ಸಿ. ಬ್ಯಾಂಕ್ ವತಿಯಿಂದ 14 ಲಕ್ಷ ನೀಡಿದರೆ, ಬ್ಯಾಂಕಿನ ಸಿಬ್ಬಂದಿ 1.50 ಲಕ್ಷ ರೂ.ಗಳನ್ನು ಪರಿಹಾರ ನಿಧಿಗೆ ನೀಡಿದರು.
ನಗರದ ಟೌನ್ಹಾಲ್ ಸರ್ಕಲ್ ನಿಂದ ಎಂ.ಜಿ.ರಸ್ತೆ, ವಿವೇಕಾನಂದ ರಸ್ತೆ, ಆಶೋಕ ರಸ್ತೆ, ಮಂಡಿಪೇಟೆ, ಜೆ.ಸಿ.ರಸ್ತೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಚಲಿಸಿದ ಪಾದಯಾತ್ರೆಗೆ ವರ್ತಕರು, ನಾಗರಿಕರು ತಮ್ಮ ಕೈಲಾದ ಸಹಾಯವನ್ನು ಮಾಡುವ ಮೂಲಕ ನೆರೆ ಸಂತ್ರಸ್ತರ ನೆರವಿಗೆ ಸಹಾಯ ಹಸ್ತ ಚಾಚಿದರು. ಮಂಡಿಪೇಟೆ, ವಿವೇಕಾ ನಂದ ರಸ್ತೆ ಪಾದಯಾತ್ರೆಯಲ್ಲಿ ನಗದಿನ ಜೊತೆಗೆ ಬಟ್ಟೆ, ಇನ್ನಿತರ ವಸ್ತುಗಳನ್ನು ವರ್ತಕರು ನಿಧಿಗೆ ಆರ್ಪಿಸಿದರು.
ಜಿಲ್ಲೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸ್ಕೌಟ್, ಗೈಡ್ಸ್ ಮಕ್ಕಳು ಪಾದಯಾತ್ರೆ ಯಲ್ಲಿ ಪಾಲ್ಗೊಂಡಿದ್ದರು.
ಕೊಳ್ಳೇಗಾಲದಲ್ಲಿ ೫,೨೧,೫೫೭ ರೂ. ಸಂಗ್ರಹ
ಪ್ರವಾಹ ಪೀಡಿತ ಉತ್ತರ ಕರ್ನಾ ಟಕದ ಸಂತ್ರಸ್ತರ ಪರಿಹಾರ ನಿಧಿಗೆ ಬಿಜೆಪಿ ಉಗ್ರಾಣ ಅಧ್ಯಕ್ಷ ಎಂ. ಮಹದೇವು ಹಾಗೂ ಕೊಳ್ಳೇಗಾಲ ಕ್ಷೇತ್ರದ ಶಾಸಕ ನಂಜುಂಡಸ್ವಾಮಿ ಯವರ ನೇತೃತ್ವದಲ್ಲಿ ಇಂದು ನಗರದಲ್ಲಿ ನಡೆಸಿದ ಪಾದಯಾತ್ರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಇಂದು ಬೆಳಗ್ಗೆ ೧೦ಗಂಟೆಗೆ ಹೊಸ ಬಸ್ ನಿಲ್ದಾಣದಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಶಾಸಕ ನರೇಂದ್ರ ಹಾಗೂ ವಿವಿಧ ಮಠಗಳ ಸ್ವಾಮೀಜಿ ಗಳು ಭಾಗವಹಿಸಿದ್ದರು. ೫,೨೧, ೫೫೭ರೂ. ಸಂಗ್ರಹವಾಯಿತು.
ಕೊಳ್ಳೇಗಾಲ ಪೊಲೀಸ್ ಠಾಣೆ ಯಿಂದ ೫೦ ಸಾವಿರ, ಮಾನಸ ಕಾಲೇಜಿನಿಂದ ಒಂದು ಲಕ್ಷ ರೂ. ದೇಣಿಗೆ ನೀಡಲಾಯಿತು. ತಾ.ಪಂ. ನಿಂದ ೨೫ ಸಾವಿರ, ಅಂಬೇಡ್ಕರ್ ಸಂಘ ದಿಂದ ೯ ಸಾವಿರ, ರಾಜರಾಜೇಶ್ವರಿ ಕಲ್ಯಾಣ ಮಂಟಪದಿಂದ ೧೦ ಸಾವಿರ ರೂ., ಚೌಡೇಶ್ವರಿ ಕಲ್ಯಾಣ ಮಂಟಪದಿಂದ ೧೦ ಸಾವಿರ ರೂ., ಫೆರ್ನಾಂಡಿಸ್ ಟೆಕ್ಸ್ಟೈಲ್ಸ್ನಿಂದ ೫೦ ಸೀರೆಗಳು ನೀಡಲಾಯಿತು. ಸಂಗ್ರಹಿಸಿದ ಹಣ ಹಾಗೂ ವಸ್ತುಗಳನ್ನು ತಾಲೂಕು ದಂಡಾಧಿಕಾರಿ ವೆಂಕಟೇಶ್ ಮೂರ್ತಿ ಯವರಿಗೆ ನೀಡಲಾಯಿತು.
ಮಂಡ್ಯ ವರದಿ: ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜಿಲ್ಲೆಗಳ ಸಂತ್ರಸ್ತರಿಗೆ ಜಿಲ್ಲೆಯಾದ್ಯಂತ ಸಂಘಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳಿಂದ ಸಾವಿರಾರು ರೂ.ಗಳ ನೆರವು ಹರಿದುಬರುತ್ತಿದೆ.
ಶುಕ್ರವಾರವೂ ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿ ಗಳು ಜಿಲ್ಲೆಯ ವಿವಿಧೆಡೆ ಪಾದಯಾತ್ರೆ ನಡೆಸಿ ಸಾವಿರಾರು ರೂ.ಗಳನ್ನು ಪರಿಹಾರ ನಿಧಿಗೆ ಸಂಗ್ರಹಿಸಿದರು.
ಪದಾಧಿಕಾರಿಗಳಾದ ಜಗನ್ನಾಥ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಚಂದ್ರಶೇಖರ್ರವರ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಸಿದ ಕರಾವಳಿ ಸಾಂಸ್ಕೃತಿಕ ಒಕ್ಕೂಟದ ಕಾರ್ಯಕಾರಿ ಮಂಡಳಿ, ಸಂತ್ರಸ್ತರ ನಿಧಿಗೆ ೧೦ ಸಾವಿರ ರೂ. ನೀಡುವುದಾಗಿ ಪ್ರಕಟಿಸಿದ್ದಾರೆ.
ಮದ್ದೂರು ತಾಲೂಕು ಭಾರತಿನಗರದಲ್ಲಿ ಮಾಜಿ ಶಾಸಕ ಡಿ. ಸಿ. ತಮಣ್ಣ, ನಾಗಮಂಗಲದಲ್ಲಿ ಶಾಸಕ ಸುರೇಶ್ ಗೌಡ, ಕೆ. ಆರ್. ಪೇಟೆ ತಾಲೂಕು ಕಿಕ್ಕೇರಿಯಲ್ಲಿ ಮಾಜಿ ಸ್ಪೀಕರ್ ಕೃಷ್ಣ ನೇತೃತ್ವದಲ್ಲಿ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲಾಯಿತು.
ಮದ್ದೂರಿನ ಸೋಮನಹಳ್ಳಿಯ ಎಸ್. ಸಿ. ಮಲ್ಲಯ್ಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ವಿಧಾನಪರಿಷತ್ ಸದಸ್ಯ ಶಂಕರ್ ನೇತೃತ್ವದಲ್ಲಿ ನಿಧಿ ಸಂಗ್ರ ಹಿಸಿದರೆ, ಶಿವಾರ ಗುಡ್ಡದ ಆದರ್ಶ ಆಶ್ರಮದ ಗಂಗಾ ಧರಯ್ಯ ಸಂತ್ರಸ್ತರ ನಿಧಿಗೆ ೫ ಸಾವಿರ ರೂ. ನೀಡಿದರು.
ಕೆ. ಆರ್. ಪೇಟೆಯಲ್ಲಿ ಅ.೧೨ ರಂದು ಮಾಜಿ ಸ್ಪೀಕರ್ ಕೃಷ್ಣ, ಮಾಜಿ ಶಾಸಕ ಬಿ. ಪ್ರಕಾಶ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಲಾ ಗುವುದು ಎಂದು ಶಾಸಕ ಕೆ. ಬಿ. ಚಂದ್ರಶೇಖರ್ ತಿಳಿಸಿದ್ದಾರೆ