ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಇಮಾಮ್ ಶಾಫಿ ಮಸೀದಿಯಲ್ಲಿ ಮನರಂಜಿಸಿದ ಚಿಣ್ಣರ ಕಾರ್ಯಕ್ರಮ

ಇಮಾಮ್ ಶಾಫಿ ಮಸೀದಿಯಲ್ಲಿ ಮನರಂಜಿಸಿದ ಚಿಣ್ಣರ ಕಾರ್ಯಕ್ರಮ

Mon, 15 Mar 2010 20:10:00  Office Staff   S.O. News Service

ಭಟ್ಕಳ:೧೫, ಇಲ್ಲಿನ ಆಝಾದ್ ನಗರ ಇಮಾಮ್ ಶಾಫಿ ಮಸೀದಿಯಲ್ಲಿನ ರಾತ್ರಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇತ್ತಿಚೆಗೆ ಜರುಗಿತು. ಶಾಲಾ ಅವಧಿಯ ನಂತರ ರಾತ್ರಿಯ ವೇಳೆ ಮಸೀದಿಗಳಲ್ಲಿ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಕಣದ ಜತೆಯಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು ವರ್ಷದ ಕೊನೆಯಲ್ಲಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಪೋಷಿಸುವ ಕಾರ್ಯ ಈ ರಾತ್ರಿ ಶಾಲೆಗಳ ಮೂಲಕ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ  ಮಾತನಾಡಿದ ಮಸೀದಿಯ ಇಮಾಮ್ ಹಾಗೂ ಭಟ್ಕಳ ಮುಸ್ಲಿಮ್ ಯುತ್ ಫಡೆರೇಷನ್  ಅಧ್ಯಕ್ಷ ಮೌಲಾನ ಅನ್ಸಾರ‍್ ಮದನಿ ಮಸೀದಿಯಲ್ಲಿ ೨೫ರಿಂದ ೩೦ ವಿದ್ಯಾರ್ಥಿಗಳು ಪವಿತ್ರ ಕುರ್‌ಆನ್ ಕಲಿಯುತ್ತಿದ್ದಾರೆ. ಅವರು ಶಾಲೆಯನ್ನು ಮುಗಿಸಿ ಸಂಜೆ ಸಮಯದಲ್ಲಿ ಮಸೀದಿಗಳಲ್ಲಿ ಕುರ್‌ಆನ್ ಬಹಳ ಆಸಕ್ತಿಯಿಂದ ಕಲಿಯುತ್ತಿದ್ದು ವಿದ್ಯಾರ್ಥಿಗಳ ಮಧ್ಯೆ ಆರೋಗ್ಯದಾಯಕ ಸ್ಪರ್ಧಾ ಮನೋಭಾವ ಬೆಳಯುವಂತಾಗಲು ಅವರಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕಳ್ಳಲಾಗುತ್ತಿದ್ದು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದೆ ಎಂದರು. ಸಧ್ಯದಲ್ಲಿ ಶಾಲೆ ಮತ್ತು ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗಾಗಿ ಬೇಸಿಗೆ ರಜಾ ಶಿಬಿರನ್ನು  ಆಯೋಜಿಸಲಾಗುವುದು ಎಂದ ಅವರು ಇದರಲ್ಲಿ ಇಸ್ಲಾಮಿ ಕರ್ಮಶಾಸ್ತ್ರ ಮತ್ತು  ಆರಾಧನಕ್ರಮಗಳ ಕುರಿತು ತರಗತಿಗಳನ್ನು ಏರ್ಪಡಿಸಲಾಗುವುದು ಎಂದು ಅವರು ತಿಳಿಸಿದರು.

http://www.sahilonline.org/news/2010/mar10/shafi_masjid_2.jpg 

ಈ ಸಂದರ್ಭದಲ್ಲಿ ಜಾಮಿಯ ಇಸ್ಲಾಮಿಯದ ಪ್ರಾಚಾರ್ಯ ಮೌಲಾನ ಅಬ್ದುಲ್ ಬಾರಿ ನದ್ವಿ, ಮೌಲಾನ ಮಖ್ಬೂಲ್ ಕೋಬಟ್ಟೆ, ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೌಲಾನ ಶಫಿ ಮಲ್ಪಾ ಖಾಸ್ಮಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತಿಯಾ, ತೃತೀಯಾ ಸ್ಥಾನ  ಗಳಿಸಿದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ಹಾಗೂ ಪ್ರಶಸ್ತಿಪತ್ರವನ್ನು ವಿತರಿಸಲಾಯಿತು. 

 


Share: