ಭಟ್ಕಳ, ಜನವರಿ 20: ಭಟ್ಕಳ ನಗರದಲ್ಲಿ ಈಗ ವಿವಿಧ ಪಂದ್ಯಾವಳಿಗಳು ನಡೆಯುತ್ತಿದ್ದು ಒಂದೆರಡು ದಿನಗಳ ಹಿಂದೆಯಷ್ಟೆ ಜಿಲ್ಲಾ ಮಟ್ಟದ ಸೌಹಾರ್ಧ ಕಬ್ಬಡಿ ಪಂದ್ಯಾವಳಿ ನಡೆದಿದ್ದು ಈಗ ಫುಟ್ಬಾಲ್ ಸರದಿ. ನಗರದ ಲಬ್ಬೈಕ್ ನವಾಯತ್ ಸ್ಪೋರ್ಟ್ಸ ಕ್ಲಬ್ ಆಯೋಜಿಸಿರುವ ಮೂರುದಿನಗಳ ತಾಲೂಕ ಮಟ್ಟದ ಫುಟ್ಬಾಲ್ ಪಂದ್ಯಾವಳಿಯು ಬುಧವಾರ ಬೆಳಿಗ್ಗೆ ನಬೀಲ್ ಸಿದ್ದೀಖಿ ಅವರ ಕುರಾನ್ ಪಠಣ ಮಾಡವುದರೊಂದಿಗೆ ಚಾಲನೆಯನ್ನು ಪಡೆದುಕೊಂಡಿತು. ಇಲ್ಲಿಯವರೆಗೆ ಭಟ್ಕಳದ ಯುವ ಸಮೋಹ ಕೇವಲ ಕಬ್ಬಡಿ ಕ್ರಿಕೇಟ್ ಗೆ ಮಾತ್ರ ಅಂಟಿಕೊಂಡಿದ್ದು ಈಗ ಇಲ್ಲಿ ಫುಟ್ಬಾಲ್ ಗಾಳಿ ಬೀಸಲಾರಂಭಿಸಿದೆ. ಇದೊಂದು ಒಳ್ಳೆಯ ಬೆಳವಣೆಗೆಯಾಗಿದೆ ಎಂದು ಫುಟ್ಬಾಲ್ ಪ್ರೇಮಿಗಳ ಅಭಿಪ್ರಾಯವಾಗಿದೆ.

ಇಂದು ನಗರದ ಯಂಗ್ ಮುಸ್ಲಿಮ್ ಸರ್ವಿಸ್ ಅಸೋಸಿಯೇಶನ್ ಮೈದಾನದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಮೂರುದಿನದ ಪಂದ್ಯಾವಳಿಯು ಉದ್ಘಾಟನೆಗೊಂಡಿತು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಭಟ್ಕಳ ಪುರಸಭೆಯ ಸದಸ್ಯ ಅಲ್ತಾಫ್ ಖರೂರಿ ಮಾತನಾಡಿ ಕಬ್ಬಡ್ಡಿ ಹಾಗೂ ಕ್ರಿಕೇಟ್ ಕ್ರೀಢೆಯು ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಆಡಲ್ಪಡುತ್ತದೆ ಆದರೆ ಫುಟ್ಬಾಲ್ ಆಟವನ್ನು ಅರ್ಧ ಜಗತ್ತೇ ಆಡುತ್ತದೆ ಎಂದರು. ಈ ಸಂದರ್ಭದಲ್ಲಿ ಭಟ್ಕಳದ ವ್ಯಾಪಾರೋದ್ಯಮಿ ಇಖ್ಬಾಲ್ ಕೋಲಾ, ಮತ್ತು ನಾಸಿರ್ ಬರ್ಮಾವರ್ ತಮ್ಮ ವಿಅನಿಕೆಗಳನ್ನು ವ್ಯಕ್ತಪಡಿದರು.
ಲಬ್ಬೈಕ್ ನವಾಯತ್ ಸ್ಪೋರ್ಟ್ಸ ಕ್ಲಬ್ ನ ಅಧ್ಯಕ್ಷ ಅಝೀಝುರ್ರಹ್ಮಾನ್ ನದ್ವಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಯೀಸ್ ರುಕ್ನುದ್ದೀನ್, ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ನ ಕ್ರೀಡಾ ಸಂಚಾಲಕ ಮುಹಮ್ಮದ್ ಸಜ್ಜಾದ್ ಕೋಲಾ, ಝಬಿವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.