ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಶಿಕ್ಷಣ ಅಭಿವೃದ್ಧಿಗೆ ಸರ್ಕಾರದ ಹಲವು ಯೋಜನೆ - ಕಾಗೇರಿ

ಭಟ್ಕಳ: ಶಿಕ್ಷಣ ಅಭಿವೃದ್ಧಿಗೆ ಸರ್ಕಾರದ ಹಲವು ಯೋಜನೆ - ಕಾಗೇರಿ

Wed, 06 Jan 2010 11:13:00  Office Staff   S.O. News Service
ಭಟ್ಕಳ, ಜನವರಿ ೬:  ರಾಜ್ಯ ಬಿಜೆಪಿ ಸರಕಾರವು ಶಿಕ್ಷಣದ ಅಭಿವೃದ್ಧಿಗಾಗಿ ಹವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಸರಕಾರದ ಗುರಿಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವಾ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಹೇಳಿದರು ಮಂಗಳವಾರದಂದು ರಾತ್ರಿ ೮ಗಂಟೆಗೆ ತಾಲೂಕಿನ ಬೆಳಕೆ ಗ್ರಾ.ಪಂ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಈಲ್ಲೆಯ ಅಭಿವೃದ್ಧಿಗಾಗಿ ರಾಜಕೀಯವನ್ನು ಬೆರೆಸದೆ ಎಲ್ಲರು ಕಾರ್ಯಪ್ರವೃತ್ತರಾಗಬೇಕು ಎಂದ ಅವರು ಸಮಾಜದ ಏಳಿಗೆಯೆ ತಮ್ಮ ಗುರಿಯಾಗಿದೆ ಎಂದರು. 
ಆಡಳಿತದಲ್ಲಿ ಬದಲಾವಣೆಯಾಗಬೇಕು ಎಂದು ಪ್ರತಿಪಾದಿಸಿದ ಅವರು ಎಲ್ಲಾ ಇಲಾಖೆಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದರು. 
6-bkl-02.jpg
 
 ಕಾಗೇರಿಯವರ ವರೋಧಿ ಪಾಳೆಯದಲ್ಲಿ ಗುರುತಿಸಿಕೊಂಡ ಮಾಜಿ ಸಚಿವ ಶಿವಾನಂದ ನಾಯ್ಕ ರ ಉಪಸ್ಥಿಯು ವೇದಿಕೆಯಲ್ಲಿ ಎದ್ದು ಕಾಣುತ್ತಿತ್ತು. ಉ.ಕ. ಜಿಲ್ಲಾಪಂಚಾಯತ ಮಾಜಿ ಅಧ್ಯಕ್ಷ ದಾಮೋದರ ಗರ್ಡೀಕರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಭಟ್ಕಳ ತಾ.ಪಂ ಅಧ್ಯಕ್ಷೆ ಗೌರಿ ಮೊಗೇರ, ಮಾಜಿ ಅಧ್ಯಕ್ಷ  ಪರಮೇಶ್ವರ ದೇವಾಡಿಗ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅರುಣ್, ತಹಸೀಲ್ದಾರ ಎಸ್.ಎಮ್.ನಾಯ್ಕ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ ಮುಂತಾದವರುವೇದಿಕೆಯಲ್ಲಿ‌ಉಪಸ್ಥಿತರಿದ್ದರು

Share: