ಭಟ್ಕಳ, ಜನವರಿ 21: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾದ 2009-2010ನೇ ಸಾಲಿನ ಮೆಟ್ರಿಕ್ ಮೇಳ ಹಾಗೂ ಟಿಎಲ್ಎಮ್ ಮೇಳದಲ್ಲಿ ತೆಂಗಿನಗುಂಡಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಪ್ರದರ್ಶಿಸಲಾದ ‘ಹಸಿರು ಮನೆ ಪರಿಣಾಮ’ಕ್ಕೆ ಪ್ರಥಮ ಬಹುಮಾನ ಲಭಿಸಿದೆ.
ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹಸಿರು ಮನೆ ಪರಿಣಾಮದ ಕುರಿತು ತೆಂಗಿನ ಗುಂಡಿ ಶಾಲೆಯ ಶಿಕ್ಷಕ ವೃಂದವು ನೀಡಿದ ಈ ಪ್ರದರ್ಶನಕ್ಕೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಜಿ. ಮೊಗೇರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.