ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಅದ್ಧೂರಿಯಾಗಿ ನಡೆದ ಶೇಡಬರಿ ಜಾತ್ರೆ

ಭಟ್ಕಳ: ಅದ್ಧೂರಿಯಾಗಿ ನಡೆದ ಶೇಡಬರಿ ಜಾತ್ರೆ

Tue, 19 Jan 2010 15:54:00  Office Staff   S.O. News Service
ಭಟ್ಕಳ, ಜನವರಿ 19:ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಡಬರಿ ಜಟಕಾ ಮಹಾಸತಿ ದೇವರ ಜಾತ್ರೆ ನಿನ್ನೆ ಮಧ್ಯಾಹ್ನ ಅದ್ಧೂರಿಯಾಗಿ ಆರಂಭಗೊಂಡಿತು.
ಜಾತ್ರೆಯಲ್ಲಿ ಹೆಬಳೆ ಸೇರಿದಂತೆ ವಿವಿಧ ಭಾಗಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಟಕಾ ಮಹಾಸತಿ ದೇವರಿಗೆ ಪೂಜೆ ಪುನಸ್ಕಾರ ಸಲ್ಲಿಸಿದರು.  ಶೇಡಬರಿ ಜಾತ್ರೆಯಲ್ಲಿ ಶೇಡಿಮರದ ಹರಕೆ ವಿಶೇಷವಾಗಿದೆ. ಶೇಡಿ ಮರವು ಒಂದು ನೇರ ಕಂಬದ ಮೇಲೆ ಅಡ್ಡದಾದ ಕಂಬವನ್ನು ಹೊಂದಿದ್ದು, ಅದರ ಒಂದು ತುದಿಯಲ್ಲಿ ಹರಕೆ ಹೊತ್ತ ಭಕ್ತಾಧಿಗಳನ್ನು ಕೂಡ್ರಿಸಲು ಮತ್ತೊಂದು ತುದಿಯಲ್ಲಿ ಹಗ್ಗವನ್ನು ಕಟ್ಟಿ ಕಂಬವನ್ನು ತಿರುಗಿಸಲು ಸಹಾಯ ಮಾಡಲು ಕಟ್ಟಿರುತ್ತಾರೆ. ಈ ಹರಕೆ ಪದ್ದತಿ ತಲೆ ತಲಾಂತರದಿಂದಲೂ ನಡೆದುಕೊಂಡು ಬಂದಿದೆ.
 
 
 
 
17bkl6.jpg

ಶೇಡಿ ಮರದ ಆಟ ಆಡಲು ಹರಕೆ ಹೊತ್ತ ಭಕ್ತರು ದೇವಸ್ಥಾನಕ್ಕೆ ಬರುವಾಗ ಬಿಳೆ ಅಂಗಿ, ಬಿಳೆ ಪಂಚೆ,ಬಿಳೆ ಟೋಪಿ, ಕುತ್ತಿಗೆಗೆ ಮಣಿಸರ ಹಾಗೂ ಕೆಂಪು ಹೂವಿನ ಮಾಲೆಯನ್ನು ಸಂಪ್ರದಾಯವಾಗಿ ಧರಿಸಿಕೊಂಡು ಬರಬೇಕೆಂಬ ನಿಯಮವಿದೆ. ಹೀಗೆ ಬರುವಾಗ ದೇವಸ್ಥಾನಕ್ಕೆ ಒಂದು ಹೂವಿನ ಕೊಗೆ, ಶೇಡಿ ಮರಕ್ಕೆ ಒಂದು ಬಾಳೆ ಕೊನೆ ತರಬೇಕಾಗಿದೆ. ಪುಟ್ಟಮಕ್ಕಳಿಂದಲೂ ಶೇಡಿ ಮರದ ಹರಕೆಯನ್ನು ಮಾಡಿಸಲಾಗುತ್ತಿದೆ. ಕಷ್ಟದ ಕಾಲದಲ್ಲಿ ಶೇಡಿ ಮರದ ಹರಕೆ ಮಾಡಿಸುತ್ತೇವೆ ಎಂದು ಹೇಳಿಕೊಂಡಲ್ಲಿ ಕಷ್ಟವೆಲ್ಲಾ ಪರಿಹಾರವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಇದೇ ಸಲುವಾಗಿ ಶೇಡಬರಿ ಜಾತ್ರೆಯಲ್ಲಿ ಶೇಡಿಮರದ ಹರಕೆ ಪುರಾತನ ಕಾಲದಿಂದಲೂ ಪ್ರಸಿದ್ದಿಯಾಗಿದೆ.ನಿನ್ನೆ ಜಾತ್ರಾ ಪ್ರಯುಕ್ತ ತಾಲೂಕಿನ ವಿವಿಧ ಕಡೆಯಿಂದ ಬಂದ ಸಾವಿರಾರು ಭಕ್ತರು ಜಟಕಾ ಮಹಾಸತಿ ದೇವರಿಗೆ ಪೂಜೆ ಸಲ್ಲಿಸಿದರು. ನಿನ್ನೆ ರಾತ್ರಿ ದೇವಸ್ಥಾನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ,ಮನರಂಜನಾ ಕಾರ್ಯಕ್ರಮಗಳೂ ಜರುಗಿದವು. ಜಾತ್ರೆಗೆ ಇಂದು ತೆರೆ ಬೀಳಲಿದೆ.



Share: