ಬೆಂಗಳೂರು ಫೆ.೬: ಫೆ.೭ರ ರವಿವಾರದಂದು ಎರಡನೆ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಹನಿ ಹಾಕಲು ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಈ ಕಾರ್ಯಕ್ರಮದಲ್ಲಿ ಸರ್ಕಾರೇತರ ಸಂಸ್ಥೆಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳು ಇಲಾಖೆಯೊಡನೆ ಕೈ ಜೋಡಿಸಿ ಒಂದು ಮಗುವನ್ನೂ ಬಿಡದಂತೆ ೫ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಹನಿಗಳನ್ನು ಹಾಕುವಂತೆ ಮಾಡಬೇಕಾಗಿದೆ. ಈ ದಿಸೆಯಲ್ಲಿ ರಾಜ್ಯಾದ್ಯಂತ ಫೆ.೭ರಂದು ೩೧ ಸಾವಿರ ಪೋಲಿಯೊ ಬೂತ್‌ಗಳು, ೪೯ ಸಾವಿರ ತಂಡಗಳು, ೯೭೧೧೦ ವ್ಯಾಕ್ಸಿನೇಟರ್‌ಗಳು ಹಾಗೂ ಇತರೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ. ಆರೋಗ್ಯವಂತ ಮಕ್ಕಳು ನಮ್ಮ ರಾಜ್ಯದ ಆಸ್ತಿ, ಈ ಮಕ್ಕಳ ಆರೋಗ್ಯವನ್ನು ಕಾಪಾಡುವುದಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಮುದಾಯವು ಪಾಲ್ಗೊಳ್ಳುವುದು ಅತ್ಯವಶ್ಯಕವಾಗಿದೆ.
ಪೋಲಿಯೊ ಮಕ್ಕಳಲ್ಲಿ ಅಂಗವಿಕಲತೆ ಉಂಟುಮಾಡುವ ರೋಗವಾಗಿದ್ದು, ೫ವರ್ಷದ ಒಳಗಿನ ಮಕ್ಕಳಿಗೆ ಎರಡು ಹನಿ ಹಾಕಿಸುವುದರಿಂದ ಪೋಲಿಯೊ ರೋಗವನ್ನು ತಡೆಗಟ್ಟಬಹುದು.
ತಂದೆ ತಾಯಿಗಳು, ಪೋಷಕರು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಹನಿಗಳನ್ನು ಹಾಕಿಸಲು ಇನ್ನೂ ಹೆಚ್ಚಿನ ರೀತಿಯ ಪ್ರಚಾರಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕಾರ ನೀಡಲು ಕೋರಲಾಗಿದೆ.
ರಿಕ್ಷಾ ಪ್ರಯಾಣಿಕರನ್ನು ವಂಚಿಸಿದರೆ ಕ್ರಮ: ಸಾರಿಗೆ ಆಯುಕ್ತ ಎಚ್ಚರಿಕೆ
ಬೆಂಗಳೂರು, ಫೆ. ೬: ಆಟೊರಿಕ್ಷಾಗಳಲ್ಲಿ ಮೀಟರ್ ಟ್ಯಾಂಪರ್ ಮಾಡುವ ಮೂಲಕ ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡಿ ಸಾರ್ವಜನಿಕರಿಗೆ ವಂಚಿಸುತ್ತಿರುವ ಪ್ರಕರಣಗಳ ಬಗ್ಗೆ ಅಧಿಕ ಸಂಖ್ಯೆಯ ದೂರುಗಳು ಸಾರಿಗೆ ಇಲಾಖೆಯ ಗಮನಕ್ಕೆ ಬಂದಿದೆ. ಅಲ್ಲದೆ, ಡಿಜಿಟಲ್ ಫೇರ್ ಮೀಟರ್‌ಗಳನ್ನೂ ಸಹ ಟ್ಯಾಂಪರ್ ಮಾಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಒಂದು ವರದಿಯು ಪ್ರಸಾರವಾಗಿರುತ್ತಿದೆ.
ಈ ಹಿನ್ನೆಲೆಯಲ್ಲಿ, ಸಾರಿಗೆ ಇಲಾಖೆ ಇಂತಹ ರಿಕ್ಷಾಗಳ ಪರಿಶೀಲನೆಗಾಗಿ ಜಂಟಿ ತಪಾಸಣಾ ಕಾರ್ಯವನ್ನು ನಡೆಸಲಾಗುವುದು.
ಯಾವುದೇ ಆಟೊರಿಕ್ಷಾ ಮೀಟರ್ ಟ್ಯಾಂಪರ್ ಮಾಡಿರುವುದು ಕಂಡುಬಂದಲ್ಲಿ, ಅಂತಹ ಆಟೊರಿಕ್ಷಾ ಹೊಂದಿರುವ ರಹದಾರಿಯನ್ನು ಅಮಾನತ್ತು/ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಚಾಲಕರು ಮತ್ತು ಮಾಲಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನೂ ಸಹ ದಾಖಲಿಸಲಾಗುವುದೆಂದು ಸಾರಿಗೆ ಆಯುಕ್ತರು ಎಚ್ಚರಿಸಿದ್ದಾರೆ