ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ನಮ್ಮದು ಪ್ರೇಮ ವಿವಾಹ - ಲವ್ ಜಿಹಾದ್ ಅಲ್ಲ - ನೂರ್ ಫಾತಿಮಾ

ಬೆಂಗಳೂರು: ನಮ್ಮದು ಪ್ರೇಮ ವಿವಾಹ - ಲವ್ ಜಿಹಾದ್ ಅಲ್ಲ - ನೂರ್ ಫಾತಿಮಾ

Thu, 21 Jan 2010 02:27:00  Office Staff   S.O. News Service

ಬೆಂಗಳೂರು, ಜ.೨೦: ‘ಯುವತಿ ಪ್ರಾಪ್ತ ವಯಸ್ಕಳಾಗಿದ್ದು ತನ್ನ ಸ್ವ ಇಚ್ಛೆಯಿಂದ ಕಾನೂನು ಪ್ರಕಾರ ಮದುವೆಯಾಗಿದ್ದಾಳೆ. ಮತ್ತು ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಈಗ ಅವಳು ನೂರ್ ಫಾತೀಮಾ ಆಗಿದಾಳೆ. ಆಕೆ ಮಾನಸಿಕವಾಗಿ ಸ್ವಸ್ಥಳಾಗಿದ್ದಾಳೆ.

ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೆಗೊಂಡಿದ್ದರಿಂದ ಈ ಪ್ರಕರಣವನ್ನು ಅಪಹರಣ, ಬಲವಂತದ ಬಂಧನ ಅಥವಾ ನಾಪತ್ತೆ ಪ್ರಕರಣ ಎಂದು ಪರಿಗಣಿಸಲು ಸಾಧ್ಯವಿಲ’ ಎಂದು ಅಭಿಪ್ರಾಯಪಟ್ಟು, ಈ ಸಂಬಂಧ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಸಿದ ಹೈಕೋರ್ಟ್ ಕಲ್ಪಿತ ‘ಲವ್ ಜಿಹಾದ್’ ಪ್ರಕರಣಕ್ಕೆ ಅಂತ್ಯ ಹೇಳಿದೆ.

ಶಿವಮೊಗ್ಗ ಜಿಲ್ಲೆ ಗಾದಿಕೊಪ್ಪದ ನಿವಾಸಿ ಶ್ರೀ ನಿವಾಸ ವೈ.ಎಸ್. ತನ್ನ ಮಗಳು ಅಶ್ವಿನಿ ನಾಪತ್ತೆ ಯಾಗಿದ್ದಾಳೆ ಎಂದು ಡಿ. ೧೫, ೨೦೦೯ಕ್ಕೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಶ್ರೀಧರ್ ರಾವ್ ಮತ್ತು ನ್ಯಾ. ಸುಭಾಷ್ ಅಡಿ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಇಂದು ನಡೆದ ವಿಚಾರಣೆ ಸಂದರ್ಭದಲ್ಲಿ ಯುವತಿ ಮತ್ತು ಯುಕನನ್ನು ಪೊಲೀಸರು ಹೈಕೋರ್ಟ್ ಮುಂದೆ ಹಾಜರು ಪಡಿಸಿದರು. ‘ನಾನು ಸ್ವಚ್ಛೆಯಿಂದ ಇಸ್ಲಾಮ್ ಸ್ವೀಕಾರ ಮಾಡಿದ್ದೇನೆ. ಯಾರೂ ನನ್ನನ್ನೂ ಬಲವಂತಪಡಿಸಿಲ್ಲ. ಕೆಲವು ವರ್ಷಗಳ ಹಿಂದೆ ನಿದ್ರೆಯಲ್ಲಿ ಮಾತನಾಡುವ ಪ್ರವೃತ್ತಿ ಬಿಟ್ಟರೆ ಮತ್ತಾವ ಮಾನಸಿಕ ಕಾಯಿಲೆ ನನಗಿರಲಿಲ್ಲ. ನನ್ನ ತಂದೆ ತಾಯಿಗಳು ಸುಳ್ಳು ದಾಖಲೆ ಗಳನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ,ಮಾನಸಿಕ ಅಸ್ವಸ್ಥ ಕಾಯಿಲೆಗೆ ಸಂಬಂಧಿಸಿದಂತೆ ನಾನು ಯಾವ ಚಿಕಿತ್ಸೆ ಪಡೆಯಲಿಲ್ಲ. ಚಿಕಿತ್ಸೆಯ ಅಗತ್ಯ ನನ್ನ ಪಾಲಕರಿಗಿದೆ ಎಂದು ನ್ಯಾಯಮೂರ್ತಿಗಳ ಮುಂದೆ ಸ್ಪಷ್ಟ ಹೇಳಿಕೆ ನೀಡಿದಳು.

ವಾದ ಪ್ರತಿವಾದ ಆಲಿಸಿದ ನ್ಯಾಯಲಯ ನೂರ್ ಫಾತೀಮಾ (ಅಶ್ವಿನಿಯನ್ನು) ತನ್ನ ಪತಿ ಇರ್‌ಫಾನ್‌ನ ಜೊತೆಗೆ ಹೋಗಲು ಅನುಮತಿ ನೀಡಿತು. ಇದರಿಂದ ಸಾಕಷ್ಟು ಗೊಂದಲಗಳಿಗೆ ಎಡೆ ಮಾಡಿ ಕೊಟ್ಟಿದ್ದ ಕಲ್ಪತ ‘ಲವ್ ಜಿಹಾದ್’ ಪ್ರಕರಣ ಸುಖಾಂತ್ಯಗೊಂಡಂತಾಗಿದೆ. 

ಹಿನ್ನಲೆ:

2004 ರಲ್ಲಿ ಒಂದು ಫೋನ್ ಕರೆ ಸ್ವೀಕರಿಸಿದ ನನ್ನ ಮಗಳು ಮಾನಸಿಕ ಸ್ಥಿಮಿತ ಕಳೆದು ಕೊಂಡಳು. ಯಾವುದನ್ನೂ ಯಾರ ಮುಂದೆಯೂ ಹೇಳದೆ ಅಂತಮುರ್ಖಿಯಾಗಿದ್ದಳು. ವೈದ್ಯರಿಗೆ ತೋರಿಸಿದಾಗ ಮಾನಸಿಕ ಒತ್ತಡ ಹಾಕದೆ ವಿಶ್ರಾಂತಿ ನೀಡಲು ತಿಳಿಸಿದರು. ವೈದ್ಯರ ಸಲಹೆ ಪ್ರಕಾರ ಮಗಳು ಅಶ್ವಿನಿಯನ್ನು 2005  ರಿಂದ 2008 ರವರೆಗೆ ಸಂಪೂರ್ಣ ವಿಶ್ರಾಂತಿಯಲ್ಲಿಡ ಲಾಯಿತು.

2009 ರಲ್ಲಿ ಪಾಲಕರ ಸಹಕಾರದೊಂದಿಗೆ ಅಶ್ವಿನಿ ತನ್ನ ವಿದ್ಯಾಭ್ಯಾಸ ಮುಂದುವರೆಸಿದಳು. ಶಿವಮೊಗ್ಗದ ಡಿವಿ‌ಎಸ್ ಕಾಲೇಜಿನಲ್ಲಿ  ಬಿ‌ಎಸ್ಸಿ ಅಧ್ಯಯನ ಮಾಡುವಾಗ ಶಿವಮೊಗ್ಗದ ನಿವಾಸಿ ವ್ಯಾಪಾರಿ ಬಶೀರ್ ಎಂಬುವವರ ಮಗ ಇರ್‌ಫಾನ್ ಎಂಬ ಯುವಕನ ಪ್ರೇಮಕ್ಕೆ ಸಿಲುಕಿತ್ತಾಳೆ.

ಅಶ್ವಿನಿಯನ್ನು ಇರ್‌ಫಾನ್ ನಿಂದ ದೂರ ಇಡಲು ಆಕೆಯನ್ನು ತಂದೆ ಶ್ರೀನಿವಾಸ ಹೊನ್ನವಳ್ಳಿ ಗ್ರಾಮದ ತನ್ನ ತಾಯಿ ಮನೆಗೆ ಕಳಿಸಿಕೊಡುತ್ತಾನೆ. ಈ ಮಧ್ಯೆ ಮೂರು ತಿಂಗಳ ನಂತರ 4-11-09ಕ್ಕೆ ಶ್ರೀನಿವಾಸನ ಸಹೋದರ ಗೋಪಾಲ್ ಫೋನ್ ಕರೆ ಮಾಡಿ, ಅಶ್ವಿನಿಯನ್ನು ಇರ್‌ಫಾನ್ ಬಲವಂತವಾಗಿ ಕರೆದುಕೊಂಡು ಹೋಗಿದ್ದಾನೆ ಎಂದು ತಿಳಿಸ್ತುತಾನೆ.

ಅಶ್ವಿನಿ ಮನೆಯವರು ಮಗಳಿಗಾಗಿ ಹುಟಕಾಟ ನಡೆಸಿ, ಕೊನೆಗೆ  ಪತ್ತೆಯಾಗದಿದ್ದಾಗ ಇರ್‌ಫಾನ್ ವಿರುದ್ಧ ಪೊಲೀಸ್‌ರಿಗೆ  ದೂರು ನೀಡುತ್ತಾರೆ. 40 ದಿನ ಕಳೆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳ ದಿದ್ದಾಗ ಶ್ರೀನಿವಾಸ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಶ್ರೀನಿವಾಸ ದೂರಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಸೂಕ್ತ ತನಿಖೆ ನಡೆಸಿ ಯುವತಿಯನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ಮತ್ತು ಪೊಲೀಸರಿಗೆ ಸಹಕರಿಸುವಂತೆ ಅಶ್ವಿನಿ ಪಾಲಕರಿಗೆ ಸೂಚಿಸಿತ್ತು. ಇಂದು ನಡೆದ ಅಂತಿಮ ವಿಚಾರಣೆಯಲ್ಲಿ ಹೈಕೋರ್ಟ್ ಅರ್ಜಿಯನ್ನು ವಜಾಗಳಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿತು.

ಲವ್ ಜಿಹಾದ್ ಅಲ್ಲ

‘ಮತಾಂತರಕ್ಕೆ ನನ್ನನ್ನೂ ಯಾರೂ ಬಲವಂತ ಪಡಿಸಿಲ್ಲ. ನಾನು ಸ್ವ‌ಇಚ್ಛೆಯಂತೆ ಇಸ್ಲಾಮ್ ಸ್ವೀಕಾರ ಮಾಡಿದ್ದೇನೆ. ಮತ್ತು ನನ್ನ ಆಯ್ಕೆಯಂತೆ ಮದುವೆಯಾಗಿದ್ದೇನೆ. ಇದು ಲವ್ ಜಿಹಾದ್ ಅಲ್ಲ. ಯಾವುದೇ ಕಾರಣ ಸಿಗದೆ ನನ್ನ ಪಾಲಕರು ಮಾನಸಿಕ ಅಸ್ವಸ್ಥೆ ಎಂದು ಹೈಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ
*ನೂರ್ ಫಾತೀಮ (ಅಶ್ವಿನಿ)

ತೊಂದರೆ ಅನುಭವಿಸಿದ್ದೇನೆ
ಪೊಲೀಸರು ಮತ್ತು ಕೆಲವು ಸಂಘಟನೆಗಳಿಂದ ನಾನು ಮತ್ತು ನನ್ನ ಪಾಲಕರು ಬಹಳಷ್ಟು ತೊಂದರೆ ಅನುಭವಿಸಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ನಾನು ಮತ್ತು ನೂರ್ ಫಾತೀಮ ಇಬ್ಬರೂ ಸೇರಿ ಎದುರಿಸಿದ್ದೇವೆ. ನನಗೆ ಕಾನೂನಿನ ಮೇಲೆ ನಂಬಿಕೆ ಇತ್ತು. ಆ ಪ್ರಕಾರ ನನಗೆ ಜಯ ಸಿಕ್ಕಿದೆ.
    *ಇರ್‌ಫಾನ್, ನೂರ್ ಫಾತೀಮಾಳ ಪತಿ


Share: