ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಉರ್ದು ಶಾಲೆಗಳಿಗೆ ನೀಡುವ ಸೌಲಭ್ಯಗಳ ಉಪಯೋಗ ಪಡೆಯದ ಮುಸ್ಲಿಂ ಸಮುದಾಯ - ಜೆ.ಡಿ. ನಾಯ್ಕ ವಿಶಾದ

ಭಟ್ಕಳ: ಉರ್ದು ಶಾಲೆಗಳಿಗೆ ನೀಡುವ ಸೌಲಭ್ಯಗಳ ಉಪಯೋಗ ಪಡೆಯದ ಮುಸ್ಲಿಂ ಸಮುದಾಯ - ಜೆ.ಡಿ. ನಾಯ್ಕ ವಿಶಾದ

Thu, 04 Feb 2010 03:14:00  Office Staff   S.O. News Service

ಭಟ್ಕಳ:3,ಸರಕಾರವು ಉರ್ದು ಶಾಲೆಗಳಿಗೆ ಬಹಳಷ್ಷು ಸೌಲಭ್ಯಗಳನ್ನು ನೀಡಿದೆ. ಆದರೆ ಭಟ್ಕಳದ ಮುಸ್ಲಿಮ್ ಸಮುದಾಯವು ಅದರ ಸದೂಪಯೋಗವನ್ನು ಪಡೆಯುತ್ತಿಲ್ಲವೆಂದು ಶಾಸಕ ಜೆ.ಡಿ.ನಾಯ್ಕ ವಿಷಾಧವ್ಯಕ್ತಪಡಿದ್ದಾರೆ. ಅವರು ನಗರದ ಡಾರಂಟ ಪ್ರದೇಶದಲ್ಲಿರುವ ಸರಕಾರಿ ಉರ್ದು ಪ್ರಥಮಿಕ ಶಾಲೆಯಲ್ಲಿ ಉರ್ದು ನರ್ಸರಿ(ಬಾಲವಾಡಿ) ಕೇಂದ್ರವನ್ನು ಉದ್ದಾಟಿಸಿ ಮಾತನಾಡುತ್ತಿದ್ದರು. ಮಹಿತಿಕೊರತೆಯಿಂದಾಗಿ ಇಲ್ಲಿನ ಮುಸ್ಲಿಮ್ ಸಮುದಾಯವು ಸರಕಾರಿ ಸೌಲಭ್ಯಗಳಿಂ ವಂಚಿತವಾಗುತ್ತಿದ್ದೆ ಆದ್ದರಿಂದ ಇವರಿಗೆ ಸರಕಾರದ ಯೋಜನೆ ಹಾಗೂ ಸೌಲಭ್ಯಗಳ ಕುರಿತು ಸಮರ್ಪಕವಾದ ಮಾಹಿತಿಯು ದೊರೆಯುವಂತಾಗಬೇಕು ಎಂದರು. ಉರ್ದುಶಾಲೆಗಳು ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದ ಶಾಸಕರು ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು ಎಂದು ಸಲಹೆಯನ್ನು ನೀಡಿದರು.

 

 


3-bkl-01.jpg 

 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಟ್ಕಳ ಕ್ಷೇತ್ರಶಿಕ್ಷಣಾಧಿಕಾರಿ ದೇವಿದಾಸ್ ಎಮ್. ಮೊಗೆರ್ ಮಾತನಾಡಿ ಡಾರಂಟ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಪ್ರಸಕ್ತ ಪರಿಸ್ಥಿಯ ಕುರಿತು ಸಾರ್ವಜನಿಕರ ಪಾಲಕರ ಗಮವನ್ನು ಸೆಳೆದು ಇಲ್ಲಿನ ಮಕ್ಕಳ ದಾಖಲಾತಿಯು ಬಹಳ ಕಡಿಮೆಯಿದ್ದು ಪರಿಸ್ಥಿತಿಯು ಹೀಗೆಯೆ ಮುಂದುವರಿದರೆ ನಾವು ಈ ಶಾಲೆಯನ್ನು ಮುಚ್ಚಬೇಕುತ್ತದೆ ಆದ್ದರಿಂದ ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉರ್ದುಶಿಕ್ಷಣವನ್ನು ನೀಡಲು ಮುಂದೆ ಬರಬೇಕು ನಾವು ತಮಗೆ ಎಲ್ಲಾ ರೀತಿಯಿಂದಲೂ ಸಹಕರಿಸುವದಾಗಿ ತಿಳಿಸಿದರು. ಒಂದು ಕಾಲದಲ್ಲಿ ಈ ಶಾಲೆಯಲ್ಲಿನ ಮಕ್ಕಳ ದಾಖಲಾತಿಯು ೩೦೦ ಕ್ಕೂ ಮಿಕ್ಕಿ ಇರುತ್ತಿದ್ದು ಈಗ ೧ರಿಂದ೭ ತರಗತಿಯವರೆಗೆ ಕೇವಲ ೧೮ ಮಕ್ಕಳು ಇದ್ದಾರೆ. ಇದರಲ್ಲಿ ಗೈರು ಹಾಜರಿ ಇರುವವರೆ ಹೆಚ್ಚು ಹೀಗಾದರೆ ಶಾಲೆ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಸರಕಾರವು ಅಲ್ಪ ಸಂಖ್ಯಾತರಿಗೆ ಹಲವಾರು ಯೋಜನೆಗಳನ್ನು ನೀಡಿದೆ ಆ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.

 

 

ಮೂನ್ ಸ್ಟಾರ್ ಯೂತ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಯೂಸೂಫ್ ಬೆಳ್ಳಿ, ಪ್ರ.ಕಾ. ಇನಾಯತುಲ್ಲಾ ಗವಾಯಿ, ಸಲೀಮ್ ಬೆಳ್ಳಿ, ಉರ್ದು ಸಂಪನ್ಮೂಲ ವ್ಯಕ್ತಿ ರಿಯಾಝ್ ಆಹ್ಮದ್, ಶಿಕ್ಷಕ ಅಬುಮುಹಮ್ಮದ್, ಫೈಯಾಜ್ ಮುಲ್ಲಾ, ನಿಸಾರ್ ಆಹ್ಮದ್ ಮುತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Share: