ಭಟ್ಕಳ. ಫೆಬ್ರವರಿ 8: ಕಳೆದ ಕೆಲವು ದಿನಗಳ ಹಿಂದೆ ಭಟ್ಕಳದಲ್ಲಿ ಕ್ರೈಸ್ತರ ಆರಾಧನಾಲಯಗಳ ಮೇಲೆ ನಡೆದ ದಾಳಿಯ ಹಿನ್ನೆಯಲ್ಲಿ ಭಟ್ಕಳ ನಗರ ಠಾಣೆ ಪೋಲಿಸರು ಶಾಂತಿ ಸಭೆಯನ್ನು ಆಯೋಜಿಸಿದ್ದು ಇದರಲ್ಲಿ ಭಟ್ಕಳದ ಎಲ್ಲಾ ಸಮುದಾಯದವರಿಗೆ ಆಹ್ವಾನ ನೀಡಿದ್ದು ಆದರೆ ಇಲ್ಲಿನ ಪ್ರತಿಷ್ಠಿತ ಸಾಮಾಜಿಕ ರಾಜಕೀಯ ಸಂಸ್ಥೆಯ ಮಜ್ಲಿಸೆ ಇಸ್ಲಾಹ್- ತಂಝೀಮ್ ಗೆ ಪೋಲಿಸರು ಯಾವುದೇ ಆಹ್ವಾನವನ್ನು ನೀಡದೆ ಸಭೆಯಲ್ಲಿ ತಂಝೀಮ್ ನ ಯಾವುದೇ ಸದಸ್ಯ ಭಾಗವಹಿಸಿಲ್ಲ ಅವರಿಗೆ ಆಹ್ವಾನ ನೀಡಿದ್ದರೂ ಅವರು ಬರಲಿಲ್ಲ ಎಂದು ತಂಝೀಮ್ ಕುರಿತ ಜನರಿಗೆ ತಪ್ಪು ಮಾಹಿತಿ ನೀಡಿದ್ದು ತಿಳಿದು ಬಂದಿದ್ದು ಪೊಲಿಸರ ಈ ಧೋರಣೆಯು ಸರಿಯಾಗಿಲ್ಲ.
ತಂಜೀಮ್ ಹೆಸರಿಗೆ ಕಳಂಕ ತರುವಂತಹದ್ದು ಎಂದು ತಂಝೀಮ್ ನ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಜ್ಲಿಸೆ ಇಸ್ಲಾಹ ತಂಝೀಮ್ ಭಟ್ಕಳದಲ್ಲಿ ಶಾಂತಿ ಸೌಹಾರ್ಧತೆಯನ್ನು ಕಾಪಾಡಿಕೊಂಡು ಬರುವಲ್ಲಿ ಅದು ಮಹತ್ತರವಾದ ಪಾತ್ರವನ್ನು ವಹಿಸುತ್ತ ಬಂದಿದೆ. ಯಾವುದೆ ಶಾಂತಿ ಸಭೆ ಜರುಗಲಿ ತಂಝೀಮ್ ನ ಪದಾಧಿಕಾರಿಗಳು ಅದರಲ್ಲಿ ತಪ್ಪದೆ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡುತ್ತ ಬಂದಿದ್ದಾರೆ. ಆದರೆ ಚರ್ಚ ದಾಳಿಯ ಹಿನ್ನೆಲೆಯಲ್ಲಿ ಕರೆದ ಶಾಂತಿ ಸಭೆಯಲ್ಲಿ ತಂಝೀಮ್ ಸಂಸ್ಥೆಗೆ ಪೋಲಿಸರಿಂದ ಯಾವುದೇ ಆಹ್ವಾನ ಬಂದಿರದ ಕಾರಣ ತಾವು ಈ ಸಭೆಗೆ ಹೋಗಲಿಲ್ಲ. ಪೋಲಿಸರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ತಂಝೀಮ್ ಸಂಸ್ಥೆಯ ಮೇಲೆ ಆರೋಪವನ್ನು ಹೋರಿಸುತ್ತಿದ್ದಾರೆ ಪೋಲಿಸರ ಕ್ರಮ ಸರಿಯಲ್ಲ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.