ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ನೇತ್ರಾಣಿ ದ್ವೀಪ ‘ಜೀವವೈವಿಧ್ಯ ತಾಣ’ವಾಗಿ ಘೋಷಣೆ

ಭಟ್ಕಳ: ನೇತ್ರಾಣಿ ದ್ವೀಪ ‘ಜೀವವೈವಿಧ್ಯ ತಾಣ’ವಾಗಿ ಘೋಷಣೆ

Wed, 10 Feb 2010 03:24:00  Office Staff   S.O. News Service
ಭಟ್ಕಳ ಫೆಬ್ರವರಿ ೯: ಮುರ್ಡೇಶ್ವರ ಸಮೀಪದಲ್ಲಿರುವ ನೇತ್ರಾಣಿ ದ್ವೀಪ (ಗುಡ್ಡೆ)ವನ್ನು ರಾಜ್ಯ ಸರಕಾರ ಜೀವ ವೈವಿಧ್ಯ ತಾಣ (ಬಯೋಡೈವರ್ಸಿಟಿ ಹಾಟ್ ಸ್ಪಾಟ್) ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿದೆ.

ಈ ವಿಷಯವನ್ನು ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
 
ಭಟ್ಕಳ ಮತ್ತು ಹೊನ್ನಾವರದ ನಡುವೆ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ ಒಂದು ಕಿ.ಮೀ. ದೂರದಲ್ಲಿರುವ ಈ ಪುಟ್ಟ ದ್ವೀಪ, ದೇಶದ ಅತ್ಯಂತ ಸುಂದರ ಬೀಚ್‌ನ್ನು ಹೊಂದಿದೆ. ಇದನ್ನು ಪಾರಿವಾಳ ದ್ವೀಪ (ಪಿಝನ್ ಐಲೆಂಡ್) ಎಂದೂ ಕರೆಯುತ್ತಾರೆ.
9-mur2.jpg
9-mur3.jpg
ಈ ಪುಟ್ಟ ದ್ವೀಪದಲ್ಲಿರುವ ಜೀವವೈವಿಧ್ಯತೆಗಳು ಅಪಾರ. ಇಲ್ಲಿ ಅಪರೂಪದ ಸಮುದ್ರ ಪ್ರಾಣಿ ಮತ್ತು ಸಸ್ಯ ಸಂಕುಲಗಳಿದ್ದು, ಇವುಗಳ ಸಂರಕ್ಷಣೆಯ ತುರ್ತು ಅಗತ್ಯ ವಿರುವ ಕಾರಣ, ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಅಶೀಸರ ವಿವರಿಸಿದರು. 

ರಾಜ್ಯದ ಪರಿಸರ ಮತ್ತು ಜೀವವೈವಿಧ್ಯ ಮಂಡಳಿ ಈ ಘೋಷಣೆ ಮಾಡಿದೆ ಎಂದು ಅವರು ಹೇಳಿದರು. ಇನ್ನು ಮುಂದೆ ಜೀವವೈವಿಧ್ಯ ಮಂಡಳಿ, ವನ್ಯಜೀವಿ ಮಂಡಳಿ, ಅರಣ್ಯ ಇಲಾಖೆಗಳು ಸೇರಿ ಇಲ್ಲಿನ ಜೀವವೈವಿಧ್ಯತೆಗಳ ರಕ್ಷಣೆಗೆ ಮುಂದಾಗಲಿವೆ ಎಂದವರು ತಿಳಿಸಿದರು.
ಈ ಎಲ್ಲ ಇಲಾಖೆಗಳು ಸೇರಿ ಇಲ್ಲಿನ ಜೀವವೈವಿಧ್ಯತೆಗಳ ರಕ್ಷಣೆಗೆ ಕಾರ್ಯಕ್ರಮ ರೂಪಿಸಲಿವೆ. ಇಲ್ಲೊಂದು ಅಧ್ಯಯನ ಕೇಂದ್ರವನ್ನು ಆರಂಭಿಸುವ, ಕರಾವಳಿಯ ನೈಸರ್ಗಿಕ ತಾಣವೆಂದು ಘೋಷಿಸುವ ಸಲಹೆಯೂ ಪರಿಶೀಲನೆಯಲ್ಲಿದೆ. ನಾಳೆ ತಾನು ನೇತ್ರಾಣಿ ಗುಡ್ಡೆಗೆ ಭೇಟಿ ನೀಡುವುದಾಗಿಯೂ ಅವರು ಹೇಳಿದರು.

ಆಳ ಸಮುದ್ರ ಡೈವಿಂಗ್ ತಾಣ
 
9-mur4.jpg 
 

ನೇತ್ರಾಣಿ ಬೀಚ್ ಹೆಸರಾಗಿರುವುದು ಆಳ ಸಮುದ್ರ ಡೈವರ್‌ಗಳ ಸ್ವರ್ಗವೆಂದು. ದೂರದ ಬೆಂಗಳೂರು ಮತ್ತಿತರ ಪ್ರದೇಶಗಳಿಂದ ಸಾಕಷ್ಟು ಸಂಖ್ಯೆಯ ಡೈವರ್‌ಗಳು ಇಲ್ಲಿಗೆ ಬರುತ್ತಾರೆ. ಮಾರಿಸಸ್ ಹಾಗೂ ಇತರ ಸುಂದರ ಬೀಚ್‌ಗಳಂತೆ ಇಲ್ಲೂ ಸಮುದ್ರದಡಿ ಯಲ್ಲಿ  ವೈವಿಧ್ಯಮಯ, ಬಣ್ಣ ಬಣ್ಣದ ಮೀನುಗಳು  ಈಜುವುದನ್ನು ಇಲ್ಲಿ ಸ್ಪಷ್ಟವಾಗಿ ಕಾಣಬಹುದು. ಅಪರೂಪದ ಆಮೆಗಳು, ಹಲವು ಬಣ್ಣಗಳ ಆಲಂಕಾರಿಕ ಮೀನುಗಳು, ಒಂದೆರಡು ಜಾತಿಯ ಶಾರ್ಕ್ ಮೀನುಗಳೂ ಇಲ್ಲಿ ಕಂಡುಬರುತ್ತದೆ.
ನೇತ್ರಾಣಿ ಗುಡ್ಡೆಯಲ್ಲಿ ನೌಕಾದಳದ ಸಿಬ್ಬಂದಿಗಳನ್ನು ಬಿಟ್ಟರೆ ಕಾಣಿಸಿಕೊಳ್ಳುವುದು ಕೆಲವು ಜಾತಿಯ ಆಡುಗಳು ಮಾತ್ರ. ಆದರೆ ದ್ವೀಪದಲ್ಲಿ ಜೀರ್ಣಾವಸ್ಥೆಯಲ್ಲಿರುವ ದೇವಸ್ಥಾನ, ರೋಮನ್ ಕೆಥೊಲಿಕ್ ಚರ್ಚ್ ಹಾಗೂ ಮಸೀದಿಯು ಕಂಡುಬರುತ್ತದೆ. ಆದುದರಿಂದ ಇದು ಜನವಸತಿ ಇತ್ತು ಎಂಬುದನ್ನು ಸೂಚಿಸುತ್ತದೆ. ಆದರೆ ಈಗ ಇಲ್ಲಿ ಯಾರೂ ವಾಸಿಸುತ್ತಿಲ್ಲ.

ವಿಜ್ಞಾನಿಯ ಮಾತು

ನೇತ್ರಾಣಿ ಗುಡ್ಡೆಯನ್ನು ಜೀವ ವೈವಿಧ್ಯತೆ ತಾಣವೆಂದು ಘೋಷಿ ಸಿರುವುವನ್ನು ಕಾರವಾರದ ವಿಜ್ಞಾನಿ ಹಾಗೂ ಸಮುದ್ರ ಜೀವಶಾಸ್ತ್ರಜ್ಞ ಡಾ.ವಿ.ಎನ್. ನಾಯಕ್ ಸ್ವಾಗತಿಸಿದ್ದಾರೆ.

೨೦೦೪ರಲ್ಲಿ ಮೊದಲ ಬಾರಿ ವಿದ್ಯಾರ್ಥಿಗಳನ್ನು ಈ ದ್ವೀಪಕ್ಕೆ ಪ್ರವಾಸಕ್ಕೆಂದು ಕರೆದೊಯ್ದಾಗ, ಇಲ್ಲಿನ ಜೀವವೈವಿಧವನ್ನು ನೋಡಿ ನಾನು ದಂಗಾದೆ.  ಈ ಕುರಿತು ರಾಜ್ಯ ಪರಿಸರ ಹಾಗೂ ಜೀವವೈವಿಧ್ಯ ಮಂಡ ಳಿಗೆ ಪತ್ರ ಬರೆದೆ. ಅವರು ತಜ್ಞರ ತಂಡವನ್ನು ಕಳುಹಿಸಿ ಈ ಬಗ್ಗೆ ಅಧ್ಯಯನ ನಡೆಸಿ ದ್ದು, ಇದರ ವರದಿ ಆಧಾರ ದಲ್ಲಿ  ಹಾಟ್‌ಸ್ಪಾಟ್  ಎಂದು ಘೋಷಿಸಲಾಗಿದೆ.

ಕಾರವಾರದ ಸೀಬರ್ಡ್ ಯೋಜನೆಯ ಅಂಗವಾಗಿ ನೌಕಾದಳ ಈ ದ್ವೀಪವನ್ನು ಅಭ್ಯಾಸ ತಾಣವಾಗಿ ಬಳಸಿ ಕೊಂಡಿದ್ದು, ಇದಕ್ಕೆ ಈಗ ತಡೆ ಯಾಗಲಿದೆ. ಅಲ್ಲಿ ಅಪರೂ ಪದ ಹರಳು ಬಂಡೆಗಳೂ ಇದ್ದು, ಅವುಗಳ ಬಗ್ಗೆ ಅಧ್ಯ ಯನ ನಡೆಯಬೇಕಿದೆ ಎಂದು ಡಾ.ನಾಯಕ್ ಹೇಳಿದರು

Share: