ಬೆಂಗಳೂರು, ಫೆಬ್ರವರಿ 6: ಬಿಟಿ ಬದನೆಯೋ, ನಾಟಿ ಬದನೆಯೋ - ತೀರ್ಮಾನ ಫೆಬ್ರವರಿ ೧೦ ರಂದು ತೀರ್ಮಾನ ಕೈಗೊಳ್ಳುವುದಾಗಿ ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಜೈರಾಂ ರಮೇಶ್ ಹೇಳಿದ್ದಾರೆ.
(ಕುಲಾಂತರಿ ಬದನೆ)ಗೆ ಭಾರತದಲ್ಲಿ ಅವಕಾಶ ನೀಡಬೇಕೆ ಬೇಡವೇ ಎನ್ನುವ ಬಗ್ಗೆ ಚರ್ಚಿಸಲು ಕೇಂದ್ರದ ಪರಿಸರ ಸಚಿವ ಜಯರಾಮ್ ರಮೇಶ್ ಸಮ್ಮುಖದಲ್ಲಿ ನಡೆದ ರೈತರು, ವಿಜ್ಞಾನಿಗಳು, ಸಾಹಿತಿಗಳು, ಉದ್ಯಮಿಗಳು, ವೈದ್ಯರು, ವಿದ್ಯಾರ್ಥಿಗಳು, ವರಿಷ್ಠ ನೇತಾರರು ಸೇರಿದಂತೆ ವಿವಿಧ ರಂಗಗಳ ಗಣ್ಯರ ಸಭೆಯಲ್ಲಿ ಬಿಟಿ ಬದನೆಗೆ ಪ್ರಬಲ ವಿರೋಧ ವ್ಯಕ್ತವಾಗಿದೆ.
ರಾಷ್ಟ್ರದಲ್ಲಿ ಬಿಟಿ ಬದನೆಗೆ ಅವಕಾಶ ನೀಡಬೇಕೆ ಬೇಡವೆ ಎನ್ನುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸಚಿವ ಜೈರಾಂ ರಮೇಶ್ ಕರೆದಿದ್ದ ಈ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ರೈತ ಮುಖಂಡರು, ಸಾಹಿತಿಯಗಳು ವರಿಷ್ಠ ರಾಜಕೀಯ ನಾಯಕರುಗಳು ಬಿಟಿ ಬದನೆ ಬೇಡವೇ ಬೇಡ ಎನ್ನುವ ಸ್ವಷ್ಟ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆ ನಡೆದ ವಿಶ್ವ ವಿದ್ಯಾಲಯದ ಜ್ಞಾನಜೋತಿ ಸಭಾಂಗಣದ ಹೊರಗೆ ಸಹ ನೂರಾರು ರೈತರು ಬಿಟಿ ಬದನೆ ವಿರುದ್ಧ ಪ್ರತಿಭಟನೆ ನಡೆಸಿ ಬಿಟಿ ಬದನೆಗೆ ವಿರೋಧ ವ್ಯಕ್ತಪಡಿಸಿದರು.
ಸಭೆಯ ಆರಂಭದಿಂದ ಅಂತ್ಯದವರೆಗೂ ಬಿಟಿ ಬದನೆ ಬೇಡ ಎನ್ನುವ ಕೂಗು ಕೇಳುತ್ತಲೇ ಇತ್ತು. ಗೊಂದಲ ಗಲಾಟೆಗಳ ನಡುವೆಯೇ ವಿವಿಧ ರಂಗಗಳ ಗಣ್ಯರೂ, ರೈತರೂ ರೈತ ಪರ ಮುಖಂಡರು, ನೇತಾರರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಜ್ಞಾನ ಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು. ಆರ್. ಅನಂತಮೂರ್ತಿ, ರೈತಪರ ಹೋರಾಟಗಾರ ಪುಟ್ಟಣ್ಣಯ್ಯ ಕೋಡಿ ಹಳ್ಳಿ ಚಂದ್ರಶೇಖರ್, ಸುನಂದ ಜಯರಾಮ್, ಮಾಜಿ ಪ್ರಧಾನಿ ದೇವೇಗೌಡ, ಪರಿಸರ ವಾದಿಗಳು, ವಿದ್ಯಾರ್ಥಿ ಮುಖಂಡರುಗಳು ಬಿಟಿ ಬದನೆಗೆ ವಿರೋದ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿ ವಿಜ್ಞಾನಿಗಳು ರೈತ ಮೇಲೆ ಪ್ರಯೋಗ ಮಾಡುವುದನ್ನು ಬಿಡುವಂತೆ ಸಲಹೆಮಾಡಿ ಬಿಟಿ ಬದನೆ ಬೇಡ ಎಂದು ಪ್ರಧಾನಿಗಳಿ ಪತ್ರ ಬರೆಯುವುದಾಗಿ ಹೇಳಿದರು.
ರೈತ ಮುಖಂಡ ಪುಟ್ಟಣ್ಣಯ್ಯ ಪ್ರಾಣಿ ಸಂಕುಲಕ್ಕೆ ಅಪಾಕಾರಿಯಾಗಿರುವ ಬಿಟಿ ಬದನೆಗೆ ಅವಕಾಶ ಬೇಡ ದೇಶಿಯ ಬೆಳೆಗಳಿಗೆ ಉತ್ತೇಜನ ನೀಡುವಂತೆ ಕೇಂದ್ರ ಸಚಿವರನ್ನು ಆಗ್ರಹಿಸಿದರು.
ಬಿಟಿ ಬದನೆಯಲ್ಲಿ ೫೫ ತಳಿಯ ಬದನೆಗಳು ಇದ್ದು, ಇವುಗಳಲ್ಲಿ ಯಾವುದೇ ರೀತಿಯ ರುಚಿ ಇರುವುದಿಲ್ಲ. ಅಲ್ಲದೆ, ಬಿಟಿ ಬದನೆ ಮಾನವ ಕುಲಕ್ಕೆ ಮಾರಕವಾಗಿರುವ ಹಿನ್ನೆಲೆಯಲ್ಲಿ ಬಿಟಿ ಬದನೆಯನ್ನು ದೇಶ ದೊಳಕ್ಕೆ ಪ್ರವೇಶಿಸುವುದಕ್ಕೆ ಬಿಡಬಾರದೆಂದು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೇಳಿಬಂತು.
ಕಳೆದ ಅರ್ಧ ಶತಮಾನಗಳಿಗೂ ಹೆಚ್ಚು ಕಾಲ ದೇಶದಲ್ಲಿ ನಾಟಿ ಬದನೆಯನ್ನು ಉಪಯೋಗಿಸುತ್ತಿದ್ದೆವು. ಈ ವೇಳೆ ಯಾವುದೇ ರೀತಿಯ ರೋಗ ಇರಲಿಲ್ಲ ಎಂದು ಸಭೆಯಲ್ಲಿ ರೈತರು ಪ್ರತಿಪಾಧಿಸಿದರು.
ಪೆಬ್ರವರಿ ೧೦ ನಂತರ ತೀರ್ಮಾನ: ಸಭೆಯಲ್ಲಿ ಮಾತನಾಡಿದ ಸಚಿವ ಜಯರಾಮ್ ರಮೇಶ್ ಬಿಟಿ ಬದನೆ ಬಗ್ಗೆ ಪೆಬ್ರವರಿ ೧೦ ರಂದು ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎಂದರು.
ರಾಷ್ಟ್ರಾಧ್ಯಂತ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಯಾವುದೇ ಪ್ರಭಾವ ಒತ್ತಡಕ್ಕೆ ಎಲ್ಲರಿಗೂ ಮಣಿಯದೆ ಎಲ್ಲರಿಗೂ ಸರ್ವ ಅನುಕೂಲವಾಗುವ ರೀತಿಯಲ್ಲಿಯೇ ನಿದ್ಧಾರ ಕೈಗೊಳ್ಳುವುದಾಗಿ ಸ್ವಷ್ಟಪಡಿಸಿದರು.