ಭಟ್ಕಳ, ಮಾರ್ಚ್ 6: ಭಟ್ಕಳ ತಾಲೂಕು ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರ ಹುದ್ದೆಗೆ ಎಸ್ಎಸ್ಎಲ್ಸಿ ಪಾಸಾದ ಅದೇ ಅಂಗನವಾಡಿ ಗ್ರಾಮ ವ್ಯಾಪ್ತಿಯ ರಹವಾಸಿ ೧೮-೪೪ ವಯೋಮಿತಿ ಒಳಗಿನ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಯಾವುದೇ ಸಂದರ್ಶನವಿರುವುದಿಲ್ಲ. ಸ್ಥಳೀಯ ಅಭ್ಯರ್ಥಿ ಹಾಗೂ ಮೆರಿಟ್ ಆಧಾರದ ಮೇಲೆ ನಿಯಮಾನುಸಾರ ಆಯ್ಕೆ ಮಾಡಲಾಗುವುದು. ಅಂಗನವಾಡಿ ವ್ಯಾಪ್ತಿಯ ಜನಸಂಖ್ಯೆ ಆಧಾರದ ಮೇಲೆ ಅಲ್ಪಸಂಖ್ಯಾತರು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾತಿ ಇರುವುದು. ಅರ್ಜಿ ನಮೂನೆಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಿಂದ ಪಡೆದು ನಿಗದಿಪಡಿಸಿದ ದಿನಾಂಕದೊಳಗೆ ಅಗತ್ಯವಿರುವ ಎಲ್ಲ ದೃಢಿಕೃತ ದಾಖಲೆಗಳೊಂದಿಗೆ ಸ್ವತಃ ಕಛೇರಿಗೆ ತಲುಪಿಸಿ ಸ್ವೀಕೃತಿ ಪಡೆದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಅರ್ಜಿ ಆಹ್ವಾನಿಸಿರುವ ಅಂಗನವಾಡಿ ಕೇಂದ್ರಗಳ ಪಟ್ಟಿಗಳನ್ನು ಆಯಾ ಗ್ರಾಮಪಂಚಾಯತ/ಪುರಸಭೆ ಕಾರ್ಯಾಲಯದಲ್ಲಿ ಪ್ರಕಟಿಸಲಾಗಿದ್ದು, ಪ್ರಸ್ತಾವಿತ ಅಂಗನವಾಡಿ ವ್ಯಾಪ್ತಿಯೊಳಗೆ ಇರುವ ಶಾಲೆಗಳಲ್ಲಿಯೂ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಸ್ಥಳೀಯರಾಗಿದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಪ.ಜಾಆತಿ/ಪ.ಪಂಗಡ/ಅಲ್ಪಸಂಖ್ಯಾತರಿಗೆ, ಅಂಗವಿಕಲರು, ವಿಧವೆಯರು, ಪರಿತ್ಯಕ್ತೆಯರಿಗೆ ನಿಯಮಾನುಸಾರ ಆದ್ಯತೆ ನೀಡಲಾಗುವುದು. ದೃಢೀಕೃತ ಎಲ್ಲ ದಾಖಲೆಗಳನ್ನು ಲಗತ್ತಿಸಿದಲ್ಲಿ ಮಾತ್ರ ಅರ್ಜಿಯನ್ನು ಸ್ವೀಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಭಟ್ಕಳ ಇವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಾಡುವಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯ ಹೆಂಜಿಲ್ ಅಂಗನವಾಡಿ ಕೇಂದ್ರ, ಬೈಲೂರು ವ್ಯಾಪ್ತಿಯ ಖಾಸಗೇರಿ ಕೇಂದ್ರ, ಜಾಲಿಪಂಚಾಯತ ವ್ಯಾಪ್ತಿಯ ಜಾಲಿಕೋಡಿ ಹಾಗೂ ಜಂಗನಗದ್ದೆ, ಹೆಬಳೆಯ ಬೇಲೆಗದ್ದೆ, ಯಲ್ವಡಿಕವೂರಿನ ತಿಲಕನಗರ, ಕಟಗಾರಕೊಪ್ಪ ವ್ಯಾಪ್ತಿಯ ಕೊಳ್ಕಿ-ಕರೂರು, ಮಾಸ್ತಿ ಬಯಲು ಹಾಗೂ ತಲೋಂಡ, ಕಾಯ್ಕಿಣಿ ಮುಲ್ಲಿಗದ್ದೆ(ಮಿನಿ), ಮಾವಳ್ಳಿ ಪಂಚಾಯತ ವ್ಯಾಪ್ತಿಯ ಕಿಸ್ಕಾರ ಮಕ್ಕಿ (ಮಿನಿ) ಅಂಗನವಾಡಿ ಕೇಂದ್ರಗಳಿಗೆ ಮೀಸಲಾತಿಯನ್ನು ‘ಸಾಮಾನ್ಯ’ ವರ್ಗಕ್ಕೆ ನೀಡಲಾಗಿದೆ. ಮಾವಳ್ಳಿಯ ನಾಖುದ್ ಮೊಹಲ್ಲಾ, ಪುರಸಭಾ ವ್ಯಾಪ್ತಿಯ ಮುಗ್ಧಂ ಕಾಲೋನಿ ಉರ್ದು ಶಾಲೆ, ಡಾರಂಟಾ ಉರ್ದು ಶಾಲೆ, ಹೆಬಳೆ ಗ್ರಾಮಪಂಚಾಯತ ವ್ಯಾಪ್ತಿಯ ಜಾಮೀಯಾಬಾದ್ ಉರ್ದು ಶಾಲೆ, ಆಜಾದ್ ನಗರ ಉರ್ದುಶಾಲೆ ಅಂಗನವಾಡಿ ಕೇಂದ್ರಗಳಿಗೆ ಅಲ್ಪಸಂಖ್ಯಾತ ವರ್ಗಕ್ಕೆ ಮೀಸಲಾತಿಯನ್ನು ನೀಡಲಾಗಿದೆ. ಪುರಸಭಾ ವ್ಯಾಪ್ತಿಯ ಕೋಕ್ತಿ ಭಾಗಕ್ಕೆ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ನೀಡಿ ಪ್ರಕಟಣೆ ಹೊರಡಿಸಲಾಗಿದೆ.