‘ಜಾತಿ ಧರ್ಮದ ಹೆಸರಿನಲ್ಲಿ ಕಾರ್ಮಿಕರ ಒಗ್ಗಟ್ಟನ್ನು ಒಡೆಯಲು ಯತ್ನ’
ತುಮಕೂರು, ಮೇ 2: ಕೋಮುವಾದಿಗಳು, ಜಾತಿ ಧರ್ಮದ ಹೆಸರಿನಲ್ಲಿ ಕಾರ್ಮಿಕರ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಇದರ ಬಗ್ಗೆ ಕಾರ್ಮಿಕರು ಸದಾ ಎಚ್ಚರದಿಂದ ಇರಬೇಕೆಂದು ಸಿಐಟಿಯು ಮುಖಂಡ ಸೈಯದ್ ಮುಜೀಬ್ ಕಿವಿ ಮಾತು ಹೇಳಿದ್ದಾರೆ.
ಮೇ ದಿನಾಚರಣೆ ಅಂಗವಾಗಿ ನಗರದ ವಿವಿಧ ಕಾರ್ಮಿಕ ಸಂಘಟನೆ ಗಳ ವತಿಯಿಂದ ನಗರದ ಟೌನ್‌ಹಾಲ್ ವೃತ್ತದಲ್ಲಿ ಕಾರ್ಮಿಕ ದಿನಚಾರಣೆ ಕಾರ್ಯಕ್ರಮದಲ್ಲಿ ಸಿಐಟಿಯು ಮುಖಂಡ ಸೈಯದ್ ಮುಜೀಬ್ ಮಾತನಾಡಿ, ಕೋಮುವಾದಿಗಳು, ಜಾತಿ ಧರ್ಮದ ಹೆಸರಿನಲ್ಲಿ ಕಾರ್ಮಿಕರ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸುತ್ತಿದ್ದು ಇದರ ಬಗ್ಗೆ ಕಾರ್ಮಿಕರ ಸದಾ ಎಚ್ಚರದಿಂದ ಇರಬೇಕೆಂದು ಬಂಡವಾಳಶಾಹಿಗಳ ಕೈಗೆ ಅಧಿಕಾರ ಸಿಕ್ಕಾಗ ಏನಾಗುತ್ತದೆ ಎಂಬುದಕ್ಕೆ ಪ್ರಪಂಚದ ಅರ್ಥಿಕ ಕುಸಿತವೇ ಒಂದು ಒಳ್ಳೆಯ ಉದಾಹರಣೆ ಎಂದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಹಲವಾರು ಜನವಿರೋಧಿ, ದುಡಿಯುವ ಜನರ ವಿರೋಧಿ ಕಾನೂನುಗಳು ಜಾರಿಯಾಗುತ್ತಿದ್ದು, ಕಾರ್ಮಿಕರ ವಿರುದ್ಧವಾಗಿರುವ ಸರಕಾರಗಳಿಗೆ ಉಳಿಗಾಲವಿಲ್ಲವೆಂದರು. ಗೋಮಾಂಸ ವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ದೂರಿದರು.
ಎಐಟಿಯುಸಿ ಮುಖಂಡ ಎನ್.ಶಿವಣ್ಣ ಮಾತನಾಡಿ, ಬಂಡವಾಳ ಶಾಹಿಗಳು ಬಲಗೊಳ್ಳುತ್ತಿದ್ದು, ಕಾರ್ಮಿ ಕರ ಹಕ್ಕುಗಳ ರಕ್ಷಣೆಗಾಗಿ ನಾವೆಲ್ಲಾ ಒಗ್ಗೂಡಬೇಕಾಗಿದೆ. ಅಸಂಘಟಿತ ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ.
ಇಡೀ ವ್ಯವಸ್ಥೆಯೇ ದುಡಿಯುವ ವರ್ಗದ ವಿರುದ್ಧವಾಗಿದೆ. ಸ್ಥಳಿಯ ಶಾಸಕರು ನಾಲ್ಕು ಬಾರಿ ಆಯ್ಕೆಯಾದರೂ ನಗರದ ಅಭಿವೃದ್ಧಿಗೆ ಏನು ಕೊಡುಗೆ ನೀಡಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡರಾದ ಲಕ್ಷ್ಮ್ಮಣ್, ಟಿ.ಆರ್.ಶಿವಣ್ಣ, ಅಂಚೆ ನೌಕರರ ಸಂಘದ ಅಧ್ಯಕ್ಷ ಬೆಟ್ಟಯ್ಯ, ಹಿರಿಯ ಕಾರ್ಮಿಕ ಮುಖಂಡ ಮುಹಮ್ಮದ್ ದಸ್ತಗೀರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಶಿವರಾಮ ಯ್ಯರಿಗೆ ಸರೋಜಮ್ಮ ಟಿ.ಆರ್.ರೇವಣ್ಣ ಟ್ರಸ್ಟ್ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.