ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ: ಹೂಡೆ ಜಮಾತೆ ಇಸ್ಲಾಮಿ ಹಿಂದ್ ಸಮಾಜಸೇವಾ ಅಂಗದಿಂದ ನೂತನ ಜಾಮಿಯಾ ಮಸೀದಿಗೆ ದಾರಿದೀಪ ದಾನ

ಉಡುಪಿ: ಹೂಡೆ ಜಮಾತೆ ಇಸ್ಲಾಮಿ ಹಿಂದ್ ಸಮಾಜಸೇವಾ ಅಂಗದಿಂದ ನೂತನ ಜಾಮಿಯಾ ಮಸೀದಿಗೆ ದಾರಿದೀಪ ದಾನ

Mon, 07 Dec 2009 20:17:00  Office Staff   S.O. News Service
ಉಡುಪಿ, ಡಿಸೆಂಬರ್ 7:  ಜಿಲ್ಲೆಯ ಹೂಡೆಯ ಮುಖ್ಯ ರಸ್ತೆಯಲ್ಲಿರುವ ನೂತನ ಜಾಮಿಯಾ ಮಸೀದಿ ಬಳಿ ದಾರಿದೀಪವೊಂದನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.

ಈ ದಾರಿದೀಪವನ್ನು ಹೂಡೆಯ ಜಮಾತೆ ಇಸ್ಲಾಮಿ ಹಿಂದ್ ಸಮಾಜಸೇವಾ ಘಟಕ ಸ್ಥಾಪಿಸಿದೆ.  ಸಂಘಟನೆಯ ಉಡುಪಿ ಜಿಲ್ಲಾ ಕಾರ್ಯದರ್ಶಿ ಅನ್ವರ್ ಅಲಿಯವರು ಈ ದೀಪವನ್ನು ಉದ್ಘಾಟಿಸಿ ಪಂಚಾಯತ್ ನೊಂದಿಗೆ ಸಾರ್ವಜನಿಕರ ಸಹಕಾರ ಎಂದಿಗೂ ಸಮಾಜದ ಏಳ್ಗೆಗೆ ಪೂರಕವಾಗುವುದು ಎಂದು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪಂಚಾಯತ್ ಅಧ್ಯಕ್ಷ ವೆಂಕಟೇಶ್ ಕುಂದರ್ ರವರು ಜೈ.ಐ.ಹೆಚ್,ಎಸ್.ಎಸ್.ಯು. ಸಂಘಟನೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.  ಪಂಚಾಯತ್ ಉಪಾಧ್ಯಕ್ಷ ಉಸ್ತಾದ್ ಸಾಧಿಕ್, ಜಮಾತ್ ಇಸ್ಲಾಮಿ ಹಿಂದ್ ಹೂಡೆ ಸಂಘಟನೆಯ ಅಧ್ಯಕ್ಷ ಹೂಡೆ ಮೌಲಾನಾ ಆದಂ ಸಾಹೇಬ್, ಪಂಚಾಯತ್ ಸದಸ್ಯರಾದ ಟಿ.ಎಸ್.ಸಾಧಿಕ್, ಉಸ್ತಾದ್ ಜಫರುಲ್ಲಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು. 

Share: