ಕಾರವಾರ, ಮಾ. ೭: ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ತವರಲ್ಲೇ ವಿಜ್ಞಾನದ ವಿದ್ಯಾರ್ಥಿಗಳು ಸೂಕ್ತ ಪ್ರಯೋಗಾಲಯ ವ್ಯವಸ್ಥೆ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದ ಅಕ್ಟೋಬರ್ ೨ರಂದು ಸುರಿದ ಮಳೆಗೆ ಇಲ್ಲಿನ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಯೋಗಾಲಯದ ಮೇಲ್ಛಾವಣಿ ಹಾರಿ ಹೋಗಿತ್ತು. ಆಗ ಸ್ವತಃ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರದಲ್ಲಿ ದುರಸ್ತಿ ಮಾಡಿಕೊಡುವ ಭರವಸೆ ನೀಡಿದ್ದರು.
ಅದರಂತೆ ಪ್ರಯೋಗಾಲಯ ದುರಸ್ತಿಗೆ ನೆರೆ ಪರಿಹಾರ ನಿಧಿಯಿಂದ ೧೫ ಲಕ್ಷ ರೂ. ಬಿಡುಗಡೆ ಯಾಗಿತ್ತು. ಅಲ್ಲದೇ ಕಾಲೇಜು ಶಿಕ್ಷಣ ಇಲಾಖೆಯಿಂದ ೨೪ ಲಕ್ಷ ರೂ. ಅನುದಾನ ಬಿಡುಗಡೆ ಯಾಗಿತ್ತು. ಈ ಪ್ರಯೋಗಾಲಯದ ದುರಸ್ತಿ ಕಾರ್ಯವನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆ ಕಾಮಗಾರಿಯನ್ನು ನಡೆಸದ ಕಾರಣ ಪ್ರಯೋಗಾಲಯ ಅನಾಥವಾಗಿದೆ. ವಿದ್ಯಾರ್ಥಿಗಳು ಪ್ರಯೋಗ ನಡೆಸಲು ತೊಂದರೆ ಅನುಭವಿಸ ಬೇಕಾಗಿದೆ.
ಬಿಎಸ್‌ಸಿ ಮತ್ತು ಎಂಎಸ್‌ಸಿ ವಿದ್ಯಾರ್ಥಿಗಳು ಸೇರಿ ಸುಮಾರು ೪೦೦ ಕ್ಕೂ ಹೆಚ್ಚು ವಿದ್ಯಾರ್ಥಿಗ ಳು ಇಲ್ಲಿ ಕಲಿಯುತ್ತಿದ್ದಾರೆ. ಇದ್ದ ಒಂದು ಪ್ರಯೋಗಾಲಯದ ಮೇಲ್ಛಾವಣಿ ಬಿದ್ದಿರುವುದರಿಂದ ವಿದ್ಯಾರ್ಥಿಗಳು ಪ್ರಯೋಗ ನಡೆಸಲು ತೊಂದರೆ ಅನುಭವಿಸಬೇಕಾಗಿದೆ. ಸಾಮಗ್ರಿಗಳನ್ನು ಕಾಲೇಜಿನ ವರಾಂಡದಲ್ಲಿ ಇಟ್ಟುಕೊಂಡು ವಿದ್ಯಾರ್ಥಿಗಳು ಪ್ರಯೋಗ ನಡೆಸುತ್ತಿದ್ದಾರೆಭಾನುವಾರ ಮತ್ತು ಹೆಚ್ಚುವರಿ ತರಗತಿಗಳನ್ನು ಪಡೆದು ಪ್ರಾಧ್ಯಾಪಕರು ಇದ್ದ ಸಾಮಗ್ರಿಗಳನ್ನೇ ಉಪಯೋಗಿಸಿಕೊಂಡು ಅತ್ಯಂತ ಇಕ್ಕಟ್ಟಾದ ಸ್ಥಳದಲ್ಲೇ ಪ್ರಯೋಗ ನಡೆಸುತ್ತ ಬಂದಿದ್ದಾರೆ.
ಕಾಲೇಜಿನ ಮೊದಲ ಸೆಮಿಸ್ಟರ್ ಮುಗಿದು ಎರಡನೇ ಸೆಮಿಸ್ಟರ್ ಪ್ರಾರಂಭವಾಗುವ ಅವಧಿಯಲ್ಲಿ ಪ್ರಯೋಗಾಲಯದ ದುರಸ್ತಿ ಕಾರ್ಯ ಮುಗಿಸಿಕೊಡುವುದಾಗಿ ಲೋಕೋಪಯೋಗಿ ಇಲಾಖೆ ಭರವಸೆ ನೀಡಿತ್ತು. ಆದರೆ ಮೊದಲ ಸೆಮಿಸ್ಟರ್ ರಜೆ ಮುಗಿದು ಎರಡನೇ ಸೆಮಿಸ್ಟರ್ ಪ್ರಾರಂಭ ವಾಗಿದೆ. ಮೇಲ್ಛಾವಣಿ ಬಿದ್ದು ಐದು ತಿಂಗಳು ಕಳೆದಿದೆ. ಆದರೆ ಇದುವರೆಗೂ ಪ್ರಯೋಗಾಲಯದ ದುರಸ್ತಿ ಕಾರ್ಯ ನಡೆದಿಲ್ಲ.
ಇನ್ನೊಂದು ತಿಂಗಳು ಕಳೆದರೆ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ವಿದ್ಯಾರ್ಥಿಗಳು ಆತಂಕದಲ್ಲಿ ದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಕಾಲೇಜಿಗೆ ಪತ್ರ ಬರೆದು ಕಾಲೇಜು ಶಿಕ್ಷಣ ಇಲಾ ಖೆಯಿಂದ ಹಣ ಬಿಡುಗಡೆಯಾಗಿಲ್ಲ. ಹಣ ಬಂದ ತತ್‌ಕ್ಷಣ ಪ್ರಯೋಗಾಲಯ ದುರಸ್ತಿ ನಡೆಸಲಾ ಗುವುದು ಎಂದಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ ಅವರ ಊರಿನಲ್ಲೇ ವಿಜ್ಞಾನದ ವಿದ್ಯಾರ್ಥಿಗಳು ಸಂಕಷ್ಟ ಎದುರಿಸ ಬೇಕಾಗಿದೆ.