ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಬಿಬಿಎಂಪಿ ಕಾಮಗಾರಿ ಟೆಂಡರ್ ಪಾರದರ್ಶಕ - ಭರತ್ ಲಾಲ್ ಮೀನಾ ಸ್ಪಷ್ಟನೆ

ಬೆಂಗಳೂರು: ಬಿಬಿಎಂಪಿ ಕಾಮಗಾರಿ ಟೆಂಡರ್ ಪಾರದರ್ಶಕ - ಭರತ್ ಲಾಲ್ ಮೀನಾ ಸ್ಪಷ್ಟನೆ

Sat, 16 Jan 2010 18:11:00  Office Staff   S.O. News Service
ಬೆಂಗಳೂರು,ಜನವರಿ 15:ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿರುವ ಬಿಬಿ‌ಎಂಪಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪಾರದರ್ಶಕ ರೀತಿಯಲ್ಲಿ  ಕಾನೂನುಬದ್ಧವಾಗಿ ಪೂರ್ಣಗೊಳಿಸಲಾಗಿದೆ ಎಂದು ಬಿಬಿ‌ಎಂಪಿ ಆಯುಕ್ತ ಭರತ್‌ಲಾಲ್ ಮೀನಾ ಸ್ವಷ್ಟಪಡಿಸಿದ್ದಾರೆ.  
 
ಟೆಂಡರ್  ಪ್ರಕ್ರಿಯೆಗೆ ವ್ಯಕ್ತವಾಗಿರುವ ಟೀಕೆಗಳಿಗೆ ಪ್ರತಿಕ್ರಯಿಸಿದ ಅವರು,  ಕಾನೂನು ರೀತಿಯಲ್ಲೇ ಎಲ್ಲಾ ಪ್ರಕ್ರಿಯೆಗಳು ನಡೆದಿವೆ. ನಿಯಮ ಉಲ್ಲಂಘಿಸಲಾಗಿದೆ ಎಂಬ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.  
 
ಟೆಂಡರ್  ಪ್ರಕ್ರಿಯೆಯನ್ನು ಈ ತಿಂಗಳ ೮ ರಂದೇ ಕರೆಯಬೇಕಾಗಿತ್ತು.  ಆದರೆ, ಇಂಟರ್‌ನೆಟ್ ಹಾಗೂ ಇತರ ತಾಂತ್ರಿಕ ತೊಂದರೆಗಳಿದ್ದರಿಂದ ಸಾಧ್ಯವಾಗಿರಲಿಲ್ಲ. ಇದೇ ತಿಂಗಳ  ೯ ಎರಡನೇ ಶನಿವಾರ  ಮತ್ತು ೧೦ ರಂದು  ಭಾನುವಾರ ರಜಾ  ದಿನಗಳು ಎದುರಾಗಿದ್ದರಿಂದ  ಆರ್ಥಿಕ ಬಿಡ್ ಕರೆಯಲು ಆಗಿರಲಿಲ್ಲ.  ಹಾಗಾಗಿ ೧೨ ರಂದು ಟೆಂಡರ್  ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.  ಎಂದು ಸಮರ್ಥಿಸಿಕೊಂಡರು.

Share: