ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ನಗರ ಪ್ರದೇಶದ ವಸತಿಹೀನರಿಗೆ ವಾಜಪೇಯಿ ವಸತಿ ಯೋಜನೆ - ಐವತ್ತು ಸಾವಿರ ಮನೆ ನಿರ್ಮಸುವುದಾಗಿ ಘೋಷಣೆ

ಬೆಂಗಳೂರು: ನಗರ ಪ್ರದೇಶದ ವಸತಿಹೀನರಿಗೆ ವಾಜಪೇಯಿ ವಸತಿ ಯೋಜನೆ - ಐವತ್ತು ಸಾವಿರ ಮನೆ ನಿರ್ಮಸುವುದಾಗಿ ಘೋಷಣೆ

Fri, 05 Mar 2010 10:49:00  Office Staff   S.O. News Service

ಬೆಂಗಳೂರು,ಮಾ,೫:ನಗರ ಪ್ರದೇಶದ ವಸತಿ ಹೀನರಾಗಿ ಮುಖ್ಯಮಂತ್ರಿ ಯಡಿಯೂರಪ್ಪ ವಾಜಪೇಯಿ ವಸತಿ ಯೋಜನೆಯನ್ನು ಜಾರಿಗೆ ತಂದಿದ್ದು, ಬರುವ ಸಾಲಿನಲ್ಲಿ ೫೦ ಸಾವಿರ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದ್ದಾರೆ.

 

 

ವಾಜಪೇಯಿ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ವಂತಿಗೆ, ಬ್ಯಾಂಕ್‌ಗಳ ಸಾಲ ಹಾಗೂ ಸರ್ಕಾರದ ಸಹಾಯಧನ ಒಳಗೊಂಡಂತೆ ಪ್ರತಿ ಮನೆಗೆ ೧,೨೫ ಲಕ್ಷ ರೂ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

 

 

ನಗರ ಪ್ರದೇಶಗಳು ಮತ್ತು ಸಣ್ಣ ಪಟ್ಟಣಗಳ ಮಧ್ಯಮ ವರ್ಗಗಳ ವಸತಿ ಸಮಸ್ಯೆಯನ್ನು ಪರಿಹರಿಸಲು ನನ್ನ ಮನೆ ಯೋಜನೆಯನ್ನು ಪ್ರಾರಂಭಿಸಿ ಸುಲಭ ಬೆಲೆಯಲ್ಲಿ ಮನೆಗಳನ್ನು ಒದಗಿಸಲಾಗುವುದು. ಇದಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನಗಳನ್ನು ಒದಗಿಸಲು ಬರುವ ಸಾಲಿನಲ್ಲಿ ೭೫ ಕೋಟಿ ರೂ ನೀಡುತ್ತಿದ್ದು, ಗ್ರಾಮೀಣ ಹಾಗೂ ನಗರ ವಸತಿ ಸೌಕರ್ಯಕ್ಕಾಗಿ ೯೨೦ ಕೋಟಿ ರೂ ನೀಡುವ ಜೊತೆಗೆ, ಆಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ ಪಡೆದ ಸಾಲವನ್ನು ಈ ವರ್ಷದ ಡಿಸೆಂಬರ್ ವೇಳೆಗೆ ಮರುಪಾವತಿ ಮಾಡಿದರೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ.

 

 

ಇಂದಿರಾ ಆವಾಜ್, ಆಶ್ರಯ ಮತ್ತು ಅಂಬೇಡ್ಕರ್ ಯೋಜನೆಗಳ ಅಡಿಯಲ್ಲಿ ಒಟ್ಟು ೫.೩೫ ಲಕ್ಷ ಮನೆಗಳನ್ನು ಗ್ರಾಮೀನ ಪ್ರದೇಶದಲ್ಲಿ ನಿರ್ಮಿಸಿದ್ದು, ನೆರೆ ಪೀಡಿತ ಪ್ರದೇಶದಲ್ಲಿ ಜೂನ್ ಅಂತ್ಯದ ವೇಳೆಗೆ ೭೫ ಸಾವಿರ ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡುವುದಾಗಿ ತಿಳಿಸಿದರು


Share: