ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಮಂಜೂರು ಮಾಡಿದ ಹಣವನ್ನು ಸದ್ವಿನಿಯೋಗಿಸಿಕೊಳ್ಳದ ಡಾ. ಡಿ.ಎಂ. ನಂಜುಂಡಪ್ಪ ವರದಿಯ ಶಿಪಾರಸ್ಸು ಅನುಷ್ಠಾನ ಸಮಿತಿ - ಶಶಿಲ್ ನಮೋಶಿ ಅಸಮಾಧಾನ

ಬೆಂಗಳೂರು: ಮಂಜೂರು ಮಾಡಿದ ಹಣವನ್ನು ಸದ್ವಿನಿಯೋಗಿಸಿಕೊಳ್ಳದ ಡಾ. ಡಿ.ಎಂ. ನಂಜುಂಡಪ್ಪ ವರದಿಯ ಶಿಪಾರಸ್ಸು ಅನುಷ್ಠಾನ ಸಮಿತಿ - ಶಶಿಲ್ ನಮೋಶಿ ಅಸಮಾಧಾನ

Tue, 09 Feb 2010 00:07:00  Office Staff   S.O. News Service

ಬೆಂಗಳೂರು, ಫೆಬ್ರವರಿ ೮ : ಡಾ. ಡಿ.ಎಂ. ನಂಜುಂಡಪ್ಪ ವರದಿಯ ಶಿಪಾರಸ್ಸು ಅನುಷ್ಠಾನ ಸಮಿತಿ ಕಳೆದ ಎರಡು ವರ್ಷಗಳಿಂದ ವಿವಿಧ ಕಾರಣಗಳಿಂದ ಮಂಜೂರು ಮಾಡಿದ ಹಣ ಸಮಪರ್ಕವಾಗಿ ವೆಚ್ಚಮಾಡಿಲ್ಲ ಎಂದು ಅನುಷ್ಠಾನ ಸಮಿತಿ ಅಧ್ಯಕ್ಷ ಶಶಿಲ್‌ನಮೋಶಿ ಅಸಮಾಧಾನ ವ್ಯಕ್ತಪಡಿಸಿದರು.

 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೦೯-೧೦ ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಆಧ್ಯತಾ ವಲಯಕ್ಕೆ ೨೫೭೮.೮೩ ಕೋಟಿ ರೂ. ಒದಗಿಸಲಾಗಿತ್ತು. ಅದರಲ್ಲಿ ೧೨೦೪.೨೫ ಕೋಟಿ ರೂ. ಬಿಡುಗಡೆ ಮಾಡಿದ್ದರೂ, ಕೇವಲ ೯೮೪ ಕೋಟಿ ವ್ಯಚ್ಚವಾಗಿದೆ.

 

ಕೆಲವು ಆಧ್ಯತಾ ಬಾಬತ್ತಿನಲ್ಲಿ ಹಣ ಸಮಪರ್ಕವಾಗಿ ಬಳಕೆಯಾಗಿಲ್ಲ. ೨೦೧೦-೧೧ ಸಾಲಿನ ಕ್ರಿಯಾ ಯೋಜನೆ ಸಿದ್ದವಾಗಿದೆ. ಮುಂದಿನ ೫ ವರ್ಷಗಳ ಯೋಜನೆಯನ್ನು ಒಂದೇ ಭಾರಿ ಅನುಷ್ಠಾನ ಗೊಳಿಸುವ ಸಂಬಂಧಿಸಿದಂತೆ ಮುಖ್ಯಮಂತ್ರಿ ಜೊತೆ ಮುಂದಿನ ವಾರ ಸಮಾಲೋಚನೆ ಮಾಡಿ ನೆರವನ್ನು ಸಕಾಲಕ್ಕೆ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

ರಾಜ್ಯದ ಹಿಂದುಳಿದ ೧೧೪ ತಾಲ್ಲೂಕುಗಳಲ್ಲಿ ೩೯ ಅತ್ಯಂತ ಹಿಂದುಳಿದ ತಾಲ್ಲೂಕುಗಳಿದ್ದ ಅಲ್ಲಿ ಮೂಲಭೂತ ಸೌಲಭ್ಯ ಹಾಗೂ ಶಿಕ್ಷಣಕ್ಕೆ ಆಧ್ಯತೆ ನೀಡಲಾಗಿದೆ ಎಂದರು.

ಮೊದಲನೇ ಬಾರಿಗೆ ನಿರುಧ್ಯೋಗಿಗಳಿಗೆ ಉದ್ಯೋಗ ನೀಡುವ ಯೋಜನೆಗೆ ೪೦ ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಪ್ರತಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ

 

ನಂಜುಂಡಪ್ಪ ಅವರ ವರದಿಯನ್ನು ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ನೆರೆಹಾವಳಿಯಿಂದ ಮೂರು ತಿಂಗಳ ಕಾಲ ಕಾಮಗಾರಿ ವೀಕ್ಷಣೆಮಾಡಲು ಸಾಧ್ಯವಾಗಿರಲಿಲ್ಲ. ನಾಳೆಯಿಂದ ಯೋಜನೆಯ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶೀಲನೆ ಮಾಡಲಾಗುವುದು ಎಂದರು.  

 


Share: