ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಹಾಸನ: ಗುಂಡಿನ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸಿದ ಪೋಲೀಸ್ ಪೇದೆ

ಹಾಸನ: ಗುಂಡಿನ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸಿದ ಪೋಲೀಸ್ ಪೇದೆ

Wed, 24 Feb 2010 02:52:00  Office Staff   S.O. News Service

ಹಾಸನ, ಫೆ.೨೩- ಕುಡಿದ ಮತ್ತಿನಲ್ಲಿ ಹಾಸನದ ನಗರಠಾಣೆ ಪೊಲೀಸ್ ಪೇದೆಯೊಬ್ಬ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ.

ನಗರಠಾಣೆ ಪೇದೆ ಕೃಷ್ಣಕುಮಾರ್, ಎಂಬುವರು ಸಿಗ್ನಲ್ ಕೊಟ್ಟ ಕಾರಣ, ಎನ್.ಆರ್.ವೃತ್ತದಲ್ಲಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು. ಇದೇ ವೇಳೆಗೆ ಬಂದ ಗುಂಡೇಗೌಡ ಎಂಬುವರ ಬೈಕ್ ಕೃಷ್ಣಕುಮಾರ್ ಬೈಕ್‌ಗೆ ತಾಗಿತು.

 

ಇದರಿಂದ ಕುಪಿತನಾದ ಕೃಷ್ಣಕುಮಾರ್, ಗುಂಡೇಗೌಡನನ್ನು ಥಳಿಸಲು ಆರಂಭಿಸಿದ. ಕೂಡಲೇ ಜಮಾಯಿಸಿದ ನಾಗರೀಕರು ಪೊಲೀಸನನ್ನು ತಡೆದರು. ಕೃಷ್ಣಕುಮಾರ್ ಬೆಳಿಗ್ಗೆಯೇ ಮದ್ಯಸೇವನೆ ಮಾಡಿದ್ದೇ, ಇಷ್ಟೆಲ್ಲಾ ರಂಪಾಟಕ್ಕೆ ಕಾರಣ ಎನ್ನಲಾಗಿದೆ.

 

ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸಿದ ಪೇದೆ ವಿರುದ್ಧ ಶಿಸ್ತುಕ್ರಮಕ್ಕೆ ಪೊಲೀಸ್ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.

 


Share: