ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬಂಟ್ವಾಳ: ಪುದು ಗ್ರಾಮದ ಹಲ್ಲೆ ಪ್ರಕರಣ - ಮೂವರ ಬಂಧನ

ಬಂಟ್ವಾಳ: ಪುದು ಗ್ರಾಮದ ಹಲ್ಲೆ ಪ್ರಕರಣ - ಮೂವರ ಬಂಧನ

Wed, 20 Jan 2010 18:22:00  Office Staff   S.O. News Service
ಬಂಟ್ವಾಳ, ಜನವರಿ 20:  ಕಳೆದ ನಾಲ್ಕು ದಿನಗಳ ಹಿಂದೆ ಪುದು ಗ್ರಾಮದ ಪೆರಿಮಾರ್ ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಟ್ವಾಳ ಗ್ರಾಮಾಂತರ ಪೋಲಿಸರು ಮೂರು ಮಂದಿಯನ್ನು ಬಂಧಿಸಿದ್ದಾರೆ.
 
ಬಂಧಿತರನ್ನು ಪುದು ಗ್ರಾಮದ ನಿವಾಸಿಗಳಾದ ಇಮ್ರಾನ್(೩೫),ನೌಶಾದ್(೩೨) ಹಾಗೂ ಹನೀಫ್(೪೦) ಎಂದು ಗುರುತಿಸಲಾಗಿದೆ. ಆರೋಪಿಗಳು ಕಳೆದ ಜ.೧೬ ರಂದು ಇಸಾಖ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು,ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಬೆಳಿಗ್ಗೆ ಮಾರಿಪಳ್ಳ ಸಮೀಪದ ಅಮ್ಮೆಮ್ಮೆಮಾರ್‍ನಲ್ಲಿ ದಿಡೀರ್ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ವಿನಾಯಕ ಬಿಲ್ಲವ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ಪ್ರಮುಖ ಆರೋಪಿ   ಹಮೀದ್ ಆಲಿಯಾಸ್ ಅಮ್ಮಿ ಎಂಬಾತ ತಲೆಮರೆಸಿಕೊಂಡಿದ್ದು, ಸದ್ರಿ ಘಟನೆಗೆ ಆತನೇ ಸೂತ್ರಧಾರ ಎಂದು ಪೋಲಿಸರು ತಿಳಿಸಿದ್ದಾರೆ.

Share: