ಭಟ್ಕಳ, ಜನವರಿ, 29: ಭಟ್ಕಳದಲ್ಲಿ ಚರ್ಚುಗಳ ಮೇಲೆ ದಾಳಿ ಆಗಿಲ್ಲ ಎಲ್ಲೋ ಜನರಹಿತ ಪ್ರದೇಶದ ಅರಣ್ಯ ಜಾಗದಲ್ಲಿದ್ದ ಶಿಲುಭೆಯನ್ನು ಮಳ್ಳ ಮನಸ್ಸಿನ ಕೆಲವರು ಸುತ್ತಿಗೆಯಿಂದ ಕುಟ್ಟಿದ್ದಾರೆ. ಇದನ್ನು ಹಿಂಜಾವೆ ಖಂಡಿಸುತ್ತದೆ ಎಂದು ಉತ್ತರಕರ್ನಾಟಕ ಪ್ರಾಂತ ಸಂಚಾಲಕ ಗೋವಿಂದ ನಾಯ್ಕ ತಿಳಿಸಿದ್ದಾರೆ.
ಅವರು ಇಂದು ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಕರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.ಶಿಲುಭೆಗೆ ಜಖಂಗೊಳಿಸಿದ್ದು ಖಂಡನೀಯ ಆದರೆ ಇದನ್ನೆ ನೆಪಮಾಡಿಕೊಂಡು ಪೊಲಿಸರು ಘಟನೆಯಲ್ಲಿ ಭಾಗಿಯಾಗದೆ ಇರುವ ಅಮಾಯಕ ಯುವಕರ ಬೇಟೆಯಾಡಲು ಅವರ ಮಧ್ಯ ರಾತ್ರಿಯಲ್ಲಿ ಮನೆಗಳಿಗೆ ಹೋಗಿ ತೊಂದರೆಯನ್ನು ನೀಡುತ್ತಿದ್ದಾರೆ ಇದು ಸರಿಯಾದ ಕ್ರಮವಲ್ಲ ಪರಿಸ್ಥಿತಿ ಹೀಗೆಯೆ ಮುಂದು ವರಿದರೆ ಹಿಂಜಾವೆ ಬೀದಿಗಿಳಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಢೋಂಗಿ ಹಿಂದುಗಳೆನಿಸಿದವರಿಗೆ ಶಿಲುಬೆಯ ಜಖಂಗೊಂಡಿದ್ದರ ಬಗ್ಗೆ ನೋವಿದೆ ಆದರೆ ಇದೇ ಭಟ್ಕಳದಲ್ಲಿ ಜಟಗನ ಮೂರ್ತಿ ನಾಪತ್ತೆ ಮಾಡಿ ಓರ್ವನ ಕೊಲೆಗೆ ಕಾರಣವಾದ ಘಟನೆಯು ಅವರಿಗೆ ನೋವು ತಂದಿಲ್ಲ. ಇಲ್ಲಿನ ಹಲವಾರು ಮಂದಿರಗಳ ಮೆಲೆ ನಾಲ್ಕಾರು ಬಾರಿ ಕಲ್ಲನ್ನು ಎಸೆಯಲಾಗಿದ್ದು ಒಂದು ದೇವಸ್ಥಾನಕ್ಕ ಮಲವನ್ನು ಎರಚಲಾಗಿತ್ತು ಆಗಲೂ ಕೂಡ ಅವರು ಘಟನೆಯನ್ನು ಖಂಡಿಲು ಹೋಗಲಿಲ್ಲ ಇದು ವಿಷಾಧದ ಸಂಗತಿಯಾಗಿದ್ದು ಈಗ ಶಿಲುಭೆಗೆ ಅಥವಾ ಮೇರಿ ಮಾತೆ ಗಾಜು ಜಖಂಗೊಂಡ ಹಿನ್ನೆಲೆಯಲ್ಲಿ ಇಷ್ಟೆಲ್ಲ ಅನುಕಂಪದ ಮಾತುಗಳು ಕೇಳಿಬರುತ್ತಿವೆ ಎಂದ ಅವರು ಹಿಂಜಾವೆ ಯಾರದೆ ಧರ್ಮಕ್ಕೆ ಘಾಸಿ ಮಾಡುವಂತ ಕೆಲಸ ಮಾಡುವುದಿಲ್ಲ ಮತ್ತು ಅಂತಹ ಕೆಲಸವನ್ನು ಸಹಿಸುವುದು ಇಲ್ಲ ಭಟ್ಕಳದ ಘಟನೆಯನ್ನು ತಾವು ಖಂಡಿಸುವುದಾಗಿ ತಿಳಿಸಿದ ಅವರು ಇದರಲ್ಲಿ ಅಮಾಯಕರನ್ನು ಎಳೆದು ತರಬೇಡಿ. ಈಗಾಗಲೆ ಘಟನೆಗೆ ಕಾರಣರಾದ ವ್ಯಕ್ತಿಯು ಅದನ್ನು ತಾನೆ ಮಾಡಿರುವುದಾಗಿ ಒಪ್ಪಕೊಂಡಿರುವುದು ಎಲ್ಲ ಅನುಮಾನ ಆತಂಕಗಳಿಗೆ ತೆರೆ ಬಿದ್ದಿದೆ ಎಂದರು.
ಮಾನವ ಹಕ್ಕು ಆಯೋಗದ ಅಧ್ಯಕ್ಷರು ಬಂದು ಇಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆಯಿಲ್ಲ ಎಂದು ಹೇಳಿರುವುದು ಹಾಸ್ಯಸ್ಪದ ಎಂದ ಅವರು ಭಟ್ಕಳದಲ್ಲಿ ಸುಮಾರು ೭೦ಕ್ಕೂ ಹೆಚ್ಚು ಮಸೀದಿಗಳಿವೆ ಹಲಾವರು ಚರ್ಚುಗಳಿವೆ ಇಂದಿನವರೆಗೂ ಒಂದು ಮಸೀದಿಗೆಯಾದರೂ ಕಲ್ಲು ಬಿದ್ದ ಉದಹರಣೆಗೆಗಳಿವೆಯೆ? ಎಂದು ಪ್ರಶ್ನಿಸಿದ ಅವರು ಇಲ್ಲಿ ಮಂದಿರಗಳ ಮೇಲೆ ಕಲ್ಲು ಬೀಳುತ್ತವೆ ಮೂರ್ತಿಗಳನ್ನು ನಾಪತ್ತೆ ಮಾಡುತ್ತಾರೆ ಭಯದ ವಾತವರಣದಲ್ಲಿ ಜೀವಿಸುತ್ತಿರುವವರು ಅಲ್ಪಸಂಖ್ಯಾತರೋ ಅಥವಾ ಬಹುಸಂಖ್ಯಾತರಾದ ಹಿಂದುಗಳೋ ಎಂದು ಪ್ರಶ್ನಿಸಿದರು.ಭಟ್ಕಳದಲ್ಲಿ ಸಹಬಾಳ್ವೆ ಶಾಂತಿಯಿಂದ ಇರಬೇಕಾದರೆ ಎಲ್ಲರನ್ನು ಸಮಾನರಾಗಿ ಕಾಣಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಇದನ್ನು ನಾವು ಸಹಿಸೇವು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ದಿನೇಶ್ ನಾಯ್ಕ, ವಿವೇಕ ಭಟ್, ಶ್ರೀಧರ್ ದೇವಡಿಗ, ಮೋಹನ್ ಶಿರಾಲಿಕರ್ ಉಪಸ್ಥಿತರಿದ್ದರು.