ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಡ್ಯದಲ್ಲಿ ಬಿಜೆಪಿ ವಿಜಯಸಂಕಲ್ಪ ಸಮಾವೇಶ: 3 ವರ್ಷದಲ್ಲಿ ಸಮರ್ಪಕ ವಿದ್ಯುತ್: ಯಡಿಯೂರಪ್ಪ

ಮಂಡ್ಯದಲ್ಲಿ ಬಿಜೆಪಿ ವಿಜಯಸಂಕಲ್ಪ ಸಮಾವೇಶ: 3 ವರ್ಷದಲ್ಲಿ ಸಮರ್ಪಕ ವಿದ್ಯುತ್: ಯಡಿಯೂರಪ್ಪ

Sun, 18 Apr 2010 02:57:00  Office Staff   S.O. News Service
ಮಂಡ್ಯ, ಎ. ೧೭: ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ವಿದ್ಯುತ್ ಸಮಸ್ಯೆಯನ್ನು ಸಂಪೂರ್ಣವಾಗಿ ನೀಗಿಸ ಲಾಗುವುದು ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್‌ನಲ್ಲಿ ಶನಿವಾರ ಬಿಜೆಪಿ ವಿಜಯಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯುತ್ ಸಮಸ್ಯೆ ಪರಿಹರಿಸಿದರೆ ಮಾತ್ರವೇ ಮುಂದಿನ ಚುನಾವಣೆಯಲ್ಲಿ ಜನರಿಗೆ ಮುಖ ತೋರಿಸುವುದು ಎಂದರು.

ಜನರು ಗಾಬರಿಯಾಗುವಷ್ಟು ರಾಜ್ಯ ಸರಕಾರ ಉತ್ತಮ ಯೋಜನೆಗಳನ್ನು ಕೊಟ್ಟಿದೆ. ಇದರಿಂದಾಗಿ ೩ ವರ್ಷದ ನಂತರ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ೧೫೦ ಸ್ಥಾನ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸರಕಾರದ ೨೨ ತಿಂಗಳ ಸಾಧನೆ ದೊಡ್ಡದು. ಜಾತಿ ಭೇದವಿಲ್ಲದೆ ಎಲ್ಲ ವರ್ಗದ ಜನರಿಗೂ ಕಾರ್ಯಕ್ರಮ ಕೊಟ್ಟಿದ್ದೇನೆ. ಸಾಮಾಜಿಕ ನ್ಯಾಯ, ಬುದ್ಧ, ಬಸವ, ಅಂಬೇಡ್ಕರ್ ಆಶಯ ಸರಕಾರದ ಧ್ಯೇಯ ಎಂದು ಅವರು ಹೇಳಿಕೊಂಡರು. ಬಾಲಕನಾಗಿದ್ದಾಗ ಮಂಡ್ಯದಲ್ಲಿ ತರಕಾರಿ ಮಾರಿಕೊಂಡಿದ್ದೆ. ಈಗ ಉನ್ನತ ಸ್ಥಾನದಲ್ಲಿದ್ದೇನೆ. ಮಂಡ್ಯ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ತವರು ಋಣ ತೀರಿಸುತ್ತೇನೆ ಎಂದು ಯಡಿಯೂರಪ್ಪ ವಾಗ್ದಾನ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಅಶೋಕ್ ರಿಗೆ ಎಲ್ಲ್ಲ ರೀತಿಯ ನೆರವು ನೀಡುತ್ತೇನೆ. ಒಳ್ಳೆಯ ಅಧಿಕಾರಿಗಳನ್ನು ನಿಯೋಜಿಸು ತ್ತೇನೆ. ಎರಡು ತಿಂಗಳಿಗೊಮ್ಮೆ ಭೇಟಿ ನೀಡುತ್ತೇನೆ. ಜನರ ನಂಬಿಕೆ ಹುಸಿ ಗೊಳಿಸುವುದಿಲ್ಲ ಎಂದೂ  ಹೇಳಿದರು.

ಜಿಲ್ಲೆಯನ್ನು ಅಭಿವೃದ್ಧಿಪಡಿಸಿ ಋಣ ತೀರಿಸುತ್ತೇನೆ. ಇದಕ್ಕೆ ಪ್ರತಿಯಾಗಿ ಪಕ್ಷದ ಕಾರ್ಯಕರ್ತರು ಹಳ್ಳಿಗಳಲ್ಲಿ ಜನರನ್ನು ಭೇಟಿಯಾಗಿ ಗ್ರಾ.ಪಂ. ಚುನಾವಣೆ ಯಲ್ಲಿ ಪಕ್ಷದ ಬೆಂಬಲಿಗರನ್ನು ಗೆಲ್ಲಿಸಲು ಪ್ರೇರೇಪಿಸಬೇಕು ಎಂದರು.

Share: