ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಅಂತರ್ಜಲ ಸಂರಕ್ಷಣೆಗೆ - ’ ಅಂತರ್ ಗಂಗಾ ಸೂಕ್ಷ್ಮ ನೀರಾವರಿ ನಿಗಮ ’ ಸ್ಥಾಪನೆ

ಬೆಂಗಳೂರು: ಅಂತರ್ಜಲ ಸಂರಕ್ಷಣೆಗೆ - ’ ಅಂತರ್ ಗಂಗಾ ಸೂಕ್ಷ್ಮ ನೀರಾವರಿ ನಿಗಮ ’ ಸ್ಥಾಪನೆ

Fri, 05 Mar 2010 10:53:00  Office Staff   S.O. News Service

ಬೆಂಗಳೂರು,ಮಾ,೫:ರಾಜ್ಯದಲ್ಲಿ ಅಂತರ್ಜಲದ ಸಂರಕ್ಷಣೆ ಮಾಡಲು ’ ಅಂತರ್ ಗಂಗಾ ಸೂಕ್ಷ್ಮ ನೀರಾವರಿ ನಿಗಮ ’ ಸ್ಧಾಪನೆ, ಮಾವು ಬೆಳೆ ಅಭಿವೃದ್ಧಿಗೆ ’ ಕರ್ನಾಟಕ ಮಾವು ಮಂಡಳಿ ’ ಸ್ಧಾಪನೆ ಮಾಡುವುದಾಗಿ ಹೇಳಿದ್ದಾರೆ.

 

 

ಇದಲ್ಲದೇ ಶಿರಸಿ, ಹಿರಿಯೂರು, ಮೈಸೂರು, ಕೊಪ್ಪಳದಲ್ಲಿ ತೋಟಗಾರಿಕಾ ಕಾಲೇಜನ್ನು ಸ್ಧಾಪಿಸಲು ತಲಾ ೫ ಕೋಟಿ ರೂ ನೆರವು ನೀಡುವಾಗಿ ಭರವಸೆ ಕೊಟ್ಟಿದ್ದಾರೆ.

 

ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಮಂಡಿಸಿರುವ ೨೦೧೦ - ೧೧ ನೇ ಸಾಲಿನ ಬಜೆಟ್‌ನಲ್ಲಿ ಕೃಷಿ ಮತ್ತು ತೋಟಗಾರಿಕೆಯತ್ತ ವಿಶೇಷ ಗಮನಹರಿಸಿದ್ದು, ರಾಜ್ಯದಲ್ಲಿ ಅಂತರ್ಜಲ ಸಂರಕ್ಷಣೆ ಹಾಗೂ ವಿದ್ಯುಚ್ಛಕ್ತಿಯ ಮಿತವ್ಯಯದ ದೃಷ್ಟಿಯಿಂದ ರೈತರು ಹನಿ ನೀರಾವರಿ ಅಥವಾ ತುಂತುರು ನೀರಾವರಿ ವ್ಯವಸ್ಧೆಯನ್ನು ಅಳವಡಿಸುವುದನ್ನು ಕಡ್ಡಾಯ ಮಾಡುವುದು ಅಗತ್ಯವಾಗಿದೆ. ಈ ವಿಷಯದಲ್ಲಿ ರೈತರಿಗೆ ಅಗತ್ಯವಾಗಿರುವ ಸಹಾಯಧನ ಮತ್ತು ತಾಂತ್ರಿಕತೆಯನ್ನು ಒದಗಿಸಲು ರಾಜ್ಯದಲ್ಲಿ ಅಂತರ್ ಗಂಗಾ ಸೂಕ್ಷ್ಮ ನೀರಾವರಿ ನಿಗಮ ಸ್ಧಾಪಿಸಲು ೧೦೦ ಕೋಟಿ ರೂ ಒದಗಿಸಲಾಗುವುದು ಎಂದು ಹೇಳಿದ್ದಾರೆ.

 

 

ಇದಲ್ಲದೇ ಪ್ರತಿ ತಾಲ್ಲೂಕಿನಲ್ಲಿ ಉತ್ತಮವಾಗಿ ಜಲಪೂರಣ ಕಾಮಗಾರಿಗಳನ್ನು ನಿರ್ವಹಿಸಿರುವ ಗ್ರಾಮ ಪಂಚಾಯ್ತಿಗಳಿಗೆ ರೂ ೫ ಲಕ್ಷ ರೂ. ವಿಶೇಷ ಬಹುಮಾನ ನೀಡಲಾಗುವುದು. ಈ ವರ್ಷ ಕನಿಷ್ಟ ೨ ಲಕ್ಷ ಜಲ ಪೂರಣ ಸ್ಧಾವರಗಳನ್ನು ನಿರ್ಮಿಸಲು ೫೦೦ ಕೋಟಿ ರೂ ವೆಚ್ಚದಲ್ಲಿ ’ ಜಲಸಿರಿ ’ ಆಂದೋಲನವನ್ನು ಕೈಗೊಳ್ಳಲಾಗುವುದು.

 

ರೈತರಿಗೆ ಅಗತ್ಯವಾಗಿರುವ ರಾಸಾಯಿನಿಕಗಳ ಗೊಬ್ಬರಗಳನ್ನು ಸೂಕ್ತ ಪ್ರಮಾಣದಲ್ಲಿ ಒದಗಿಸಲು ಕರ್ನಾಟಕ ಸಹಕಾರಿ ಮಾರುಕಟ್ಟೆ ಮಂಡಳಿಗೆ ೪೦೦ ಕೋಟಿ ರೂ ದುಡಿಯುವ ಬಂಡವಾಳ ಒದಗಿಸಲಾಗುತ್ತಿದೆ. ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಟೆಲಿಮೆಟ್ರಿಕ್ ಮಳೆ ಮಾಪನ ಯಂತ್ರಗಳನ್ನು ಅಳವಡಿಸಲು ೫ ಕೋಟಿ ರೂ, ಸಾವಯವ ಕೃಷಿಗಾಗಿ ಬರುವ ಸಾಲಿಗೆ ೧೦೦ ಕೋಟಿ ರೂ ಒದಗಿಸುವ ವಾಗ್ದಾನ ಕೊಟ್ಟಿದ್ದಾರೆ.

 

 

ರೈತರು ಪಹಣಿ ಪತ್ರಗಳನ್ನು ಪಡೆಯಲು ನೀಡಬೇಕಾದ ಶುಲ್ಕವನ್ನು ೧೫ ರೂ ನಿಂದ ೧೦ ರೂಗೆ ಇಳಿಕೆ. ರೈತರ ಪಂಪ್ ಸೆಟ್‌ಗಳಿಗೆ ಹಾಗೂ ಭಾಗ್ಯಜ್ಯೋತಿ, ಕುಟಿರ ಜ್ಯೋತಿ ಬಳಕೆದಾರರಿಗೆ ವಿದ್ಯುಚ್ಛಕ್ತಿ ಪೂರೈಸಲು ೨,೫೦೦ ಕೋಟಿ ರೂ ಸಹಾಯಧನ, ರೈತರು ಆಕಸ್ಮಿಕ ಮರಣ ಹೊಂದಿದರೆ ಒಂದು ಲಕ್ಷ ರೂ ಪರಿಹಾರ, ಹುಲ್ಲು ಮದೆ, ಬಣವೆಗಳು ಬೆಂಕಿ ಆಕಸ್ಮಿಕಕ್ಕೆ ತುತ್ತಾದರೆ ೧೦, ಸಾವಿರ ರೂ ವೆರೆವಿಗೆ ಪರಿಹಾ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.

 

 

ತೋಟಗಾರಿಕಾ ಬೆಳೆಗಳ ವಿಸ್ತೀರ್ಣವನ್ನು ೧೮ ಲಕ್ಷ ಹೆಕ್ಟೇರ್‌ನಿಂದ ೨೫ ಲಕ್ಷ ಹೆಕ್ಟೇರ್‌ಗೆ ವಿಸ್ತರಣೆಗೆ ಕ್ರಮ, ರಾಜ್ಯದಲ್ಲಿ ವ್ಯಾಪಕವಾಗಿ ಬೆಳೆಯುವ ಮಾವು ಬೆಳೆಯ ಅಭಿವೃದ್ಧಿಗಾಗಿ ಕರ್ನಾಟಕ ಮಾವು ಅಭಿವೃದ್ಧಿ ಮಂಡಳಿಯನ್ನು ಸ್ಧಾಪಿಸುತ್ತಿದ್ದು, ಇದಕ್ಕಾಗಿ ೧೦ ಕೋಟಿ ರೂ ಹಣ ನಿಗದಿಪಡಿಸಿದ್ದಾರೆ.

 

ರಾಜ್ಯದ ಯಾವುದೇ ಭಾಗದಲ್ಲಿ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕಗಳನ್ನು ಸ್ಧಾಪಿಸಲು ಕನಿಷ್ಟ ೧೦ ಲಕ್ಷ ಬಂಡವಾಳದೊಡನೆ ಸ್ಧಾಪಿಸುವ ಉದ್ಯಮಿಗಳಿಗೆ ಶೇ ೨೫ ರಷ್ಟು ಬಂಡವಾಳ ಸಹಾಯಧನ ನೀಡಲಾಗುವುದು. ಇದಕ್ಕಾಗಿ ಹತ್ತು ಕೋಟಿ ರೂ ಒದಗಿಸಲಾಗುವುದು. 

 

 


Share: