ಭಟ್ಕಳ, ಜನವರಿ 21:ಭಟ್ಕಳದಲ್ಲಿ ಮೀನು ವಾಹನ ಚಾಲಕರ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ.
ಇತ್ತೀಚೆಗೆ ಮಾವಿನಕುರ್ವೆ ಬಂದರಿನಲ್ಲಿ ನಡೆದ ಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಭಾಸ್ಕರ ಹನುಮಂತ ನಾಯ್ಕ, ಉಪಾಧ್ಯಕ್ಷರಾಗಿ ಭೋಜ ಚಿಕ್ಕಯ್ಯ ಶೆಟ್ಟಿ, ಕಾರ್ಯದರ್ಶಿಯಾಗಿ ರುಜಾರಿಯೋ ಸಾಂತಾ ಡಯಾಸ್, ಸಹಕಾರ್ಯದರ್ಶಿಯಾಗಿ ಜೋನ್ ಅಂತೋನ ಪರ್ನಾಂಡಿಸ್, ಖಚಾಂಚಿಯಾಗಿ ಅಬ್ದುಲ್ ರೆಹಮಾನ ಎಂ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ. ಅದರಂತೆ ಸಂಘದ ಗೌರವಾಧ್ಯಕ್ಷರು ಹಾಗೂ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಸೈಮನ್ ಡಿಸೋಜಾ ಆಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.