ಬೆಂಗಳೂರು ಏಪ್ರಿಲ್ ೨೧: ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಹುದ್ದೆಗಳ ನೇಮಕಾತಿಗಾಗಿ ಆಯೋಗದ ಕೇಂದ್ರ ಕಚೇರಿ, ಬೆಂಗಳೂರು ಇಲ್ಲಿ ಆಯಾ ಹುದ್ದೆಗಳ ಮುಂದೆ ಸೂಚಿಸಿರುವ ದಿನಾಂಕಗಳಂದು ಸಂದರ್ಶನವನ್ನು ನಡೆಸಲಿದೆ.
ನಗರಾಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ, ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ೨ ವಿಜ್ಞಾನ ಉಪನ್ಯಾಸಕರ ಹಾಗೂ ಪೌರಾಡಳಿತ ನಿರ್ದೇಶನಾಲಯದಲ್ಲಿ ೩ ಡಾಟಾ ಎಂಟ್ರಿ ಅಪರೇಟರ್ ಗ್ರೇಡ್ -೧ ಹುದ್ದೆಗಳಿಗೆ ಏಪ್ರಿಲ್ ೨೬ ರಂದು ಬೆಳಿಗ್ಗೆ ೯.೩೦ ಗಂಟೆಗೆ ಸಂದರ್ಶನ.
ಕರ್ನಾಟಕ ಗೃಹ ಮಂಡಳಿಯಲ್ಲಿ ೧೧ ಸಹಾಯಕ ಅಭಿಯಂತರರು (ಸಿವಿಲ್)- ಹುದ್ದೆಗೆ ಏಪ್ರಿಲ್ ೨೭ ರಂದು ಬೆಳಿಗ್ಗೆ ೯.೩೦ ಗಂಟೆಗೆ.
ಅಡ್ಡೋಕೇಟ್ ಜನರಲ್ ರವರ ಕಚೇರಿ, ಬೆಂಗಳೂರು, ಇಲ್ಲಿ ಗ್ರಂಥಾಲಯ ಸಹಾಯಕರ ೦೨ ಮತ್ತು ಆಡಳಿತ ತರಬೇತಿ ಸಂಸ್ಥೆ, ಮೈಸೂರು, ಇಲ್ಲಿನ ೧ ಗ್ರಂಥಾಲಯ ಸಹಾಯಕರ ಹುದ್ದೆಗಳಿಗೆ ಏಪ್ರಿಲ್ ೨೭ ರಂದು ಮಧ್ಹಾಹ್ನ ೩.೦೦ ಗಂಟೆಗೆ, ಹಾಗೂ ನಗರಾಭಿವೃದ್ಧಿ ಇಲಾಖೆಯಲ್ಲಿ ೨೩ ಮುಖ್ಯಾಧಿಕಾರಿ ಶ್ರೇಣಿ-೨ ಹುದ್ದೆಗೆ ಏಪ್ರಿಲ್ ೨೯ ರಂದು ಬೆಳಿಗ್ಗೆ ೯.೩೦ ಮತ್ತು ಮಧ್ಯಾಹ್ನ ೩.೦೦ ಗಂಟೆಗೆ ಸಂದರ್ಶನ ನಡೆಸಲಾಗುತ್ತದೆ.
ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಸೂಚನಾ ಪತ್ರಗಳನ್ನು ಈಗಾಗಲೇ ಕಳುಹಿಸಲಾಗಿದೆ. ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ, ವಿವಿಧ ಮೇಸಲಾತಿಯಡಿ ಸಂದರ್ಶನಕ್ಕೆ ಅರ್ಹರಾಗಿರುವ ಕೊನೆಯ ಅಭ್ಯರ್ಥಿಯ ಶೇಕಡವಾರು ಅಂಕಗಳು, ಸಂದರ್ಶನದ ವೇಳೆ ಮತ್ತು ದಿನಾಂಕ, ವಿವಿಧ ಕಾರಣಗಳಿಂದ ತಿರಸ್ಕೃತವಾಗಿರುವ ಅಭ್ಯರ್ಥಿಗಳ ವಿವರಗಳು ಇತ್ಯಾದಿ ಮಾಹಿತಿಗಾಗಿ ಆಯೋಗದ ವೆಬ್ಸೈಟ್ “http://kpsc.kar.nic.in/Home Page“ ನ್ನು ನೋಡಬಹುದು. ವಿವಿಧ ಮೀಸಲಾತಿಯಡಿ ಸಂದರ್ಶನಕ್ಕೆ ಅರ್ಹರಾಗಿರುವ ಕೊನೆಯ ಅಭ್ಯರ್ಥಿಯ ಶೇಕಡವಾರು ಅಂಕಗಳನ್ನು ಆಯೋಗದ ಕೇಂದ್ರ ಕಚೇರಿ ಮತ್ತು ಮೈಸೂರು/ಬೆಳಗಾಂ/ಗುಲ್ಬರ್ಗಾ/ಶಿವಮೊಗ್ಗ ಪ್ರಾಂತೀಯ ಕಚೇರಿಗಳ ಸೂಚನಾ ಫಲಕಗಳಲ್ಲಿ ಸಹ ನೋಡಬಹುದು. ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಪತ್ರ ಸ್ವೀಕೃತವಾಗದಿದ್ದಲ್ಲಿ ಸಂಬಂಧಿತ ದಾಖಲೆಗಳೊಂದಿಗೆ ಕೇಂದ್ರ ಕಚೇರಿಯನ್ನು ಸಂದರ್ಶನಕ್ಕೆ ನಿಗದಿಪಡಿಸಿರುವ ದಿನಾಂಕದೊಳಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.