ಹಾಸನ, ಡಿಸೆಂಬರ್ 17:ಗುರುದೇವ ಲಲಿತಕಲಾ ಅಕಾಡೆಮಿ ನೃತ್ಯ ಸಂಗೀತ ತರಬೇತಿ ಸಂಸ್ಥೆಯು ೬ನೇ ಸಾಲಿನ ರಾಷ್ಟ್ರ ಮಟ್ಟದ ಭರತನಾಟ್ಯ ಶಾಸ್ತ್ರೀಯ ಸಂಗೀತ (ಹಾಡುಗಾರಿಕೆ), ಮೃದಂಗ, ಚಿತ್ರಕಲೆ ಸ್ಪರ್ಧೆಗಳನ್ನು ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜನವರಿ ೯ರಂದು ಮತ್ತು ೧೦ರಂದು ಆಯೋಜಿಸಿದೆ.
ಆಸಕ್ತರು ಈ ತಿಂಗಳ ೨೮ರೊಳಗಾಗಿ ಅರ್ಜಿ ಸಲ್ಲಿಸಲು ಕೋರಿದೆ.
ಸ್ಪರ್ಧೆಯ್ಲಲಿ ಅತೀ ಕಿರಿಯರ, ಕಿರಿಯರ, ಹರಿಯರ ವಿಭಾಗಗಳಲ್ಲಿ ತಲಾ ೩ಪ್ರಶಸ್ತಿ ನೀಡಲಾಗುವುದು. ಭಾಗವಹಿಸುವವರಿಗೆ ಉಪಹಾರ ಹಾಗೂ ಅಗತ್ಯವಿದ್ದವರಿಗೆ ವಸತಿ ವ್ಯವಸ್ಥೆ ನೀಡಲಾಗುವುದು. ಭರತ ನಾಟ್ಯ ಸ್ಪರ್ಧೆಯಲ್ಲಿ ಅತೀ ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಗಳಿಗೆ ನಾಟ್ಯಮಂದಾರ ನಾಟ್ಯ ವರ್ಷಿಣಿ ಹಾಗೂ ನಾಟ್ಯ ಸಮ್ಮೋಹಿನಿ ಎಂಬ ಬಿರುದು ನೀಡಿ ಗೌರವಿಸಲಾಗುವುದು. ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಗುರುದೇವ ಕುಟೀರ, ೧೨೪೦/ಎ೧, ಅಶೋಕ ನಗರ, ಮಂಡ್ಯ.//# ೪೫, ಶ್ರೀಧರ ನಿಲಯ, ೩ನೇ ಬ್ಲಾಕ್, ೬ನೇ ಮುಖ್ಯರಸ್ತೆ, ಜಯಲಕ್ಷ್ಮೀ ಪುರಂ, ಮೈಸೂರು-೫೭೦ ೦೧೨ ೯೪೪೮೩ ೮೩೭೮೫/ ೯೪೪೯೭ ೮೪೭೧೪/೯೫೯೧೨ ೪೭೦೪೪