ಭಟ್ಕಳ, ಜನವರಿ 14: ಭಟ್ಕಳ ತಾಲೂಕಿನ ಮುರುಡೇಶ್ವರದ ಮುಸ್ಲಿಮ್ ಎಜ್ಯುಕೇಶನ್ ಸೂಸೈಟಿಯ ನೂತನ ಅಧ್ಯಕ್ಷರಾಗಿ ಖತಾಲ್ ಮುಹಮ್ಮದ್ ಇಬ್ರಾಹಿಮ್ ಸುಕ್ರಿ ನೇಮಕಗೊಂಡಿದ್ದಾರೆ. ಇತ್ತಿಚೆಗೆ ನಡೆದ ಸಂಸ್ಥೆಯ ಚುನಾವಣೆಯಲ್ಲಿ ಈ ಆಯ್ಕೆ ಜರುಗಿದ್ದು ಕಳೆದ ಹಲವಾರು ವರ್ಷಗಳಿಂದ ಮುಸ್ಲಿಮ್ ಎಜ್ಯುಕೇಶನ್ ಸೂಸೈಟಿಯ ಉಪಾಧ್ಯಕ್ಷರಾಗಿದ್ದ ಇವರು ಅತ್ಯಂತ ಅನುಭವಿ ಮತ್ತು ಶಿಕ್ಷಣ ಪ್ರೇಮಿಯಾಗಿದ್ದು ಸಂಸ್ಥೆಯ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ.
ಉಳಿದಂತೆ ಉಪಾಧ್ಯಕ್ಷರಾಗಿ ಅಬ್ದುಲ್ ಮತೀನ್ ಬಾಗೇವಾಡಿ ಮತ್ತು ಮುಹಮ್ಮದ್ ಗೌಸ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಹೆಜೀಬ್ ಮುಹಮ್ಮದ್ ಗೌಸ್, ಡಾ. ಅಮೀನುದ್ದೀನ್ ಗೌಡ ಕಾರ್ಯದರ್ಶಿಯಾಗಿ ಜತೆ ಕಾರ್ಯದರ್ಶಿಯಾಗಿ ಚೆಡ್ಡಾಖಾನ ಕೌಸರ್ ಮತ್ತು ಹಾಜಿ ಅಮೀನ್, ಮುಖ್ಯ ಅಕೌಂಟೆಂಟ್ ಆಗಿ ಜಾಫರ್ ಅರಮಾರ್, ಮತ್ತು ಖಜಾಂಚಿಯಾಗಿ ಹೆಜೀಬ್ ಮುಹಮ್ಮದ್ ಜಾಫರ್ ಹಾಗೂ ಮುಹಮ್ಮದ್ ಇಸ್ಮಾಯಿಲ್ ನೇಮಕಗೊಂಡಿದ್ದಾರೆ.