ಭಟ್ಕಳ, ಜನವರಿ 5:ಭಟ್ಕಳ ಕಬ್ಬಡಿ ಫೆಡರೇಷನ್ ವತಿಯಿಂದ ಜ.೧೬ಮತ್ತು ೧೭ ರಂದು ನಗರದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗುವುದೆಂದು ಭಟ್ಕಳ ಕಬ್ಬಡಿ ಫೆಡರೇಷನ್ ಅಧ್ಯಕ್ಷ ಇಮ್ತಿಯಾಝ್ ಉದ್ಯಾವರ್ ತಿಳಿಸಿದರು. ಅವರು ಮಂಗಳವಾರ ಸಂಜೆ ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಜರುಗಿದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡುತ್ತಿದ್ದರು. ನಗರದಲ್ಲಿ ಕೋಮು ಸೌಹಾರ್ಧತೆ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಕ್ರೀಢೆಯ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಈ ಬಾರಿ ಭಟ್ಕಳದಲ್ಲಿ ಸೌಹಾರ್ಧವನ್ನು ಬಯಸುವ ಹಿಂದು ಮತ್ತು ಮುಸ್ಲಿಮರು ಸೇರಿ ಇಂತಹ ಸಹಾಸಕ್ಕೆ ಕೈ ಹಾಕಿದ್ದು ಈ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಇಲ್ಲಿನ ಎಲ್ಲರು ಸೇರಿ ಶ್ರಮಿಸುವ ಮತ್ತು ಇಲ್ಲಿ ಇನ್ನಷ್ಟು ಸೌಹಾರ್ಧ ವಾತವರಣವನ್ನು ನಿರ್ಮಿಸುವ ಫಣವನ್ನು ತೊಟ್ಟಿದ್ದು ಇದಕ್ಕೆ ಸಾರ್ವಜಿಕರು ಹಾಗೂ ಸೌಹಾರ್ದ ಪ್ರೀಯರು ಸಹಕರಿಸಬೇಕೆಂದು ಅವರು ಮನವಿಯನ್ನು ಮಾಡಿಕೊಂಡಿದ್ದಾರೆ.
ಭಟ್ಕಳದಲ್ಲಿ ನಡೆಯುವ ಈ ಜಿಲ್ಲಾ ಮಟ್ಟದ ಪಂದ್ಯಾವಳಿಯು ಇಲ್ಲಿ ಒಂದು ಹೊಸ ಇತಿಹಾಸವನ್ನು ನಿರ್ಮಿಸುವುದು ಎಂದ ಅವರು ಇದರಲ್ಲಿ ಜಾತಿ,ಮತ ಭಾಷೆ ಎನ್ನದೆ ಎಲ್ಲ ಸಮುದಾಯದವರು ಪಾಲ್ಗೊಳ್ಳುತ್ತಿರುವುದು ಇದರ ವಿಶೇಷತೆಯಾಗಿದೆ ಎಂದರು.
ಆಸಕ್ತ ಜಿಲ್ಲೆಯ ಕಬ್ಬಡಿ ತಂಡಗಳು ಜ.೧೫ ರ ಒಳಗೆ ತಮ್ಮ ಹೆಸರನ್ನು ನೊದಾಯಿಸಿಕೊಳ್ಳಬೇಕೆಂದು ಅವ ರು ತಿಳಿಸಿದ್ದು ಭಾಗವಹಿಸಿದ ತಂಡಗಳಿಗೆ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಲಾಗುವುದು ಆಕರ್ಷಕ ಟ್ರೋಫಿಯೊಂದಿಗೆ ಪ್ರಥಮ ಬಹುಮಾನ ೧೫,೦೦೦ ದ್ವೀತಿಯಾ ೧೦,೦೦೦ ತೃತೀಯಾ ೭,೦೦೦ ಮತ್ತು ನಾಲ್ಕನೆಯ ಬಹುಮಾನವಾಗಿ ೫,೦೦೦ ರೂ ನಗದು ನೀಡಲಾಗುವುದು ಎಂದು ಅವರು ತಿಳಿದ್ದಾರೆ. ಆಸಕ್ತರು ೯೪೪೮೭೭೮೨೪೨, ೯೪೪೮೧೩೭೮೨೧ ಮೂಬೈಲ್ ನ್ನು ಸಂಪರ್ಕಿತಿ ತಮ್ಮ ಹೆಸರನ್ನು ನೊಂದಾಯಿಸುವಂತೆ ಅವರು ಕೋರಿದ್ದಾರೆ.
ಈ ಸಂದರ್ಭದಲ್ಲಿ ಫೆಡರೇಷನ್ ಕಾರ್ಯದರ್ಶಿ ವೆಂಕಟ್ರಮಣ ಮೊಗೇರ್, ಉಪಾದ್ಯಾಕ್ಷ ಪ್ರಕಾಶ ನಾಯ್ಕ, ಖಜಾಂಚಿ ಅಝೀಜುರ್ರಹ್ಮಾನ್ ನದ್ವಿ, ಈಶ್ವರ ನಾಯ್ಕ, ಅಬು ಫೈಸಲ್, ವೆಂಕಟೇಶ್ ನಾಯ್ಕ, ಮಸೂದ್ ಶಿಂಗೇರಿ, ಅಮಜ್ದ್ ಎಸ್.ಎಮ್. ಮುಂತಾದವರು ಉಪಸ್ಥಿತರಿದ್ದರು.