ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಮಗಳೂರು: ಬಾಬಾ ಬುಡಾನ್‌ಗಿರಿ ಗುಹೆಯ ದುರಸ್ತಿ ಕಾರ್ಯಕ್ಕೆ ಚಾಲನೆ: ಹೋರಾಟಕ್ಕೆ ಸಂದ ಜಯ: ಕೋಸೌವೇ

ಚಿಕ್ಕಮಗಳೂರು: ಬಾಬಾ ಬುಡಾನ್‌ಗಿರಿ ಗುಹೆಯ ದುರಸ್ತಿ ಕಾರ್ಯಕ್ಕೆ ಚಾಲನೆ: ಹೋರಾಟಕ್ಕೆ ಸಂದ ಜಯ: ಕೋಸೌವೇ

Tue, 16 Mar 2010 03:07:00  Office Staff   S.O. News Service
ಚಿಕ್ಕಮಗಳೂರು ಮಾ.೧೫ : ಬಾಬಾ ಬುಡಾನ್‌ಗಿರಿ ಗುಹೆಯ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲು ಇತ್ತೀಚೆಗೆ  ಸುಪ್ರೀಂ ಕೋರ್ಟ್  ನೀಡಿರುವ ಆದೇಶವನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆ  ಸ್ವಾಗತಿಸುತ್ತದೆ  ಎಂದು ವೇದಿಕೆಯ ರಾಜ್ಯ ಸಹಕಾರ್ಯದರ್ಶಿ ಗೌಸ್ ಮೊಹಿದ್ದೀನ್ ತಿಳಿಸಿದ್ದಾರೆ. 

ಕುಸಿದಿರುವ ಗುಹೆಯನ್ನು ದುರಸ್ತಿಗೊಳಿಸುವಾಗ ಮೂಲ ಸ್ವರೂಪಕ್ಕೆ ಧಕ್ಕೆಯಾಗುವ ರೀತಿಯಲ್ಲೀ ಕಾಮಗಾರಿ ಕೈಗೆತ್ತಿಕೊಂಡು ಜಿಲ್ಲಾಡಳಿತ ಮತ್ತು ಸರಕಾರವು ಸಾರ್ವಜನಿಕ ವಲಯದಲ್ಲಿ  ಆತಂಕವನ್ನು ಸೃಷ್ಟಿಸಿತ್ತು. ವೇದಿಕೆಯು ನ್ಯಾಯಾಲ ಯದಲ್ಲಿ ಈ ಕುರಿತು ಕಳವಳ ವ್ಯಕ್ತಪಡಿಸಿ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ನೀಡಿರುವ ಆದೇಶವು  ಪೂರಕವಾಗಿದ್ದು ವೇದಿಕೆಯ ಹೋರಾಟದ ಹಾದಿಗೆ ಜಯ ಸಿಕ್ಕಂತಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯುವ ಜನತಾದಳದ ಸ್ವಾಗತ: ಬಾಬಾ ಬುಡಾನ್‌ಗಿರಿ ಗುಹೆಯ ಪ್ರವೇಶ ದ್ವಾರದ ಮೇಲ್ಚಾವಣಿಯನ್ನು ಮೂಲ ಸ್ವರೂಪಕ್ಕೆ ಧಕ್ಕೆಯಾಗ ದಂತೆ ದುರಸ್ತಿ ನಡೆಸಲು ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಆದೇಶವನ್ನು ಯುವ ಜನತಾದಳದ ಜಿಲ್ಲಾಧ್ಯಕ್ಷ ಕೆ.ಭರತ್ ಸ್ವಾಗತಿಸುವು ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶದಿಂದ ಸರಕಾರ, ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರಿಗೆ  ಮುಖಭಂಗ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ. 

Share: