ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಗಳೂರು: ಯೆನೆಪೋಯ ಸ್ಕೂಲ್ ‘ಚಿಣ್ಣರ ಪದವಿ ಪ್ರದಾನ’ ಸಮಾರಂಭ

ಮಂಗಳೂರು: ಯೆನೆಪೋಯ ಸ್ಕೂಲ್ ‘ಚಿಣ್ಣರ ಪದವಿ ಪ್ರದಾನ’ ಸಮಾರಂಭ

Sat, 13 Mar 2010 18:33:00  Office Staff   S.O. News Service
ಮಂಗಳೂರು, ಮಾ.೧೩: ಯೆನೆಪೋಯ ಸ್ಕೂಲ್‌ನ ಪುಟ್ಟ ಮಕ್ಕಳನ್ನು ಗುರುತಿಸುವ ಹಾಗೂ ಪ್ರತಿಭೆಗಳ ಪ್ರದರ್ಶನಕ್ಕಾಗಿ ಆಕರ್ಷಕ ಉಡುಗೆ ತೊಡುಗೆಗಳ ಮೂಲಕ ಅವರಿಗೆ ‘ಚಿಣ್ಣರ ಪದವಿ ಪ್ರದಾನ’ ಕಾರ್ಯಕ್ರಮ ಇಂದು ಜಪ್ಪಿನಮೊಗರು ಶಾಲಾ ಆವರಣದಲ್ಲಿ ಚಿಣ್ಣರ ಆಕರ್ಷಕ ಪಥ ಸಂಚಲನ ಹಾಗೂ ಚಿಣ್ಣರ ಅನುಭವ ವಿನಿಮಯ ಕಾರ್ಯಕ್ರಮದೊಂದಿಗೆ ನಡೆಯಿತು.

ಮಾಂಟೆಸರಿ -೩ ತರಗತಿಯ ವಿದ್ಯಾರ್ಥಿಗಳನ್ನು ‘ಚಿಣ್ಣರ ಪದವಿ’ಗೆ ಆರಿಸಲಾಯಿತು.

ಸಮಾರಂಭದಲ್ಲಿ ಲಿಟ್ಲ್ ಏಂಜಲ್ಸ್ ನರ್ಸರಿ ಶಾಲೆಯ ಪ್ರಾಂಶುಪಾಲೆ ರೋಸ್ ಮೇರಿ ಪಾಯಸ್ ಮಾತನಾಡುತ್ತಾ,  ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಜೊತೆ ಹೆತ್ತವರ ಪೋಷಕರ ಹಾಗೂ ಸುತ್ತಲಿನ ಪರಿಸರದ ಪಾತ್ರ ಮುಖ್ಯವಾಗಿರುತ್ತದೆ. ಎಳೆಯ ಮಕ್ಕಳಲ್ಲೇ ಮಾನ ಯ ಮೌಲ್ಯ, ನೈತಿಕ ಮೌಲ್ಯಗಳನ್ನು ಬೆಳೆಸಬೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ನಿರ್ದೇಶಕಿ ಪಿ.ಕೆ. ನಸ್ರೀನಾ ಅಬ್ದುಲ್ಲಾ ವಹಿಸಿದ್ದರು. ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಯೆನೆಪೋಯ ಅಬ್ದುಲ್ಲಾ ಕುಂಞಿ, ಪ್ರಾಂಶುಪಾಲ ಸಿ.ಕೆ. ಮಂಜುನಾಥ್, ಜೂನಿಯರ್ ಪ್ರೋಗ್ರಾಂ ಲೀಡರ್ ರೇಶ್ಮಾ ನಾಯಕ್, ಶೆರ್ಲಿ ಮತ್ತಿತರರು ಉಪಸ್ಥಿತರಿದ್ದರು.

Share: