ಮಂಗಳೂರು, ಅ.೯: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ೧ ಸಾವಿರ ಮನೆ ಮತ್ತು ೨೫ ಸಾವಿರ ಕುಟುಂಬಗಳಿಗೆ ನೆರವಾಗುವ ಯೋಜನೆಯನ್ನು ಕ್ರೈಸ್ತ ಸಮುದಾಯದ ಕೈಗೊಂಡಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ ತಿಳಿಸಿದ್ದಾರೆ.
ನಗರದ ಬಿಷಪ್ ಹೌಸ್‌ನಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಭಕ್ತರಿಂದ ಸಂಗ್ರಹಿಸಲಾದ ದೇಣಿಗೆಯಲ್ಲಿ ನಿರಾಶ್ರಿತರಿಗೆ ಮೂಲಭೂತ ಸೌಕರ್ಯ ಒದಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಿರಾಶ್ರಿತರಿಗೆ ಅಗತ್ಯ ವಾದ ಬಟ್ಟೆ, ಆಹಾರ ಸಾಮಗ್ರಿ, ಔಷಧಿಗಳು, ಪಾತ್ರೆಗಳು, ಶಾಲಾ ಪುಸ್ತಕಗಳು ಮೊದಲಾz ವುಗಳನ್ನು ಸಂಗ್ರಹಿಸಿ ಅವರಿಗೆ ನೇರವಾಗಿ ತಲು ಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಪ್ರಯುಕ್ತ ಮಂಗಳೂರು ಧರ್ಮಪ್ರಾಂತ್ಯದ ಕೊಡಿಯಾಲ್‌ಬೈಲ್ ಬಿಷಪ್ ಹೌಸ್‌ನಲ್ಲಿ ಸಂಗ್ರಹಣ ಕೇಂದ್ರ ಮತ್ತು ಮಾಹಿತಿ ಕಚೇರಿ ಯನ್ನು ಶುಕ್ರವಾರ ಆರಂಭಿಸಲಾಯಿತು.

ಕಚೇರಿಯು ಅ.೨೦ರವರೆಗೆ ಕಾರ್ಯನಿರ್ವಹಿಸಲಿದ್ದು, ಪರಿಹಾರ ಸಾಮಗ್ರಿ ನೀಡುವವರು ದೂ.ಸಂ. ೦೮೨೪- ೬೪೫೧೨೨೪ಗೆ ಸಂಪರ್ಕಿಸ ಬಹುದು. ಮಂಗಳೂರು ಧರ್ಮಪ್ರಾಂತ್ಯದ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ನಿರಾಶ್ರಿತರಿಗೆ ತಲುಪಿಸಲಾಗುವುದು. ದೇಣಿಗೆ ಸಂಗ್ರಹಿಸಲು ಧರ್ಮಪ್ರಾಂತ್ಯಕ್ಕೆ ಸಂಬಂಧಪಟ್ಟ ದೇಶ ವಿದೇಶಗಳಲ್ಲಿ ನೆಲೆಸಿರುವ ಎ ಬಾಂಧವರಿಗೆ ಮನವಿ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಡಯಾಸಿಸ್ ಆಫ್ ಮ್ಯಾಂಗಲೂರ್- ಫ್ಲಡ್ ರಿಲೀಫ್ ಫಂಡ್ ಎಂಬ ಖಾತೆಯನ್ನು ಮಂಗಳೂರಿನ ಕಥೊಲಿಕ್ ಸಿರಿಯನ್ ಬ್ಯಾಂಕ್‌ನಲ್ಲಿ ಖಾತೆ ನಂಬ್ರ (೨೨೨೨೬೬೦೫೧೦೧೯೦೦೦೧) ತೆರೆಯಲಾಗಿದೆ.
ದೇಣಿಗೆಯನ್ನು ಚೆಕ್ ಅಥವಾ ಡಿಡಿ ಮೂಲಕವೂ ಕಚೇರಿಗೆ ತಲುಪಿಸಬಹುದು ಎಂದು ಅಲೋಶಿಯಸ್ ಪಾವ್ಲ್ ನುಡಿದರು.
ನೆರೆ ಪರಿಹಾರ ನಿಧಿಗೆ ಈಗಾಗಲೆ ಮಂಗಳೂರಿನ ಕೆಥೊಲಿಕ್ ಧರ್ಮ ಪ್ರಾಂತ್ಯದಿಂದ ೧ ಲಕ್ಷರೂ. ದೇಣಿಗೆ ನೀಡಲಾಗಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಲಿಯಂ ಮಿನೇಜಸ್, ಓನಿಲ್ ಡಿಸೋಜ, ಫ್ರಾನ್ಸಿಸ್ ರಾಡ್ರಿಗಸ್, ಕ್ರೈಸ್ತ ಸಮುದಾಯದ ನಾಯಕರಾದ ಐವನ್ ಡಿಸೋಜ, ರಾಯ್ ಕ್ಯಾಸ್ತಲಿನೊ, ಮಾರ್ಸೆಲ್ ಮೊಂತೆರೊ, ಎಂ.ಪಿ. ನೊರೊನ್ಹ, ರೇಮಂಡ್ ಡಿಕುನ್ನಾ, ವಿಲ್ಸನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.