ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸರಕಾರಿ ಪ್ರೌಢಶಾಲೆ ತೆಂಗಿನಗುಂಡಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಸರಕಾರಿ ಪ್ರೌಢಶಾಲೆ ತೆಂಗಿನಗುಂಡಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Thu, 09 Nov 2023 02:20:21  Office Staff   SOnews

ಭಟ್ಕಳ: ನ.೭ ರಂದು ಕುಮಟಾ ತಾಲೂಕಿನ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲಾ ಮಟ್ಟದ 17 ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಭಟ್ಕಳ ತಾಲೂಕಿನ ಸರಕಾರಿ ಪ್ರೌಢಶಾಲೆ ತೆಂಗಿನಗುಂಡಿ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ ತೆಂಗಿನಗುಂಡಿ  ಪ್ರೌಢಶಾಲೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿಗಳಾದ ಕುಮಾರಿ ಮಾಧುರಿ ಕೃಷ್ಣ ಗೊಂಡ ಚಕ್ರ ಎಸೆತ ಪ್ರಥಮ, ಗುಂಡು ಎಸೆತ  ದ್ವಿತೀಯ,   ಮೋನಿಕಾ ಮೋಹನ್ ದೇವಾಡಿಗ 400 ಮೀಟರ್ ಓಟದಲ್ಲಿ ದ್ವಿತೀಯ, ಧನ್ಯ ದುರ್ಗಯ್ಯ ಗೊಂಡ  ಉದ್ದ ಜಿಗಿತ ಪ್ರಥಮ, ಹರ್ಡಲ್ಸ ತೃತೀಯ ಸ್ಥಾನ ಪಡೆದು  ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಪಕಿ  ಉಷಾ ಜಿ ಭಟ್, ಎಸ್ ಡಿ ಎಂ ಸಿ ಅಧ್ಯಕ್ಷ ಮೋಹನ್ ದೇವಾಡಿಗ, ದೈಹಿಕ ಶಿಕ್ಷಣ ಶಿಕ್ಷಕ  ಗಿರೀಶ್ ವಿ ನಾಯಕ್ ಮತ್ತು ಶಿಕ್ಷಕ ವೃಂದ, ಊರ ನಾಗರಿಕರು, ಪಾಲಕರು ಹಳೆಯ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.


Share: