ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸಂಪರ್ಕ ಕಳೆದುಕೊಂಡ ಬೋಟ್ ಪತ್ತೆ ಮಾಡಿದ ಕೋಸ್ಟ್ ಗಾರ್ಡ್. 26 ಮೀನುಗಾರರು ಸುರಕ್ಷಿತವಾಗಿ ಕಾರವಾರ ಬಂದರಿಗೆ.

ಸಂಪರ್ಕ ಕಳೆದುಕೊಂಡ ಬೋಟ್ ಪತ್ತೆ ಮಾಡಿದ ಕೋಸ್ಟ್ ಗಾರ್ಡ್. 26 ಮೀನುಗಾರರು ಸುರಕ್ಷಿತವಾಗಿ ಕಾರವಾರ ಬಂದರಿಗೆ.

Wed, 06 Dec 2023 05:57:21  Office Staff   SO News

ಕಾರವಾರ : ಅರಬ್ಬಿ ಸಮುದ್ರದಲ್ಲಿ ಇಂಜಿನ್ ಸಮಸ್ಯೆಯಿಂದ ಸಂಪರ್ಕ ಕಳೆದುಕೊಂಡಿದ್ದ  ಬೋಟು ಸುರಕ್ಷಿತವಾಗಿ ಬಂದರು ತಲುಪಿದೆ.

ಗೋವಾ ಮೂಲದ ಕ್ರಿಸ್ಟೋ ರೇ ಹೆಸರಿನ ಮೀನುಗಾರಿಕಾ ಬೋಟು ಸುಮಾರು 80ಮೀಟರ್ ಆಳ ಸಮುದ್ರದಲ್ಲಿ ಸಂಪರ್ಕ ಕಳೆದುಕೊಂಡು ನಾಪತ್ತಡಯಾಗಿತ್ತು. ಬೋಟಿನಲ್ಲಿ 26 ಮೀನುಗಾರರಿದ್ದರು‌.

ಎಂಜಿನ್ ಸಮಸ್ಯೆಯಿಂದ 4 ದಿನ ಸಮುದ್ರದಲ್ಲೇ ಕಾಲ ಕಳೆದಿದ್ದರು. ಬೋಟ್ ಸಂಪರ್ಕಕ್ಕೆ ಸಿಗದ ಕಾರಣಕ್ಕೆ ಬೋಟ್ ಮಾಲೀಕ ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡಿದ್ದರು. ಇದೀಗ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಬೋಟ್ ಪತ್ತೆ ಮಾಡಿದ್ದಾರೆ.

ಇನ್ನೊಂದು ಬೋಟ್ ನೆರವಿನಿಂದ ಕಾರವಾರ ಬಂದರಿಗೆ ಸುರಕ್ಷಿತವಾಗಿ ಎಲ್ಲಾ ಮೀನುಗಾರರು ತಲುಪಿದ್ದಾರೆ. 


Share: