ಚಿಕ್ಕಬಳ್ಳಾಪುರ,ಡಿಸೆಂಬರ್ 26: ಭಾರತೀಯ ಜನತಾ ಪಕ್ಷದ ಚಿಕ್ಕಬಳ್ಳಾಪುರ ಗ್ರಾಮಾಂತರ ಮಂಡಲದ ನೂತನ ಅಧ್ಯಕ್ಷರಾಗಿ ಚಿಕ್ಕನಹಳ್ಳಿಯ ನಾರಾಯಣಸ್ವಾಮಿ ಮತ್ತು ಪ್ರತಿನಿಧಿಯಾಗಿ ವಿಜಯಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಚನ್ನಕೇಶವ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಅಂತರಿಕ ಚುನಾವಣಾ ಸಭೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ, ಚುನಾವಣಾಧಿಕಾರಿಗಳಾದ ಶ್ರೀಮತಿ ಪೂರ್ಣಿಮಾ ಪ್ರಕಾಶ್, ರಾಜ್ಯ ಬಿಜೆಪಿ ವಿಭಾಗೀಯ ಸಂಘಟಕರಾದ ಪ್ರಭು ಕೊಪ್ಪಿಗಲ್, ಜಿಲ್ಲಾಧ್ಯಕ್ಷರಾದ ಸತ್ಯನಾರಾಯಣಮಹೇಶ್ ಇನ್ನಿತರ ಪಕ್ಷದ ಮುಖಂಡರ ಸಮ್ಮುಖದಲ್ಲಿ ಈ ಆಯ್ಕೆಯಾಯಿತು.
ಪಕ್ಷದ ಅಂತರಿಕ ಚುನಾವಣೆಗಳು ೨೩ ರಿಂದ ಜಿಲ್ಲೆಯಾದ್ಯಂತ ನಡೆದಿದ್ದು ಇಂದು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರ ಮತ್ತು ಗ್ರಾಮಾಂತರ ಮಂಡಲದ ಅಧ್ಯಕ್ಷರ ಆಯ್ಕೆಯಾಗಬೇಕಿದ್ದು ಕಾರಣಾಂತರದಿಂದ ನಗರ ಘಟಕದ ಅಧ್ಯಕ್ಷ ಸ್ಥಾನದ ಆಯ್ಕೆ ಮುಂದೂಡಲಾಗಿದ್ದು, ಗ್ರಾಮಾಂತರ ಮಂಡಲದ ಅಧ್ಯಕ್ಷರ ಆಯ್ಕೆ ನಡೆಯಿತು.
ಜಿಲ್ಲಾಧ್ಯಕ್ಷ ಸತ್ಯನಾರಾಯಣಮಹೇಶ್ ಮಾತನಾಡಿ, ದೇಶ ಕಂಡ ಪ್ರಬುದ್ದ ರಾಜಕಾರಣಿ ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನದಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಮಂಡಲದ ನೂತನ ಅಧ್ಯಕ್ಷರ ಆಯ್ಕೆ ನಿಜಕ್ಕೂ ಅದೃಷ್ಟವೆಂದೂ ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಪಕ್ಷವನ್ನು ಗ್ರಾಮೀಣ ಮಟ್ಟದಲ್ಲಿ ತಳ ಮಟ್ಟದಿಂದ ಸಂಘಟಿಸಬೇಕೆಂದು ನೂತನ ಅಧ್ಯಕ್ಷರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಿ.ವಿ.ಲೋಕೇಶ್, ಪಿ.ಎಂ.ರಘು, ನಾ.ಶಂಕರ್, ಎಪಿಎಂಸಿ ಅಧ್ಯಕ್ಷ ಆರ್.ಚಂದ್ರಶೇಖರ್, ಉಪಾಧ್ಯಕ್ಷ ಮೋಹನ್ ಮುರಳಿ, ಕೆ.ನಾರಾಯಣಪ್ಪ, ಜಿ.ಆರ್.ಹರಿಕುಮಾರ್, ಗೋಕುಲ್ ನಂಜಪ್ಪ, ಬೈರೇಗೌಡ, ಸಿ.ಎಸ್.ಮಂಜುನಾಥ್, ಸುಜಾತಭೂಷಣ್, ಪ್ರೇಮಲೀಲ, ಭಾರತಿ, ನಾಗಭೂಷಣ್, ವಿಜಯಕುಮಾರ್ ಇನ್ನಿತರರಿದ್ದರು.