ಭಟ್ಕಳ, ಅಕ್ಟೋಬರ್ 2: ಭಟ್ಕಳ ತಾಲೂಕಿನ ವ್ಯಾಪ್ತಿಯಲ್ಲಿ ಮಂಜೂರಾಗಿರುವ ಅಂಗನವಾಡಿ ಕೇಂದ್ರಗಳಿಗೆ ಗೌರವ ಕಾರ್ಯಕರ್ತೆಯರ ಹುದ್ದೆಗೆ ಎಸ್ಸೆಸ್ಸೆಲ್ಸಿ ಪಾಸಾದ ಹಾಗೂ ಅದೇ ಗ್ರಾಮದ/ಮೊಹಲ್ಲಾ/ಓಣಿಯ ರಹವಾಸಿ 18-44 ರ ವಯೋಮಿತಿ ಒಳಗಿನ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಯಾವುದೇ ಸಂದರ್ಶನವಿರುವುದಿಲ್ಲ. ಸ್ಥಳೀಯ ಅಭ್ಯರ್ಥಿ ಹಾಗೂ ಮೆರಿಟ್ ಆಧಾರದ ಮೇಲೆ ನಿಯಮಾನುಸಾರ ಆಯ್ಕೆ ಮಾಡಲಾಗುವುದು. ಅರ್ಜಿ ನಮೂನೆಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಿಂದ ಪಡೆದು ನಿಗದಿ ಪಡಿಸಿದ ದಿನಾಂಕದೊಳಗೆ ಅಗತ್ಯವಿರುವ ಎಲ್ಲಾ ದೃಢೀಕೃತ ದಾಖಲೆಗಳೊಂದಿಗೆ ಸ್ವತಃ ಕಛೇರಿಗೆ ತಲುಪಿಸಿ ಸ್ವೀಕೃತಿ ಪಡೆದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಅರ್ಜಿ ಆಹ್ವಾನಿಸಿರುವ ಅಂಗನವಾಡಿ ಕೇಂದ್ರಗಳ ಪಟ್ಟಿಯನ್ನು ಆಯಾ ಗ್ರಾಮಪಂಚಾಯತ/ಪುರಸಭೆ ಕಾರ್ಯಾಲಯಗಳಲ್ಲಿ ಪ್ರಕಟಿಸಲಾಗಿದ್ದು, ಪ್ರಸ್ಥಾಪಿತ ಅಂಗನವಾಡಿ ವ್ಯಾಪ್ತಿಯೊಳಗೆ ಇರುವ ಶಾಲೆಗಳಲ್ಲಿಯೂ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಸ್ಥಳೀಯರಾಗಿದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಪ.ಜಾತಿ/ಪ.ಪಂಗಡ/ಅಲ್ಪಸಂಖ್ಯಾತರಿಗೆ, ಅಂಗವಿಕಲರು, ವಿಧವೆಯರು, ಪರಿತ್ಯಕ್ತೆಯರಿಗೆ ನಿಯಮಾನುಸಾರ ಆದ್ಯತೆ ನೀಡಲಾಗುವುದು. ದೃಢೀಕೃತ ಎಲ್ಲ ದಾಖಲೆಗಳು ಲಗತ್ತಿಸಿದ್ದಲ್ಲಿ ಮಾತ್ರ ಅರ್ಜಿಯನ್ನು ಸ್ವೀಕರಿಸಲಾಗುವುದು. ಇಲ್ಲವಾದಲ್ಲಿ ಸ್ಥಳದಲ್ಲಿಯೇ ತಿರಸ್ಕರಿಸಲಾಗುವುದು.
ದಿನಾಂಕ 24-10-2009 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಆಯ್ಕೆ ಮಾಡಬೇಕಾದ ಗ್ರಾಮಗಳಲ್ಲಿ ಮಾವಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯ ದಿವಗೇರಿ-೨, ಶಿರಾಲಿ ಗ್ರಾಮಪಂಚಾಯತ ವ್ಯಾಪ್ತಿಯ ಬಂಡಿಕಾಶಿ, ಮಾರುಕೇರಿ ಗ್ರಾಮಪಂಚಾಯತ ವ್ಯಾಪ್ತಿಯ ಸುಳಕಂಟ, ಜಾಲಿ ಗ್ರಾಮಪಂಚಾಯತ ವ್ಯಾಪ್ತಿಯ ಹಿಂದೂ ಕಾಲೋನಿ ಹಾಗೂ ಹೆಗ್ಗ ಗೊಂಡರಕೇರಿ, ಬೆಂಗ್ರೆ ಗ್ರಾಮಪಂಚಾಯತ ವ್ಯಾಪ್ತಿಯ ಹೆದ್ದಾರಿ ಮನೆ, ಹಾಡುವಳ್ಳಿ ವ್ಯಾಪ್ತಿಯ ಕುಂಠವಾಣಿ ಹಾಗೂ ಅಸ್ರವಳ್ಳಿ, ಬೈಲೂರು ಗ್ರಾಮಪಂಚಾಯತ ವ್ಯಾಪ್ತಿಯ ಗುಡಿಗದ್ದೆ, ಮುಟ್ಟಳ್ಳಿ ವ್ಯಾಪ್ತಿಯ ಕಸಲಗದ್ದೆ, ಕಟಗಾರ ಪಂಚಾಯತ ವ್ಯಾಪ್ತಿಯ ಕುಚ್ಚೋಡಿ, ಪುರಸಭೆ ಗ್ರಾಮಪಂಚಾಯತ ವ್ಯಾಪ್ತಿಯ ಆಸರಕೇರಿ, ಯಲ್ವಡಿ ಕವೂರು ಪುರವರ್ಗ-೨(ಕೋಣೂರು) ಸೇರಿವೆ. ಬೆಂಗ್ರೆ ಗ್ರಾಮಪಂಚಾಯತ ವ್ಯಾಪ್ತಿಯ ಬಂಗಾರಮಕ್ಕಿ, ಹಾಡುವಳ್ಳಿಯ ಕುರುವಂದೂರು, ಮಾವಳ್ಳಿಯ ಪಟೇಲರಗದ್ದೆ, ಕೋಣಾರ ವ್ಯಾಪ್ತಿಯ ಹಲ್ಲಾರಿ, ಬೆಳಕೆ ಗ್ರಾಮಪಂಚಾಯತ ವ್ಯಾಪ್ತಿಯ ಶಿರಜ್ಜಿಮನೆ, ಕಾಯ್ಕಿಣಿ ವ್ಯಾಪ್ತಿಯ ಶಿರಾಣಿಕೇರಿ ಹಾಗೂ ಕಟಗಾರಕೊಪ್ಪದ ಹೆಗ್ಗದ್ದೆ ಮಿನಿ ಅಂಗನವಾಡಿ ಕೇಂದ್ರಗಳ ಪಟ್ಟಿಯನ್ನು ಸೇರಿವೆ ಎಂದು ಶಿಸು ಅಭಿವೃದ್ಧಿ ಯೋಜನಾಧಿಕಾರಿಗಳು, ಭಟ್ಕಳ ಇವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.