ಅನಿಮೇಶನ್, ಗೇಮಿಂಗ್ ಕ್ಷೇತ್ರದಲ್ಲಿ ರಾಜ್ಯಕ್ಕೆ ಅಗಾಧ ಅವಕಾಶ
ಬೆಂಗಳೂರು, ಏಪ್ರಿಲ್ ೨೩ ,೨೦೧೨ ರ ವೇಳೆಗೆ ಭಾರತದ ಅನಿಮೇಶನ್ ಕ್ಷೇತ್ರವು ಒಂದು ಬಿಲಿಯನ್ ಯುಎಸ್ ಡಾಲರ್‌ನಷ್ಟು ವಹಿವಾಟು ಮಾಡಲಿದೆ ಎಂದು ನಾಸ್‌ಕಾಂ ವರದಿ ಮಾಡಿದೆ ಎಂದು ಶ್ರೀ ಅಶೋಕ್‌ಕುಮಾರ್ ಮನೋಳಿಯವರು ತಿಳಿಸಿದರು.
ಕರ್ನಾಟಕ ಮಾಹಿತಿ ತಂತ್ರಜ್ಞಾನದಲ್ಲಿ ಮುಂಚೂಣಿ ರಾಜ್ಯವಾಗಿದ್ದು, ಅನಿಮೇಷನ್, ವಿಷುಯಲ್ ಎಫೆಕ್ಟ ಗೇಮಿಂಗ್ ಉದ್ಯಮದಲ್ಲಿ ಉತ್ತಮ ಅವಕಾಶ ಹೊಂದಿದೆ. ಅನಿಮೇಷನ್ ಕ್ಷೇತ್ರವು ಕನಸುಗಾರರ ಕ್ಷೇತ್ರವಾಗಿದ್ದು ಚಿತ್ರಕಲೆ, ಚಲನಚಿತ್ರ ಕ್ಷೇತ್ರದ ವಿದ್ಯಾರ್ಥಿಗಳಿಗೆ ಇಂದು ಕ್ರಿಯಾಶೀಲ ಜಗತ್ತಿನ ಹೊಸ ಆಯಾಮ ತೆರೆದಿಡಲಿದೆಯೆಂದು ಅವರು ತಿಳಿಸಿದರು. ಕರ್ನಾಟಕ ಅನಿಮೇಶನ್, ವಿಷುಯಲ್ ಎಫೆಕ್ಟ್ ಮತ್ತು ಗೇಮಿಂಗ್ ೨೦೧೦ ಶೃಂಗಸಭೆಯ ಉದ್ಫಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಹಾಲಿವುಡ್‌ನ ಇತ್ತೀಚಿನ ದಾಖಲೆ ಚಿತ್ರ ‘ಅವತಾರ್’ ನಲ್ಲಿ ಸ್ವಲ್ಪಮಟ್ಟಿಗೆ ಭಾರತದ ತಾಂತ್ರಿಕ ಸಹಕಾರದ ಪಾಲು ಸೇರಿದೆಯೆಂಬುದು ಹೆಮ್ಮೆಯ ಸಂಗತಿ.
ರಾಜ್ಯ ಸರ್ಕಾರದ ವತಿಯಿಂದ ಈ ಹೊಸ ತಾಂತ್ರಿಕ ಆಯಾಮದ ಬೆಳವಣಿಗೆಗೆ ಅಗತ್ಯ ಪ್ರೋತ್ಸಾಹ, ಒದಗಿಸಲಾಗುತ್ತದೆ. ಸರ್ಕಾರ-ಸಾರ್ವಜನಿಕ ಸಹಯೋಗದಲ್ಲಿ ಹೆಚ್ಚಿನ ಬೆಳವಣಿಗೆ ಅವಕಾಶ ಸಾಧ್ಯವಾಗುತ್ತದೆ ಎಂದರು. ಕರ್ನಾಟಕವು ಉತ್ತಮ ಮೂಲಭೂತ ಸೌಲಭ್ಯ, ಮಾರುಕಟ್ಟೆ ಹೊಂದಿದೆ. ಮುಂದಿನ ಹೆಜ್ಜೆ ಏನು ಎಂಬ ಬಗ್ಗೆ ಇಂದು ನಡೆಯುವ ಈ ಕಾರ್ಯಾಗಾರದಲ್ಲಿ ಸ್ಪಷ್ಟ ಅಭಿಪ್ರಾಯ ಹೊರಬರಲಿ. ಕರ್ನಾಟಕದಲ್ಲಿ ಇಂತಹ ಒಂದು ಮಹತ್ವದ ಪ್ರಯತ್ನಕ್ಕೆ ನಾಂದಿಯಾಗುತ್ತಿರುವುದು ಹೆಮ್ಮೆಯ ವಿಷಯವೆಂದರು.
ಅಸೋಸಿಯೇಷನ್ ಆಫ್ ಬೆಂಗಳೂರು ಅನಿಮೇಶನ್ ಇಂಡಸ್ಟ್ರಿಯ ಎಂ.ಆರ್. ಬಾಲಕೃಷ್ಣ ಮಾತನಾಡುತ್ತಾ ಈಗ ೨೦ ತರಬೇತಿ ಶಾಲೆಗಳಿದ್ದು ೧೦,೦೦೦ ವಿದ್ಯಾರ್ಥಿಗಳು ಈ ವಿಷಯ ತರಬೇತಿ ಪಡೆಯುತ್ತಿದ್ದಾರೆ. ೨೦೧೨ ರ ವೇಳೆಗೆ ೨೫,೦೦೦ ವಿದ್ಯಾರ್ಥಿಗಳೂ ೨೫ ಪ್ರೊಡಕ್ಷನ್ ಸ್ಟುಡಿಯೋಗಳು ತೆರೆಯಲಿವೆ. ಶಿಕ್ಷಣ ಕ್ಷೇತ್ರದಲ್ಲಿ ಈ ವಿಷಯವನ್ನು ಪರಿಚಯಿಸುವ ಅಗತ್ಯವಿದೆಯೆಂದರು.
ರೇಡಿಯೋ ಮಿರ್ಜಿಯ ಮಾಜಿ ಅಧ್ಯಕ್ಷರು ಹಾಗೂ ಈ ಮೀಡಿಯ ಮತ್ತು ಮನರಂಜನೆಯ ಸಮಾಲೋಚಕರಾದ ಶ್ರೀ ಎ.ಪಿ. ಪರಿಗಿ ಅವರು ಮಾತನಾಡಿದರು.
ನಿರ್ದೇಶಕರು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಶ್ರೀ ಅರವಿಂದ ಜನ್ನು ಅವರು ಸ್ವಾಗತಿಸಿದರು.