ಸಕಲೇಶಪುರ, ಡಿಸೆಂಬರ್ 18:ಆಯುರ್ವೇದ ಪದ್ದತಿಯಲ್ಲಿ ಚಿಕಿತ್ಸೆ ಅಡೆಯುವುದರಿಂದ ದೇಹದಮೇಲೆ ಯಾವುದೆ ರೀತಿಯ ಪಾರ್ಶ್ವ ತೊಂದರೆ ಇರುವುದಿಲ್ಲ ಹಾಗೂ ಈ ಚಿಕಿತ್ಸಾ ರೀತಿ ಪಾಲಿಸುವುದರಿಂದ ಶಿಸ್ತು ಬದ್ದ ಜೀವನ ಸಾಗಿಸಲು ಸಹಕಾರವಾಗುತ್ತದೆ ಎಂದು ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಅವರು ನಿನ್ನೆ ಸ್ಧಳೀಯ ಲಯನ್ಸ್ ಮತ್ತು ಲಯನೆಸ್ ಸಂಸ್ಧೆ, ಜಿಲ್ಲಾ ಶಯುಷ್ ಇಲಾಖೆ ಹಾಗೂ ಆರ್ಯವ್ಯದ್ಯ ಫಾರ್ಮಸಿ ಕೊಯಂಬತ್ತೂರ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚುತ ಆರೋಗ್ಯ ತಪಾಸಣೇ ಮತ್ತು ಆಯುರ್ವೇದ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿ ಆರ್ಷ ಬಾರತದ ಹಿಂದಿನ ಕಾಲದಿಂದಲೂ ಆಯುರ್ವೇದ ಪದ್ದತಿ ಜಾರಿಯಲ್ಲಿದ್ದೂ ಇಂದಿಗೂ ಜೀವಂತವಾಗಿದೆ ಇದಕ್ಕೆ ಕಾರಣ ಈ ಚಿಕಿತ್ಸಾ ಪದ್ದತಿಯೂ ಫಲಕಾರಿಯಾಗಿರುವುದರಿಂದ ಎಂದರು.
ಶಿಬಿರವು ಆಯುಷ್ ಇಲಾಖೆ ವ್ಯದ್ಯ ಡಾ| ಕೃಷ್ಣಪ್ರಸಾದ್ ಇವರು ಲಯನ್ ಸಂಸ್ಧೆ ವಲಯಾದ್ಯಕ್ಷ ಪ್ರಭಾಕರಣ್ ಅವರನ್ನು ತಪಾಸಣೆ ಮಾಡುವ ಮೂಲಕ ಉದ್ಘಾಟಿಸಿದರು. ಆಯುಷ್ ಇಲಾಖೆ ವ್ಯದ್ಯರುಗಳಾದ ಡ|ಲಕ್ಷಮಣ್ ಮಾನೆ,ಡಾ| ಸುನದರ್ ರಾಜ್,ಡಾ|ಲತ,ಮತ್ತು ಡಾ|ಪರಿಮಳ ಇವರುಗಳು ರೋಗಿಗಳನ್ನು ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.ಸುಮಾರು 500ಕ್ಕೂ ಹೆಚ್ಚು ಜನ ಶಿಬಿರದ ಪ್ರಾಯೋಜನ ಪಡೆದುಕೊಂಡರು.
ಲಯನ್ ಸಂಸ್ಧೆ ಅದ್ಯಕ್ಷ ಗಣೇಶ್ ಬಾಬು ,ಕಾರ್ಯದರ್ಶಿ ದಿನೇಶ್, ಖಜಾಂಚಿ ಸೂರ್ಯ. ಮಾನ್ಮಲ್ ಬಾಫ್ನಾ, ವಿಠಲ್. ಕೋಕಿಲಾ ಬಾಬು, ಕೋಮಲಾ ದಿನೇಶ್, ಅರುಣಾ ಭಾರ್ಗವಿ ಮುಂತಾದವರು ಉಪಸ್ಧಿತರಿದ್ದರು.