ಭಟ್ಕಳ, ಫೆಬ್ರವರಿ ೨೨: ಭಟ್ಕಳದ ಮೌಲಾನ ಅಬುಲ್ ಹಸನ್ ಅಲಿ ನದ್ವಿ ಇಸ್ಲಾಮಿಕ್ ಅಕಾಡಮಿಯು ಮಾ.೭ ರಂದು ಮುಸ್ಲಿi ಶಿಕ್ಷಣ ಸಂಸ್ಥೆಗಳ ಆಡಳಿತಮಂಡಳಿಯ ಮುಖ್ಯಸ್ಥರ ರಾಷ್ಟ್ರೀಯ ಮಟ್ಟದ ಒಂದು ದಿನದ ವಿಚಾರ ಸಂಕೀರ್ಣವನ್ನು ಆಯೋಜಿಸಿದ್ದು ದೇಶದ ನಾನಾ ಭಾಗಗಳಿಂದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾಂಸರು, ಶಿಕ್ಷಣ ತಜ್ಞರು ಭಾಗವಹಿಸಲಿದ್ಧಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಅಂದು ರಾತ್ರಿ ೯ಗಂಟೆಗೆ ಅಕಾಡೆಮಿಯ ಒಪನ್ ಇಸ್ಲಾಮಿಕ್ ಕೋರ್ಸ್ನ ಬಹುಮಾನ ಹಾಗೂ ಪ್ರಶಸ್ತಿಪ್ರದಾನ ಸಮಾರಂಭವೂ ಜರುಗಲಿದೆ ಎಂದು ವಿಚಾರಸಂಕೀರ್ಣ(ಸೆಮಿನಾರ್) ಸಮಿತಿಯ ಸಂಚಾಲಕ ಮೌಲಾನ ಮಖ್ಬೂಲ್ ಕೋಬಟ್ಟೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಸಮಿತಿಯ ಸಂಚಾಲಕ ಮೌಲಾನ ಕ್ವಾಜಾ ಮುಈನುದ್ದೀನ್ ಅಕ್ರಮಿ ಮದನಿ ನದ್ವಿ ಅಕಾಡೆಮಿ ಜಾರಿಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಿಚಾರಸಂಕೀರ್ಣದಲ್ಲಿ ಅಲಿಘಡ, ಲಖ್ನೋ, ಮುಂಬೈ, ಚೆನೈ,ಅಂಡೋಮಾನ್, ಪೂನಾ, ಬೆಂಗಳೂರು, ಗುಜರಾತ್ ಪಂಜಾಬ್, ಹರಿಯಾಣ, ಹೈದರಾಬಾದ್ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಶಾಲಾ ಕಾಲೆಜಿನ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಂಜುಮನ್ ಇಸ್ಲಾಮ್ ಮುಂಬೈ ಇದರ ಅಧ್ಯಕ್ಷ ಡಾ. ಝಹೀರ್ ಖಾಜಿ, ಆಝಾಮ್ ಕ್ಯಾಂಪಸ್ ಪೂನಾ ದ ಸ್ಥಾಪಕ ಡಾ. ಇನಾಮ್ದಾರ್, ದಾರುಲ್ ಉಲೂಮ್ ನದ್ವತುಲ್ ಉಲೇಮಾ ಲಖ್ನೋ ದಿಂದ ಮೌಲಾನ ಅಬ್ದುಲ್ಲಾ ಹಸನ್ ಮುಗೇಷಿ, ಮೌಲಾನ ರಿಯಾಝುರ್ರಹ್ಮಾನ್ ರಷಾದಿ ಬೆಂಗಳೂರು, ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಾ.೭ ರಂದು ಜಾಮಿಆ ಇಸ್ಲಾಮಿಯ ಜಾಮಿಅಬಾದ ನಲ್ಲಿ ರಾತ್ರಿ ಮೌಲಾನ ಅಬುಲ್ ಹಸನ್ ಅಲಿ ಓಪನ್ ಇಸ್ಲಾಮಿ ಕೋರ್ಸ್ನ ಇಸ್ಲಾಮಿಯಾತ್ ಪರೀಕ್ಷಗಳಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದ ಅವರು ಪ್ರಸಕ್ತ ವರ್ಷದ ಇಸ್ಲಾಮಿಯಾತ್ ಪರೀಕ್ಷೆಯಲ್ಲಿ ದೇಶಾದ್ಯಂತ ಇರುವ ೨೭೮ ಪರೀಕ್ಷಾ ಕೇಂದ್ರಗಳಲ್ಲಿ ೪೪,೬೪೫ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದರು. ಇದರಲ್ಲಿ ಶೇ%೪೦ ಕ್ಕೂ ಹೆಚ್ಚು ಮುಸ್ಲಿಮೇತರ ವಿದ್ಯಾರ್ಥಿಗಳು ಇಸ್ಲಾಮಿಯಾತ್ ಪರೀಕ್ಷೆಯನ್ನು ಬರೆದಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.