ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ವಿಜಾಪುರ: ಮಾರ್ಚ 10 ರಂದು ವಿದ್ಯುತ್ ವ್ಯತ್ಯಯ

ವಿಜಾಪುರ: ಮಾರ್ಚ 10 ರಂದು ವಿದ್ಯುತ್ ವ್ಯತ್ಯಯ

Sat, 06 Mar 2010 15:14:00  Office Staff   S.O. News Service

ವಿಜಾಪುರ, ಮಾರ್ಚ ೬ - ದಿನಾಂಕ : ೧೦-೦೩-೨೦೧೦ ರಂದು ೧೧೦ ಕೆ.ವ್ಹಿ ಬಾಗಲಕೋಟ-ಬ.ಬಾಗೇವಾಡಿ ಲೈನ್ ೧ ಮತ್ತು ೨ರ ಮೇಲೆ ತುರ್ತು ಕೆಲಸ ಇರುವುದರಿಂದ, ೧೧೦ ಕೆ.ವ್ಹಿ ಮುಕರ್ತಿಹಾಳ, ೧೧೦ ಕೆ.ವ್ಹಿ. ನಿಡಗುಂದಿ ಮತ್ತು ೧೧೦ ಕೆ.ವ್ಹಿ. ಮುದ್ದೇಬಿಹಾಳ ಹಾಗೂ ೧೧೦ ಕೆ.ವ್ಹಿ. ಎ.ಎಲ್.ಬಿ.ಸಿ. ಇ.ಹೆಚ್.ಟಿ ವಿದ್ಯುತ್ ಕೇಂದ್ರಗಳಿಂದ ಹೊರಹೊಮ್ಮುವ ಎಲ್ಲಾ ೧೧ ಕೆ.ವ್ಹಿ. ಫೀಡರುಗಳಿಗೆ, ದಿನಾಂಕ : ೧೦-೦೩-೨೦೧೦ ರಂದು ಬೆಳಿಗ್ಗೆ ೧೦.೦೦ ಘಂಟೆಯಿಂದ ಮಧ್ಯಾಹ್ನ ೨.೦೦ ಘಂಟೆಯವರೆಗೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯವಾಗುವುದು.ಕಾರಣ ಈ ವಿದ್ಯುತ್ ಕೇಂದ್ರಗಳ ಮೇಲೆ ಬರುವ ನಿಡಗುಂದಿ, ಮುಕರ್ತಿಹಾಳ, ಮುದ್ದೇಬಿಹಾಳ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಹಕರು ಸಹಕರಿಸಲು ಕಾರ್ಯನಿರ್ವಾಹಕ ಅಭಿಯಂತರರು (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ಹೆಸ್ಕಾಂ ವಿಜಾಪೂರ ರವರು ಕೋರಿದ್ದಾರೆ.

 


Share: