ಧಾರವಾಡ,ಏ,೨೭: ಅಪರ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಅರ್ಹವಿರುವ ಬಾರ್ ಅಸೋಸಿಯೇಶನ್ ಸದಸ್ಯರಿಂದ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿದಾರರು ಸ್ಥಳೀಯ ಬಾರ್ ಅಸೋಶಿಯೇಶನ್‌ದ ಸದಸ್ಯರಾಗಿರಬೇಕು ಮತ್ತು ಕನಿಷ್ಠ ೧೦ ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ವಕೀಲ ವೃತ್ತಿಯಲ್ಲಿ ಅನುಭವವಿರಬೇಕು.
ನೇಮಕಾತಿಯು ಕರ್ನಾಟಕ ಕಾನೂನು ಅಧಿಕಾರಿಗಳ ನೇಮಕಾತಿ ಷರತ್ತು ನಿಯಮಗಳು ೧೯೭೭ರಲ್ಲಿ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಸ್ಥಳೀಯ ಬಾರ್ ಅಸೋಶಿಯೇಶನದ ಅರ್ಹ ಸದಸ್ಯರು ಅರ್ಜಿಯನ್ನು ತುಂಬಿ ಮೇ ೨೫ ರೊಳಗಾಗಿ ಜಿಲ್ಲಾಧಿಕಾರಿಗಳು,ಧಾರವಾಡ ಇವರ ಕಾರ್ಯಾಲಯಕ್ಕೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.