ಉಜಿರೆ, ನವೆಂಬರ್ 25: ವಿಶ್ವ ತುಳು ಸಮ್ಮೇಳನದ ಪ್ರಧಾನ ಕಛೇರಿಯಲ್ಲಿ ಸಮ್ಮೇಳನಾಧ್ಯಕ್ಷ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 62 ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಈ ಸಂಧರ್ಭದಲ್ಲಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಡಾ. ಮೋಹನ್ ಆಳ್ವ ಪುಷ್ಪಗುಚ್ಚ ನೀಡಿ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಈ ಸಂಧರ್ಭದಲ್ಲಿ ಸಮ್ಮೇಳನದ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಸೋನಿಯಾ ವರ್ಮ, ರಾಜರ್ಷಿ ಹೆಗಡೆ, ಸುದರ್ಶನ ಜೈನ್, ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಶ್ರೀಹರಿ, ಶ್ರೀ ಮಹಾವೀರ ಅಜ್ರಿ, ಶ್ರೀ ಶ್ರೀನಾಥ್, ಜಿಲ್ಲಾ ಜಾನಪದ ಗೊಬ್ಬುಗಳ ಸಂಚಾಲಕ ಪದ್ಮನಾಭ ಶೆಟ್ಟಿ, ಡಾ. ಜಯಕುಮಾರ್, ಉಷಾ ಲಕ್ಷ್ಮಣ ಗೌಡ, ಶ್ರೀಮತಿ ಸವಿತಾ ಜಯದೇವ್, ಸೋಮಶೇಖರ ಶೆಟ್ಟಿ, ಪುತ್ತಿಲ ಜಯರಾಜ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.