ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕುಂದಾಪುರ: ಮೇ೯ರಂದು ತಾಲೂಕು ಸಾಹಿತ್ಯ ಸಮ್ಮೇಳನ

ಕುಂದಾಪುರ: ಮೇ೯ರಂದು ತಾಲೂಕು ಸಾಹಿತ್ಯ ಸಮ್ಮೇಳನ

Mon, 03 May 2010 17:39:00  Office Staff   S.O. News Service

ಕುಂದಾಪುರ, ಮೇ ೩: ಮೇ೯ರ ಭಾನುವಾರ ಗೋಪಾಡಿಯಲ್ಲಿ ೧೦ನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಗೋಪಾಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.

 

ಗೋಪಾಡಿಯ ಕಾಂತೇಶ್ವರ ದೇವಸ್ಥಾನದ ಎದುರಿನ ವಠಾರದಲ್ಲಿ ನಡೆಯಲಿರುವ ಸಮ್ಮೇಳನವನ್ನು ಚಿತ್ರ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಉದ್ಘಾಟಿಸುವರು. ಅಧ್ಯಕ್ಷತೆ ಕವಿ ದುಂಡಿರಾಜರದು. ಕುಂಭಾಸಿ ವಿನಾಯಕ ದೇವಳದ ಆಡಳಿತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯ ಮೆರವಣಿಗೆಗೆ ಚಾಲನೆ ನೀಡುವರು. ಕುಂದಕನ್ನಡ ಗೋಷ್ಠಿ, ಸುಗಮ ಸಂಗೀತ ಗಾಯನ, ವೈದ್ಯಕೀಯ ಸಾಹಿತ್ಯ ವಿಚಾರಗೋಷ್ಠಿ, ತಾಲೂಕಿನ ಸಾಹಿತಿಗಳ ಸಂಸ್ಮರಣೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಗುವುದು. ಸಂಜೆ ೭ರಿಂದ ಗೋಪಾಡಿಯ ಯುವಕ ಮಂಡಲ, ಸಹನಾ ಯುವತಿ ಮಂಡಳಿಗಳಿಂದ ವೀರಗಾಸೆ, ಕೋಲಾಟ, ದೊಂದಿ ಬೆಳಕಿನ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಕುರಿತು ಸೋಮವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಪತ್ರಕರ್ತ ಯು.ಎಸ್.ಶೆಣೈ ವಿವರ ನೀಡಿದರು. ಕ.ಸಾ.ಪ ತಾಲೂಕು ಅಧ್ಯಕ್ಷ ಕೆ.ರಮಾನಂದ ಕಾಮತ್, ಆರ್ಥಿಕ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದರು. ಕ.ಸಾ.ಪ ಕಾರ್ಯದರ್ಶಿ ಪ್ರಸನ್ನ ಕುಮಾರ ಐತಾಳ ವಂದಿಸಿದರು.

 

 

ವರದಿ: ನೊಯೆಲ್ ಚುಂಗಿಗುಡ್ಡೆ


Share: