ಮಂಗಳೂರು, ಅ.3: ರಾಜ್ಯ ಹಜ್ಜ್ ಕಮಿಟಿ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಹಜ್ಜ್ ಯಾತ್ರೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಇದೇ ಮೊತ್ತ ಮೊದಲ ಬಾರಿಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಯ ಸುಮಾರು 700 ಹಜ್ಜ್ ಯಾತ್ರಾರ್ಥಿಗಳು ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಹಜ್ಜ್ ಯಾತ್ರೆ ಕೈಗೊಳ್ಳಲಿದ್ದಾರೆ.
ಹಜ್ಜ್ ಕಮಿಟಿ ಮೂಲಕ ಈ ನಾಲ್ಕು ಜಿಲ್ಲೆಗಳಿಂದ ಈವರೆಗೆ ತೆರಳಿದ ಎಲ್ಲ ಹಜ್ಜ್ ಯಾತ್ರಾರ್ಥಿಗಳು ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಕ್ಯಾಂಪ್ ಹೂಡಿ ನಂತರ ವಿಮಾನವೇರಿ ಸೌದಿ ಅರೇಬಿಯಾದ ಜಿದ್ದಾ ತಲುಪುತ್ತಿದ್ದರು. ಆದರೆ ಈ ವರ್ಷ ದಿಂದ ರಾಜ್ಯ ಹಜ್ಜ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಗೌಸ್ (ದಾದಾ ಸಾಬ್) ಮತ್ತು ಸ್ಥಳೀಯ ಜನಪ್ರತಿನಿಧಿಗಳು, ಮುಸ್ಲಿಂ ಸಂಘಟನೆಗಳ ಪ್ರಮುಖರ ವಿಶೇಷ ಮುತುವರ್ಜಿಯಿಂದಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳಸಲಿದ್ದಾರೆ.
ವಿಶೇಷ ವಿಮಾನ
ಅಕ್ಟೋಬರ್ 25 ರಿಂದ ನವೆಂಬರ್ 20 ರೊಳಗೆ 6 ವಿಶೇಷ ವಿಮಾನದಲ್ಲಿ 700 ಹಜ್ಜ್ ಯಾತ್ರಾರ್ಥಿಗಳು ಮಂಗಳೂರಿ ನಿಂದ ಜಿದ್ದಾಕ್ಕೆ ತೆರಳಲಿದ್ದು, ಡಿಸೆಂಬರ್ ಮೊದಲ ವಾರದಿಂದ 2010 ರ ಜನವರಿ ಮೊದಲ ವಾರದೊಳಗೆ ಜಿದ್ದಾದಿಂದ ಮಂಗಳೂರಿಗೆ ಮರಳಲಿದ್ದಾರೆ.
ಭರದ ಸಿದ್ಧತೆ
ಇದೇ ಮೊತ್ತ ಮೊದಲ ಬಾರಿಗೆ ಮಂಗಳೂರು ವಿಮಾನ ನಿಲ್ದಾಣ ದಿಂದ ನೇರ ಹಜ್ಜ್ ಯಾತ್ರೆ ಕೈಗೊಳ್ಳುವುz ರಿಂದ ಸಂಬಂಧಪಟ್ಟ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು ಜತೆಗೂಡಿ ಭರದ ಸಿದ್ಧತೆ ನಡೆಸುತ್ತಿದ್ದಾರೆ.
ಈಗಾಗಲೇ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು, ರಾಜ್ಯ ಹಜ್ಜ್ ಕಮಿಟಿ ಅಧ್ಯಕ್ಷರು, ಸದಸ್ಯರು ಮೂರು ಸಭೆ ನಡೆಸಿದ್ದು, ಅ.7ರಂದು ಮಧ್ಯಾಹ್ನ ಬಜ್ಪೆ ವಿಮಾನ ನಿಲ್ದಾಣದ ಕಚೇರಿಯಲ್ಲಿ ಇನ್ನೊಂದು ಸಭೆ ನಡೆಯಲಿದೆ ಎಂದು ಹೇಳಲಾಗಿದೆ.
ಹಜ್ಜ್ ಕ್ಯಾಂಪ್
ಹಜ್ಜ್ ಯಾತ್ರಾರ್ಥಿಗಳ ವಸತಿ ಮತ್ತಿತರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಬಜ್ಪೆಯ ಖಾಸಗಿ ಶಾಲೆಯ ಆವರಣದಲ್ಲಿ ಹಜ್ಜ್ ಕ್ಯಾಂಪ್ ಮಾಡಲು ನಿರ್ಧರಿಸಲಾಗಿದೆ. ಈ ಹಿಂದೆ ಹಜ್ಜ್ ಕಮಿಟಿ ಅಧ್ಯಕ್ಷ ಮಹಮ್ಮದ್ ಗೌಸ್ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ, ಬಜ್ಪೆ, ಉಳ್ಳಾಲ ಮತ್ತಿತರ ಕಡೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳ ಸಲಹೆ, ಸೂಚನೆ ಯಂತೆ ಬಜ್ಪೆ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲೇ ಇರುವ ಬಜ್ಪೆ ಮಸೀದಿ- ಖಾಸಗಿ ಶಾಲೆಯ ಆವರಣದಲ್ಲಿ ಹಜ್ಜ್ ಯಾತ್ರಾರ್ಥಿಗಳಿಗೆ ವಸತಿ ಮತ್ತಿತರ ವ್ಯವಸ್ಥೆ ಕಲ್ಪಿಸಲಾಗಿದೆ.
ಅ.7ಕ್ಕೆ ಚುಚ್ಚು ಮದ್ದು: ವೈ.ಮುಹಮ್ಮದ್ ಕುಂಞಿ
ಹಜ್ಜ್ ಯಾತ್ರಾರ್ಥಿಗಳಿಗೆ ಅ.7ರಂದು ಕೋಡಿಯಾಲ್ಬೈಲ್ನಲ್ಲಿರುವ ಯೆನೆಪೋಯ ಆಸ್ಪತ್ರೆಯಲ್ಲಿ ಚುಚ್ಚು ಮದ್ದು ನೀಡಲಾಗುತ್ತದೆ. ಹಜ್ಜ್ ಯಾತ್ರಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ದ.ಕ. ಜಿಲ್ಲಾ ವಕ್ಫ್ ಬೋರ್ಡಿನ ಅಧ್ಯಕ್ಷ ಅಲ್ಹಾಜ್ ಯೆನೆಪೋಯ ವೈ. ಮುಹಮ್ಮದ್ ಕುಂಞಿ ಮನವಿ ಮಾಡಿದ್ದಾರೆ.
ಹೆಮ್ಮೆಯ ವಿಚಾರ: ಮುಹಮ್ಮದ್ ಗೌಸ್
ಇದುವರೆಗೆ ಈ ಭಾಗದ ಹಜ್ಜ್ ಯಾತ್ರಾರ್ಥಿಗಳು ಬೆಂಗಳೂರಿಗೆ ತೆರಳಿ, ಕ್ಯಾಂಪ್ ಹೂಡಿ ನಂತರ ವಿಮಾನ ಏರಬೇಕಾಗಿತ್ತು. ಇದರಿಂದ ಯಾತ್ರಾರ್ಥಿ ಗಳಲ್ಲದೆ ಅವರ ಕುಟುಂಬಸ್ಥರಿಗೂ ತೊಂದರೆಯಾಗುತ್ತಿತ್ತು. ಆದರೆ, ಈ ವರ್ಷದಿಂದ ನಾಲ್ಕು ಜಿಲ್ಲೆಗಳ ಯಾತ್ರಾರ್ಥಿಗಳಿಗೆ ಮಂಗಳೂರಿನಿಂದಲೇ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಇದು ನಮಗೆ ಹೆಮ್ಮೆಯ ವಿಚಾರ ಎಂದು ಹಜ್ಜ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಗೌಸ್ ಪತ್ರಿಕೆಗೆ ತಿಳಿಸಿದ್ದಾರೆ.