ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶಿರಸಿಯ ಶಾಲ್ಮಲಾ ನದಿಯಲ್ಲಿ ಘೋರ ದುರಂತ. ನೀರಿನಲ್ಲಿ ಮುಳುಗಿ ಐವರ ಸಾವು.

ಶಿರಸಿಯ ಶಾಲ್ಮಲಾ ನದಿಯಲ್ಲಿ ಘೋರ ದುರಂತ. ನೀರಿನಲ್ಲಿ ಮುಳುಗಿ ಐವರ ಸಾವು.

Mon, 18 Dec 2023 02:52:12  Office Staff   SO News

ಶಿರಸಿ : ತಾಲೂಕಿನ ಭೈರುಂಬೆ ಗ್ರಾಮದಲ್ಲಿ ಪಿಕ್ನಿಕ್ಗೆ‌ ಹೋದ ಐವರು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಭಾನುವಾರ ನಡೆದಿದೆ. 

 ಒಂದೇ ಕುಟುಂಬದ ಐವರು ನದಿಯಲ್ಲಿ ಮುಳುಗಿದವರು. ಎಲ್ಲರೂ ಶಿರಸಿಯ ರಾಮನಬೈಲ್‌ ಹಾಗೂ ಕಸ್ತೂರಬಾ ನಗರ ನಿವಾಸಿಗಳಾಗಿದ್ದು ಇಂದು ಪಿಕ್ನಿಗೆಂದು ತೆರಳಿದ್ದರು. ರಾಮನಬೈಲಿನ ನಿವಾಸಿಗಳಾದ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ನಾದಿಯಾ ನೂರ್ ಅಹಮದ್ ಶೇಖ್ (20), ನಬಿಲ್ ನೂರ್ ಅಹಮದ್ ಶೇಖ್(22), ವಿದ್ಯಾರ್ಥಿ ಉಮರ್ ಸಿದ್ದಿಕ್ (14) ಹಾಗೂ ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಬಾ ತಬಸುಮ್ (21) ಸಾವಿಗೀಡಾದವರಾಗಿದ್ದಾರೆ. 

ಮಗುವೊಂದು ಆಟ ಆಡುವಾಗ ನದಿಗೆ ಬಿದ್ದಿತ್ತು. ರಕ್ಷಣೆಗಾಗಿ ಸಲೀಮ್ ಅವರು ನದಿಗೆ ದುಮುಕಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಗು ರಕ್ಷಣೆಗೆ ಗಾಬರಿಗೊಂಡು ಉಳಿದವರೂ ನದಿಗೆ ಧುಮುಕಿದ್ದಾರೆ. ನೀರಿನ ಸುಳಿಗೆ ಸಿಲುಕಿ ಐವರು ಕಣ್ಮರೆಯಾಗಿದ್ದಾರೆ. 

 ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಲೀಮ್ ಕಲೀಲ್ ರೆಹಮಾನ್ ಮತ್ತು ನಾದಿಯಾ ನೂರ್ ಮೃತದೇಹ ಸಿಕ್ಕಿದೆ. ಇನ್ನೂ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಘಟನೆಗೆ ಸಂಬಂಧಪಟ್ಟಂತೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Share: