ಬೆಂಗಳೂರು, ಫೆಬ್ರವರಿ ೮ : ರಾಜ್ಯದ ಕೈಗಾರಿಕೆಗಳು ಹಸಿರು ತಂತ್ರಜ್ಞಾನ ವಲಯವನ್ನು ಅಳವಡಿಸಿಕೊಂಡು ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಮುಂದಾಗಬೇಕು ಎಂದು ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಎ.ಎಸ್. ಸದಾಶಿವಯ್ಯ ಕರೆ ನೀಡಿದ್ದಾರೆ.
ನಗರದಲ್ಲಿ ಭವಿಷ್ಯದಲ್ಲಿ ವಾಯು ಮಾಲಿನ್ಯ ನಿರ್ವಹಣೆ ಮತ್ತು ಅನುಷ್ಠಾನ ಕುರಿತ ೨ ದಿನಗಳ ರಾಷ್ಟ್ರೀಯ ಕಾರ್ಯಗಾರದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಾಗತೀಕರಣ ಮತ್ತು ನಗರೀಕಣದ ಪ್ರಭಾವದಿಂದ ನಗರ ಪ್ರದೇಶಗಳಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಆರಂಭಗೊಳ್ಳುತ್ತಿವೆ. ಆದ್ದರಿಂದ ಹಸಿರು ತಂತ್ರಜ್ಞಾನವನ್ನು ಕೈಗಾರಿಕೆಗಳು ಅಳವಡಿಸಿಕೊಂಡರೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೇಳಿದರು.
ನಗರಗಳಲ್ಲಿ ವಾಹನ ದಟ್ಟಣೆ, ವಾಹನ ಸಂಚಾರ ಹಾಗೂ ವಾಯು ಮಾಲಿನ್ಯದಿಂದ ಜನತೆ ತೀವ್ರ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ನಗರಗಳಲ್ಲಿ ಸಾರ್ವಜನಿಕರು ಸ್ವತ: ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ವಾಹನವನ್ನು ಬಳಸಿದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.